Site icon Vistara News

Auto Rickshaw Accident | ಆಟೋ ಪಲ್ಟಿಯಾಗಿ ವ್ಯಕ್ತಿ ಸಾವು, ಮೂವರಿಗೆ ಗಂಭೀರ ಗಾಯ

Road Accident

ತಾಳಿಕೋಟೆ (ವಿಜಯಪುರ): ತಾಳಿಕೋಟೆ ಪಟ್ಟಣದಿಂದ ಹರನಾಳ ಗ್ರಾಮಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ (Auto Rickshaw Accident) ಪಲ್ಟಿಯಾಗಿದ್ದರಿಂದ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹರನಾಳ ಗ್ರಾಮದ ಹನಮಪ್ಪ ಪೀರಪ್ಪ ಚಲವಾದಿ(೮೦) ಮೃತರು. ಗ್ರಾಮದ ಬಾಳಪ್ಪ ಗುಡಗುಂಟಿ, ಬಸಪ್ಪ ಹನಮಪ್ಪ ಗುಡಗುಂಟಿ ಹಾಗೂ ಸುಮಿತ್ರಾ ಮಾದರ ಗಾಯಾಳುಗಳು.

ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರಿಗೆ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಹನಮಪ್ಪ ಪೀರಪ್ಪ ಚಲವಾದಿ ಮೃತರಾಗಿದ್ದಾರೆ.

ಚಾಲಕ ಸಹಿತ ಒಟ್ಟು ೭ ಜನ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಅಟೋ ಪಲ್ಟಿಯಾಗಿದೆ ಎಂದು ಪಿಎಸ್‌ಐ ಸುರೇಶ ಮಂಟೂರ ತಿಳಿಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಪತ್ನಿಯನ್ನು​ ಕೊಂದು ಶವವನ್ನು ಮನೆಯಲ್ಲೇ ಹೂತಿಟ್ಟ ಪತಿ; ಇಸ್ಲಾಂಗೆ ಮತಾಂತರ ಆಗಿದ್ದ ಹಿಂದು ಮಹಿಳೆಯ ಬರ್ಬರ ಹತ್ಯೆ

Exit mobile version