ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಕ್ರಾಸ್ ಸಮೀಪದ ನಾಲತವಾಡ ಮುಖ್ಯ ರಸ್ತೆಯಲ್ಲಿ ಅಪರಿಚಿತ ಭಾರಿ ವಾಹನ ಹರಿದು(Bike Accident) ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಕಿರಸೂರ ಗ್ರಾಮದ ಸಂಗಪ್ಪ ಭೀಮಶೆಪ್ಪ ಈರಗಾರ (35) ಮೃತ. ಇವರು ಅಪಘಾತ ನಡೆದ ಸಮೀಪದ ಡಾಬಾವೊಂದರ ಸಿಬ್ಬಂದಿ ಎನ್ನಲಾಗಿದೆ. ಭಾರಿ ವಾಹನದ ಚಕ್ರಗಳು ಹೊಟ್ಟೆಯ ಮೇಲೆಯ ಹರಿದ ಪರಿಣಾಮ ಕರುಳು ದೇಹದಿಂದ ಹೊರಬಂದಿವೆ. ಇದೇ ರಸ್ತೆಯ ಸ್ವಲ್ಪ ದೂರದಲ್ಲಿ ಸಕ್ಕರೆ ಕಾರ್ಖಾನೆ ಇದೆ. ಅಲ್ಲಿಗೆ ಕಬ್ಬು ಸಾಗಿಸುವ ವಾಹನ ಸವಾರನ ಮೇಲೆ ಹರಿದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಮುದ್ದೇಬಿಹಾಳ ಪಿಎಸ್‌ಐ ಆರೀಫ್ ಮುಷಾಪುರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆಂಬ್ಯುಲೆನ್ಸ್ ಮೂಲಕ ಶವವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ದಿನಗೂಲಿ ಕೆಲಸಗಾರ ಸಾವು
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಗ್ರಾಮದ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ
ಯಂತ್ರಕ್ಕೆ ಸಿಲುಕಿ ದಿನಗೂಲಿ ಕೆಲಸಗಾರ ಮೃತಪಟ್ಟಿದ್ದಾನೆ. ಹಡಗಲಿ ಗ್ರಾಮದ ನಿವಾಸಿ ಸಿದ್ದಪ್ಪ ದೊಡಮನಿ (48) ಮೃತ. ಕಾರ್ಖಾನೆಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಇಲ್ಲದೇ ಇರುವುದು ಘಟನೆಗೆ ಕಾರಣವೆಂದು ಕೆಲಸಗಾರರು ಆರೋಪಿಸಿದ್ದು, ಮೃತ ಕೆಲಸಗಾರನ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ನಿವೃತ್ತ ಅಬಕಾರಿ ಅಧಿಕಾರಿ ಸಾವು
ರಾಮನಗರ: ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಅಬಕಾರಿ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿರುವುದು ಜಿಲ್ಲೆಯ ಬಿಡದಿ ಹೋಬಳಿಯ ಕೋತಿ ಅಂಜನೇಯ ದೇವಾಲಯದ ಬಳಿ ನಡೆದಿದೆ.
ಅಂದಾನಿಗೌಡ (80) ಮೃತರು. ಆಂಜನೇಯ ದೇವಾಲಯಕ್ಕೆ ಹೋಗಿ ರಸ್ತೆ ದಾಟುವಾಗ ಡಿಕ್ಕಿ ಕಾರು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road accident | ಕಾರು ಮತ್ತು ಬಸ್‌ಗೆ ಬೈಕ್ ಡಿಕ್ಕಿ: ಇಬ್ಬರೂ ಸವಾರರು ಸ್ಥಳದಲ್ಲೇ ಮೃತ್ಯು