Site icon Vistara News

Sexual Accusation | ನ್ಯಾಯ ಕೇಳಲು ಬಂದ ವ್ಯಕ್ತಿಯ ಮಗಳನ್ನೇ ಮಂಚಕ್ಕೆ ಕರೆದ ಕಾನ್‌ಸ್ಟೇಬಲ್‌ ಅಮಾನತು

harrassment

ವಿಜಯನಗರ: ಪೊಲೀಸ್‌ ಠಾಣೆಗೆ ಹೋಗುವುದ ತಮಗೆ ಆದ ಅನ್ಯಾಯಕ್ಕೆ ನ್ಯಾಯ ಕೇಳಲು. ಆದರೆ, ಪೊಲೀಸ್‌ ಠಾಣೆಯಲ್ಲಿರುವ ಪೊಲೀಸರೇ ಅನ್ಯಾಯ ಮಾಡಿದರೆ? ಹೀಗೊಂದು ಘಟನೆ ನಡೆದಿರುವುದು ವಿಜಯನಗರ ಜಿಲ್ಲೆಯ ಕೊಟ್ಟೂರು ಠಾಣೆಯಲ್ಲಿ.

ಕೆಲವು ಸಮಯದ ಹಿಂದೆ ಕೊಟ್ಟೂರು ಠಾಣೆಗೆ ದೂರು ಕೊಡಲು ಬಂದಿದ್ದ ವ್ಯಕ್ತಿಯನ್ನು ಚೆನ್ನಾಗಿ ಮಾತನಾಡಿಸಿದ ಅಲ್ಲಿನ ಕಾನ್‌ಸ್ಟೇಬಲ್‌ ಆತನ ಮಗಳನ್ನೇ ಮಂಚಕ್ಕೆ (Sexual Accusation) ಕರೆದಿದ್ದಾನೆ. ಈ ರೀತಿ ಮಾಡಿದ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಮಾರೆಪ್ಪನನ್ನು ಅಮಾನತು ಮಾಡಲಾಗಿದೆ. ಇವನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಂಗಾರಕ್ಕನ ಗುಡ್ಡದ ನಿವಾಸಿ.

ಈತ ದೂರು ನೀಡಲು ಬಂದ ವ್ಯಕ್ತಿಯ ಮಗಳ ಜತೆಗೆ ಅಸಭ್ಯ ವರ್ತನೆ ತೋರಿದ್ದ. ಮಗಳ ಜತೆ ಸಂಬಂಧ ಬೆಳೆಸಲು ಅವಕಾಶ ನೀಡಿದರೆ ಕೇಸ್ ನಿಮ್ಮ ಕಡೆ ಮಾಡುತ್ತೇನೆಂದು ಹೆಡ್ ಕಾನ್‌ಸ್ಟೇಬಲ್‌ ಹೇಳಿದ್ದ. ಜತೆಗೆ, ಜಾತಿ ವಿಚಾರ ಬಳಸಿ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದ್ದ. ಮೊಬೈಲ್ ಕರೆ ಮಾಡಿ ಲೈಂಗಿಕ ಕ್ರಿಯಗೆ ಸಹಕರಿಸುವಂತೆ ಒತ್ತಾಯ ಮಾಡಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ತೆಲುಗಿನಲ್ಲಿ ಸಂಭಾಷಣೆ ಮಾಡಿದ್ದ ಮಾರೆಪ್ಪ, ಯುವತಿಗೆ ʻʻನಿನ್ನ ಮೇಲೆ ಮನಸ್ಸಾಗಿದೆ ಎಲ್ಲಾದರೂ ಹೋಗಿ ಇಬ್ಬರು ಸೇರೋಣʼʼ ಎಂದು ಒತ್ತಾಯಿಸಿದ್ದ.

ಲೈಂಗಿಕ ಸಮ್ಮತಿಗೆ ಒತ್ತಾಯ ದೂರಿನ ಮೇರೆಗೆ ಪೋಲಿಸ್‌ ಮಲೆ ಸಿ.ಆರ್.ಪಿ.ಸಿ ನಂ. 188/20 ಕಲಂ 354/35 4(A) (2) ಐಪಿಸಿ ಅಡಿಯಲ್ಲಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Sexual Harassment | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಆರೋಪಿಗಳನ್ನು ಹಿಡಿದು ಥಳಿಸಿದ ಪೋಷಕರು

Exit mobile version