ವಿಜಯಪುರ: ವಿಜಯಪುರದಲ್ಲಿ ನಿನ್ನೆ ರಾತ್ರಿಯಿಂದ ಸತತ ಎರಡು ಬಾರಿ ಭೂಕಂಪನವಾಗಿದೆ. ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ. ಜನತೆ ಬೆಚ್ಚಿಬಿದ್ದಿದ್ದಾರೆ.
ನಿನ್ನೆ ರಾತ್ರಿ 9.47ಕ್ಕೆ ಹಾಗೂ ನಸುಕಿನ ಜಾವ 4.40ರ ಸುಮಾರಿಗೆ ಭೂಕಂಪ ಸಂಭವಿಸಿದೆ. 5 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ರಾತ್ರಿ 9.47ಕ್ಕೆ 2.8 ರಿಕ್ಟರ್ ತೀವ್ರತೆಯಲ್ಲಿ ಹಾಗೂ ನಸುಕಿನ ಜಾವ 4.40ಕ್ಕೆ 2.8 ರಿಕ್ಟರ್ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದ ಪರಿಣಾಮ ಜನತೆ ಬೆಚ್ಚಿ ಮನೆಗಳಿಂದ ಹೊರಗೋಡಿ ಬಂದರು.
ಬಸವನ ಬಾಗೇವಾಡಿ ತಾ. ಮನಗೂಳಿ ಗ್ರಾಮ ಮೊದಲ ಭೂಕಂಪನದ ಹಾಗೂ ವಿಜಯಪುರ ತಾ. ಹಂಚಿನಾಳ ಗ್ರಾಮ ಎರಡನೇ ಭೂಕಂಪನದ ಕೇಂದ್ರಬಿಂದುವಾಗಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಭೂಕಂಪನ ದೃಢಪಡಿಸಿದೆ. ಕಳೆದ ಮೂರು ತಿಂಗಳಲ್ಲಿ ವಿಜಯಪುರದಲ್ಲಿ ಅನೇಕ ಬಾರಿ ಭೂಕಂಪನ ಸಂಭವಿಸಿರುವುದರಿಂದ ಜನತೆ ಆತಂಕಿತರಾಗಿದ್ದಾರೆ.
ಇದನ್ನೂ ಓದಿ | Vijayapura Earthquake | ಗುಮ್ಮಟ ನಗರಿಯಲ್ಲಿ ಮತ್ತೆ ಭೂಕಂಪನ ಗುಮ್ಮ; ಭಯಭೀತಿಯಲ್ಲಿ ಸಾರ್ವಜನಿಕರು