Site icon Vistara News

Accident | ಕೊಲ್ಹಾರ ತಾಲೂಕಿನಲ್ಲಿ ಕಾರು-ಸಾರಿಗೆ ಬಸ್ ನಡುವೆ ಅಪಘಾತ; ಇಬ್ಬರ ಸಾವು

Accident

ವಿಜಯಪುರ: ಗಣೇಶ ಹಬ್ಬದಂದೇ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಕಾರು ಓವರ್‌ಟೇಕ್‌ ಮಾಡುವಾಗ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಬಕಡ್ಡಿ ಕ್ರಾಸ್ ಬಳಿ ಕಾರಿಗೆ ಹಿಂದಿನಿಂದ ಸಾರಿಗೆ ಬಸ್ ಡಿಕ್ಕಿಯಾಗಿ ಬುಧವಾರ (Accident) ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.

ಕಲಬುರಗಿ ಮೂಲದ 35 ವರ್ಷದ ಮಹಿಳೆ, 8 ತಿಂಗಳ ಮಗು ಮೃತರು. ಇವರ ಹೆಸರು ತಿಳಿದುಬಂದಿಲ್ಲ. ಕಾರು ಓವರ್ ಟೇಕ್ ಮಾಡಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಪಕ್ಕಕ್ಕೆ ತಿರುಗಿದ ಕಾರಿಗೆ ಹಿಂಬದಿಯಿಂದ ಸಾರಿಗೆ ಬಸ್ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಕಾರು ಚಾಲಕ, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿ ಐವರು ಗಾಯಗೊಂಡಿದ್ದಾರೆ. ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Police Raid | ಇಸ್ಪೀಟ್‌ ಅಡ್ಡೆ ಮೇಲೆ ಪೊಲೀಸರ ದಾಳಿ; ಓಡುವಾಗ ಕುಸಿದು ಬಿದ್ದ ಯುವಕ ಸಾವು

Exit mobile version