ಬೆಂಗಳೂರು: ಪದೇಪದೇ ಪಕ್ಷದ ಹಿರಿಯ ನಾಯಕರು, ಸಚಿವರ ಕುರಿತು ಮಾತನಾಡುವ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ವರಿಷ್ಠರು ಬಿಸಿ ಮುಟ್ಟಿಸಿದ್ದಾರೆ.
ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್ ಅವರಿಗೆ ಕರೆ ಮಾಡಲಾಗಿದೆ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ಹೇಳಿಕೆ ನೀಡದಂತೆ ಖಡಕ್ ಸೂಚನೆ ನೀಡಲಾಗಿದೆ.
ಈಗಾಗಲೇ ರಾಜ್ಯದ ಶಿಸ್ತು ಸಮಿತಿಯಿಂದ ಎಚ್ಚರಿಕೆ ನೀಡಲಾಗಿದೆ. ಆದರೆ ಅದಕ್ಕೆ ಸೊಪ್ಪು ಹಾಕದ ಯತ್ನಾಳ್, ತಮ್ಮ ಮಾತಿನ ವರಸೆಯನ್ನು ಮುಂದುವರಿಸಿದ್ದಾರೆ. ಹೀಗಾಗಿ ಕೇಂದ್ರ ಶಿಸ್ತು ಸಮಿತಿಯಿಂದಲೇ ಯತ್ನಾಳ್‌ಗೆ ಎಚ್ಚರಿಕೆ ನೀಡಲಾಗಿದೆ.
ವೈಯಕ್ತಿಕವಾಗಿ ಯಾರ ವಿರುದ್ಧವೂ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಪಂಚಮಸಾಲಿ ಮೀಸಲಾತಿ ಸೇರಿದಂತೆ, ಯಾವುದೇ ವಿಚಾರದಲ್ಲಿ ಪಕ್ಷದ ವಿರುದ್ಧ ಹೇಳಿಕೆ ನೀಡಬಾರದು. ಒಂದು ವೇಳೆ ಎಚ್ಚರಿಕೆಗೆ ಸ್ಪಂದಿಸದಿದ್ದರೆ ಕ್ರಮದ ಮುನ್ಸೂಚನೆ ನೀಡಲಾಗಿದೆ. ಈಗ ನೀಡಿರುವ ಎಚ್ಚರಿಕೆ ಕುರಿತಂತೆ ಮುಂದಿನ 15 ದಿನದಲ್ಲಿ ಉತ್ತರ ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ | Basangouda Patil Yatnal | ಬಿಜೆಪಿಯಿಂದ ನನ್ನ ಹೊರ ಹಾಕೋ ತಾಕತ್ ಯಾರಿಗೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್