Site icon Vistara News

Road Accident : ಸಿಲಿಂಡರ್‌ ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ; ಸಪ್ಲೈಯರ್‌ ಸ್ಥಳದಲ್ಲೇ ಸಾವು

Vehicle carrying cylinder overturns Supplier dies on the spot

ವಿಜಯನಗರ: ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿಯಾಗಿದೆ. ಪರಿಣಾಮ ಸಿಲಿಂಡರ್ ಸಪ್ಲೈಯರ್ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹಿರೇಹಡಗಲಿ ಗ್ರಾಮದ ಬೀರಬ್ಬಿ ಕಾಶಿಂ ಸಾಬ್ (40) ಮೃತ ದುರ್ದೈವಿ.

ಹಿರೇಹಡಗಲಿ ಹಾಗೂ ಹಗರನೂರು ದಾರಿ ಮಧ್ಯೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ವಾಹನ ಪಲ್ಟಿಯಾಗಿದೆ. ಹಿರೆಹಡಗಲಿ ಮೂಲಕ ವಿವಿಧ ಗ್ರಾಮಗಳಿಗೆ ಕಾಶಿಂಸಾಬ್ ಸಿಲಿಂಡರ್ ಸರಬರಾಜು ಮಾಡುತ್ತಿದ್ದರು. ಪಲ್ಟಿಯಾದ ವಾಹನ ಹಿರೇಹಡಗಲಿ ಗ್ರಾಮ ಭಾರತ್ ಗ್ಯಾಸ್ ಏಜೆನ್ಸಿಗೆ ಸೇರಿದ್ದು ಎನ್ನಲಾಗಿದೆ.

ಅದೃಷ್ಟವಶಾತ್‌ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಸ್ಫೋಟಗೊಂಡಿಲ್ಲ. ಸಿಲಿಂಡರ್‌ ವಾಹನ ಪಲ್ಟಿಯಾದ ವೇಳೆ ಅಕ್ಕ-ಪಕ್ಕ ಯಾರು ಇರಲಿಲ್ಲ. ಇಲ್ಲದಿದ್ದರೆ ಇನ್ನಷ್ಟು ಸಾವು-ನೋವಿಗೆ ಕಾರಣವಾಗುತ್ತಿತ್ತು. ಸ್ಥಳಕ್ಕೆ ಹಿರೇಹಡಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಕಾರಿನ ಡೋರ್‌ ಬಡಿದು ನಿಮ್ಹಾನ್ಸ್‌ ನೌಕರ ಸಾವು; ಯುವಕರಿಬ್ಬರ ಜೀವ ತೆಗೆದ ಬೈಕ್‌

ಬೆಂಗಳೂರು/ಕೋಲಾರ: ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ದಾರಣವಾಗಿ (Road Accident ) ಮೃತಪಟ್ಟಿದ್ದಾರೆ. ಬೆಂಗಳೂರಿನ ತಿಲಕ್‌ನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ವೆಂಕಟೇಶ್ (53) ಮೃತ ದುರ್ದೈವಿ.

ವೆಂಕಟೇಶ್‌ ಅವರು ನಿಮ್ಹಾನ್ಸ್‌ನಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದರು. ನಿಮ್ಹಾನ್ಸ್‌ ಕಡೆಯಿಂದ ವೆಂಕಟೇಶ್ ಮನೆಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಕಾರಿನ ಡೋರ್ ಅನ್ನು ದಿಢೀರ್ ತೆಗೆದಿದ್ದಾರೆ. ಪರಿಣಾಮ ಕಾರ್‌ ಡೋರ್‌ ಬಡಿದು ವೆಂಕಟೇಶ್ ತಲೆಗೆ ಗಂಭೀರ ಗಾಯವಾಗಿತ್ತು.

ಕೂಡಲೇ ಸ್ಥಳೀಯರೆಲ್ಲರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ವೆಂಕಟೇಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮೈಕೊಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Water Crisis: ಬೆಂಗಳೂರಿಗರೇ ಹುಷಾರ್.. ಹೋಳಿ ಹಬ್ಬಕ್ಕೆ ನೀರಲ್ಲಿ ಜಾಲಿ ಮಾಡಿದ್ರೆ ಬೀಳುತ್ತೆ ಕೇಸ್‌

ಕೋಲಾರದಲ್ಲಿ ಟೆಂಪೋಗೆ ಬೈಕ್‌ ಡಿಕ್ಕಿ; ಇಬ್ಬರು ಸಾವು

ಟೆಂಪೋಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಂಗನೂರು ಬಳಿ ಘಟನೆ ನಡೆದಿದೆ. ಬಂಗಾರಪೇಟೆ ಪಟ್ಟಣದ ನಿವಾಸಿ ಸಿದ್ದಾರ್ಥ (26), ಮಂಡ್ಯ ಮೂಲದ ರವಿ (30) ಎಂಬುವವರು ಮೃತಪಟ್ಟಿದ್ದಾರೆ.

ಬೆಂಗನೂರು ಬಳಿಯ ಖಾಸಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮುಗಿಸಿ ವಾಪಸ್ ಆಗುವ ವೇಳೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version