ವಿಜಯಪುರ: ಜಿಲ್ಲೆಯ ಮದಬಾವಿ ತಾಂಡಾದ ಹೊರವಲಯದ ತೋಟದಲ್ಲಿ (Vijayapura News) ಮೀನುಗಳ ಮಾರಣ ಹೋಮ ನಡೆದಿದೆ. ಬೇಸಿಗೆಯ ಬಿಸಿಲಿನ (summer heat) ತಾಪಕ್ಕೆ 17 ಸಾವಿರ ಮತ್ಸ್ಯಗಳು ಮೃತಪಟ್ಟಿದ್ದು, ಇದರಿಂದ ಯುವ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪ 46 ಡಿಗ್ರಿವರೆಗೆ ತಲುಪುತ್ತಿದೆ. ಇದರಿಂದ ವಿರೇಶ ಕವಟಗಿ ಎಂಬ ಯುವ ರೈತ ಸಾಕಿದ್ದ ಮೀನುಗಳು ಮೃತಪಟ್ಟಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದರಿಂದ ರೈತ ಕಂಗಾಲಾಗಿದ್ದಾನೆ.
ಬಯೋಪ್ಲಾಕ್ ಹೊಂಡದಲ್ಲಿ ಯುವ ರೈತ ಮೀನು ಸಾಕಾಣಿಕೆ ಮಾಡಿದ್ದ. 180 ಅಡಿ ಉದ್ದ, 70 ಅಡಿ ಅಗಲವಾದ ಹೊಂಡದಲ್ಲಿ ಮರ್ಲ್ ಜಾತಿ ಮೀನುಗಳನ್ನು ಸಾಕಾಣಿಕೆ ಮಾಡಿದ್ದ. ವೃತ್ತಿಯಲ್ಲಿ ಸಾಪ್ಟವೇರ್ ಎಂಜಿನಿಯರ್ ಆಗಿದ್ದರೂ ವಿರೇಶ ಕೃಷಿ ಮಾಡಿಕೊಂಡಿದ್ದ.
ಇದನ್ನೂ ಓದಿ | Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿರೇಶ, ಬೆಂಗಳೂರಿನಿಂದ ಬಂದು ಮೀನು ಮಾರಾಟ ಮಾಡಬೇಕು ಎಂದುಕೊಂಡಿದ್ದ. ಹೀಗಾಗಿ ಗ್ರಾಮಕ್ಕೆ ಬಂದು ನೋಡಿದಾಗ ರಾತ್ರೋ ರಾತ್ರಿ ಯುವ ರೈತನಿಗೆ ಆಘಾತ ಉಂಟಾಗಿದೆ. ಬಿಸಿಲಿನ ತಾಪದಿಂದ ಬೆಳಗ್ಗೆವರೆಗೆ 17 ಸಾವಿರ ಮೀನುಗಳ ಮೃತಪಟ್ಟಿದ್ದು, ಇದರಿಂದ ಸುಮಾರು 35 ಲಕ್ಷ ರೂ. ನಷ್ಟವಾಗಿದೆ. ಮೀನುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕೊಡಿ ಎಂದು ಅಧಿಕಾರಿಗಳಿಗೆ ಯುವ ರೈತ ಮನವಿ ಮಾಡಿದ್ದಾನೆ.
ಚಿಕ್ಕಮಗಳೂರಿನಲ್ಲಿ ಮತ್ತೊಂದು ಕಾಡಾನೆ ಅನುಮಾನಾಸ್ಪದ ಸಾವು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಸರಣಿ ಸಾವು ಮುಂದುವರಿದಿದ್ದು, ತಾಲೂಕಿನ ಆಲ್ದೂರು ಬಳಿಯ ಕೆರೆಹಕ್ಲು ಗ್ರಾಮದ ಸಮೀಪ ಮತ್ತೊಂದು ಕಾಡಾನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ. 35 ವರ್ಷದ ಒಂಟಿ ಸಲಗ ಕೊನೆಯುಸಿರೆಳೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ವಾರದ ಹಿಂದೆ ಈ ಭಾಗದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಬಲಿಯಾಗಿದ್ದ.
ಇದನ್ನೂ ಓದಿ | Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ.
ಬಾಗಲಕೋಟೆ: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಅಪರಿಚಿತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಯರಗೊಪ್ಪ ಸಮೀಪ ನಡೆದಿದೆ. ಘಟನೆಯಲ್ಲಿ ಯುವಕ ರುಂಡ, ಮುಂಡ ಬೇರೆ ಬೇರೆಯಾಗಿ ಬಿದ್ದಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.