ವಿಜಯನಗರ: ಇಲ್ಲಿನ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿ ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಘಟನೆ ನಡೆದಿದೆ. ಬ್ಯಾಸಿಗಿದೇರಿ ಗ್ರಾಮದ ನಿವಾಸಿ ಎಲಿಗಾರ ರವಿ (27) ಕೊಲೆಮಾಡಿರುವ ಆರೋಪಿ. ದೀಪಾ (22) ಕೊಲೆಯಾದ (Murder Case) ದುರ್ದೈವಿ.
ಪತ್ನಿ ದೀಪಾ ಸಂಬಂಧಿಕನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ರವಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿಯನ್ನು ಕೊಂದು ಆ ಬಳಿಕ ನಂದಿಪುರದ ಆಕೆಯ ಸಂಬಂಧಿಕರೊಬ್ಬರ ಮನೆ ಮುಂದೆ ಮೃತದೇಹ ಎಸೆದು ಹೋಗಿದ್ದಾನೆ.
ತಂಬ್ರಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪತಿ ರವಿಕುಮಾರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮೃತ ಮಹಿಳೆಯ ಸಂಬಂಧಿಗಳು ನೀಡಿದ ದೂರಿನ ಆಧಾರದ ಮೇಲೆ ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ | Murder Case | ಅದು ಅಪಘಾತವಲ್ಲ ಕೊಲೆ; ಪ್ರಿಯಕರನ ಪ್ರೇಮಪಾಶಕ್ಕೆ ಸಿಲುಕಿ ಪ್ರಾಣಕಾಂತನ ಜೀವ ತೆಗೆದಳು