ವಿಜಯನಗರ: ಮನೆಯನ್ನು ದೋಚುವುದು, ಬ್ಯಾಂಕ್‌ಗೆ ಕನ್ನ ಹಾಕುವುದು, ಎಟಿಎಂ ಒಡೆಯುವುದು ಕೇಳಿದ್ದೇವೆ. ಈ ಬಾರಿ ವಿದ್ಯುತ್ ಇಲಾಖೆ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿ ಕೌಂಟರ್‌ನ ಲಾಕರನ್ನೇ ಕತ್ತರಿಸಿ ಹಣ ದೋಚಲಾಗಿದೆ.
ಹೊಸಪೇಟೆಯ ಕೆಇಬಿ ಕಚೇರಿಯಲ್ಲಿರುವ ಕಾಲರ್‌ನ್ನು ಗುರುವಾರ (ಸೆ.೮) ತಡರಾತ್ರಿ ಮುರಿದು ಹಣ ದೋಚಲಾಗಿದೆ. ಗ್ಯಾಸ್ ಕಟ್ಟರ್ ಬಳಸಿ ಕೌಂಟರ್‌ನಲ್ಲಿದ್ದ ಈ ಲಾಕರನ್ನು ಮುರಿಯಲಾಗಿದೆ.
ಡ್ಯಾಂ ರಸ್ತೆಯಲ್ಲಿರುವ ಕೆಇಬಿ ಕಚೇರಿಯ ನಂಬರ್ ಒನ್ ಕೌಂಟರ್ ಅನ್ನು ಕಟ್ ಮಾಡಿದ್ದಾರೆ. ಗುರುವಾರ ಮಧ್ಯಾಹ್ನದಿಂದ ಗ್ರಾಹಕರು ಕಟ್ಟಿದ್ದ ವಿದ್ಯುತ್ ಬಿಲ್‌ಅನ್ನು ಲಾಕರ್‌ನಲ್ಲಿಟ್ಟು ಸಿಬ್ಬಂದಿ ಹೋಗಿದ್ದರು. ಇದನ್ನು ಗಮನಿಸಿದ ಖದೀಮರು ರಾತ್ರಿ ವೇಳೆ ಕದ್ದು ಪರಾರಿಯಾಗಿದ್ದಾರೆ.
ಇದನ್ನೂ ಓದಿ | Life story | ಕಳ್ಳತನ ಮಾಡಿದಾತನೇ ಪೊಲೀಸ್ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!
ಶುಕ್ರವಾರ ಬೆಳಗ್ಗೆ ಡಿ ಗ್ರೂಪ್ ನೌಕರರು ಬಂದು ನೋಡಿದಾಗ ಹಣ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಲಾಕರ್‌ನಲ್ಲಿ ಒಟ್ಟು 58,825 ರೂ. ಇರಿಸಲಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.