Site icon Vistara News

Viral News: ಹಗರಿಬೊಮ್ಮನಹಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ: ನಿತ್ಯ ಬಾಳೆಹಣ್ಣು ನೀಡುತ್ತಿದ್ದ ತಾತನ ಶವಕ್ಕೆ ಮುತ್ತಿಟ್ಟು ಕಳಿಸಿಕೊಟ್ಟ ಕೋತಿ!

monkey

ವಿಜಯನಗರ: ತನಗೆ ನಿತ್ಯವೂ ಬಾಳೆಹಣ್ಣು ನೀಡುತ್ತಿದ್ದ ತಾತ ಮೃತಪಟ್ಟ ಸಂದರ್ಭ ಕೋತಿ ಬಂದು ಹಣೆಗೆ ಮುತ್ತಿಟ್ಟ ಹೃದಯಸ್ಪರ್ಶಿ ಘಟನೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಹಗರಿಬೊಮ್ಮನ ಹಳ್ಳಿ ಪಟ್ಟಣದ ಹಳೆ ಹಗರಿಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪರಶುರಾಮ್ ಷಾ (88) ಎಂಬ ಹಿರಿಯ ನಾಗರಿಕರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಶವದ ಬಳಿ ಕುಳಿತಿದ್ದಾಗ ಕೋತಿರಾಯ ಆಗಮಿಸಿದ್ದಾನೆ. ತುಸು ಹೊತ್ತು ಸುಮ್ಮನೆ ಕುಳಿತು, ನಂತರ ಮೃತ ತಾತನ ಬಳಿಗೆ ಹೋಗಿ ಹಣೆಗೆ ಮುತ್ತಿಟ್ಟಿದೆ.

ಈ ಕಪಿಗೆ ಮೃತ ಪರಶುರಾಮ್ ಷಾ ಅವರು ನಿತ್ಯ ಬಾಳೆಹಣ್ಣು ನೀಡುತ್ತಿದ್ದರು. ಇವರ ಸಾವಿಗೆ ಎರಡು ತಿಂಗಳ ಹಿಂದಿನಿಂದ ಅವರಿಗೆ ಕೋತಿಯ ಒಡನಾಟ ಪ್ರಾರಂಭವಾಗಿತ್ತು. ಶ್ರೀರಾಮ ನವಮಿಯ ದಿನ ಇವರು ಮೃತರಾಗಿದ್ದರು. ಸಾವಿನ ಹಿಂದಿನ ದಿನ ಅವರ ಹುಟ್ಟುಹಬ್ಬವಿತ್ತು. ಮೃತರು ಮದ್ಯಪ್ರಿಯರೂ ಆಗಿದ್ದ ಕಾರಣ ಮದ್ಯದ ಬಾಟಲ್ ಮಾದರಿಯ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಹ ಕುಟುಂಬಸ್ಥರು ಆಚರಿಸಿದ್ದರು.

ಇದನ್ನೂ ಓದಿ: Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ

Exit mobile version