ವಿಜಯಪುರ: ಮೀನು ಹಿಡಿಯಲು ಹೋದ ಬಾಲಕರಿಬ್ಬರು ಕರೆಂಟ್ ಶಾಕ್‌ನಿಂದ (Electric shock) ಮೃತಪಟ್ಟಿದ್ದಾರೆ. ರೋಹಿತ್ ಅನೀಲ್ ಚವ್ಹಾಣ್ (8), ವಿಜಯ ಪಿಂಟು ಚವ್ಹಾಣ್ (16) ಮೃತ ದುರ್ದೈವಿಗಳು.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಇಬ್ಬರು ಬಾಲಕರು ದುರ್ಮರಣ ಹೊಂದಿದ್ದಾರೆ. ವಿಜಯಪುರ ಜಿಲ್ಲೆಯ ದ್ಯಾಬೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಕಟ್ ಆಗಿ ನೀರಿನಲ್ಲಿ ಬಿದ್ದಿತ್ತು. ಇದರ ಅರಿವು ಇರದ ಬಾಲಕರಿಬ್ಬರು ಮೀನು ಹಿಡಿಯಲು ಹೋಗಿದ್ದಾರೆ.
ಈ ವೇಳೆ ಒಮ್ಮೆಲೆ ಇಬ್ಬರು ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕರ ಮೃತದೇಹವನ್ನು ತಬ್ಬಿಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Kolar news : ಬ್ಲಾಸ್ಟಿಂಗ್ ವೇಳೆ ಉರುಳಿ ಬಿದ್ದ ಬಂಡೆಕಲ್ಲು, ಟ್ರ್ಯಾಕ್ಟರ್-ಹಿಟಾಚಿ ಅಪ್ಪಚ್ಚಿ; ಮೂವರು ಕಾರ್ಮಿಕರು ನಾಪತ್ತೆ
ಯಾದಗಿರಿಯಲ್ಲಿ ತೆರೆದ ಗುಂಡಿಗೆ ಬಾಲಕ ಬಲಿ
ಯಾದಗಿರಿ: ತೆರೆದ ಗುಂಡಿಯಲ್ಲಿ ಬಿದ್ದು ಬಾಲಕನೊರ್ವ (Drowned in Water) ಮೃತಪಟ್ಟಿದ್ದಾನೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ನಿನ್ನೆ ಸೋಮವಾರ ಸಂಜೆ ಘಟನೆ ನಡೆದಿದೆ. ಮನೋಜಕುಮಾರ (8) ಮೃತ ದುರ್ದೈವಿ.
ಮನೋಜಕುಮಾರ ತೋಟದ ಮನೆಯಲ್ಲಿ ಆಟವಾಡುತ್ತಿದ್ದ. ಆಟವಾಡುವಾಗ ಕಾಲು ಜಾರಿದ್ದು ತೆರೆದ ಗುಂಡಿಯಲ್ಲಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಗೇರಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹತ್ತು ವರ್ಷದ ವಸಂತ್ ಮೃತದುರ್ದೈವಿ.
ವಸಂತ್ ನೀರು ಕುಡಿಯಲು ಕೃಷಿ ಹೊಂಡಕ್ಕೆ ತೆರಳಿದ್ದ ಈ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಹೊಂಡದ ನೀರಿನ ಆಳದಲ್ಲಿ ಸಿಲುಕಿದ್ದ, ಇತ್ತ ಕೂಡಲೇ ಬಾಲಕನ ರಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದರು. ಆದರೆ ಉಸಿರುಗಟ್ಟಿ ಹೊಂಡದ ನೀರಲ್ಲಿ ವಸಂತ ಪ್ರಾಣ ಬಿಟ್ಟಿದ್ದಾನೆ. ಬಳ್ಳಾರಿಯ ಸಿರಗೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ