Site icon Vistara News

Misbehaviour : ಚುಡಾಯಿಸಿದ್ದನ್ನು ಪ್ರಶ್ನಿಸಿದ ಮುಸ್ಲಿಂ ಯುವತಿಗೆ ಚಪ್ಪಲಿಯಿಂದ ಹೊಡೆದ ಧೂರ್ತ

Misbehaviour

ವಿಜಯಪುರ: ಅವನು ಮುಸ್ಲಿಂ ಯುವತಿಯನ್ನು (Muslim girl) ಚುಡಾಯಿಸಿದ್ದು (Eve teasing) ಮಾತ್ರವಲ್ಲ, ಪ್ರಶ್ನೆ ಮಾಡಿದ್ದಕ್ಕೆ ಆಕೆಗೇ ಚಪ್ಪಲಿಯಿಂದ ಹೊಡೆದಿದ್ದಾನೆ (Misbehaviour). ಈ ಘಟನೆ ನಡೆದಿರುವುದು ವಿಜಯಪುರ ತಾಲೂಕಿನ (Vijayapur News) ನಾಗಠಾಣಾ ಗ್ರಾಮದಲ್ಲಿ. ಯುವತಿಗೆ ಆತ ಚಪ್ಪಲಿಯಿಂದ ಹೊಡೆದ ವಿಡಿಯೋ ಸಿಸಿ‌ ಕೆಮೆರಾದಲ್ಲಿ ಸೆರೆಯಾಗಿದೆ.

ನಾಗಠಾಣ ಗ್ರಾಮದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಮುಸ್ಲಿಂ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದಾಳೆ. ಶ್ರೀಶೈಲ‌‌‌ ಮಸಳಿ ಎಂಬ ಯುವಕ ಆಕೆಯನ್ನು ಪ್ರತಿ ದಿನವೂ ಚುಡಾಯಿಸುತ್ತಿದ್ದ. ಹಲವು ದಿನಗಳಿಂದ ಸುಮ್ಮನಿದ್ದಳು. ಯಾಕೆ ಬೇಕು ಇಂಥ ಉಸಾಬರಿ ಎಂದು ತನ್ನ ಪಾಡಿಗೆ ಹೋಗುತ್ತಿದ್ದಳು.

ಸೋಮವಾರ ಮಧ್ಯಾಹ್ನ ಎಂದಿನಂತೆ ಆಕೆ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ತೆರಳುವಾಗ ಶ್ರೀಶೈಲ ಮತ್ತೆ ಚುಡಾಯಿಸಿದ್ದಾನೆ. ಆಗ ಸಿಟ್ಟಿಗೆದ್ದ ಮುಸ್ಲಿಂ ಯುವತಿ ಆ ಯುವಕನಿಗೆ ಚಪ್ಪಲಿ ತೋರಿಸಿದ್ದಾಳೆ. ಈ ರೀತಿ ತನ್ನನ್ನು ಚುಡಾಯಿಸುತ್ತಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದಾಳೆ.

ಇದರಿಂದ ಶ್ರೀಶೈಲನೂ ಕೆರಳಿದ್ದಾನೆ. ಎಲ್ಲರ ಎದುರು ತನಗೆ ಚಪ್ಪಲಿ ತೋರಿಸಿದ್ದರಿಂದ ಅಪಮಾನಿತನಾದ ಆತ ಕಂಪ್ಯೂಟರ್ ತರಬೇತಿ ಕೇಂದ್ರದ ಒಳ ಹೋಗಿ ಯುವತಿಯನ್ನು ಹೊರಗೆ ಎಳೆದು ತಂದಿದ್ದಾನೆ.

ಆಕೆಯನ್ನು ಹೊರಗೆ ತಂದು ತಾನೇ ಚಪ್ಪಲಿಯಿಂದ ಹೊಡೆದಿದ್ದಾನೆ. ಆಕೆ ಕೂಡಾ ಆತನ ವಿರುದ್ಧ ಸೆಣಸಾಡಲು ಮುಂದಾಗಿದ್ದಾಳೆ. ಆದರೆ ಶ್ರೀಶೈಲ ಬಲಿಷ್ಠನಾಗಿದ್ದರಿಂದ ಆತನ ಕೈ ಮೇಲಾಗಿದೆ. ಹಲವಾರು ಮಂದಿ ಈ ಘಟನೆಯನ್ನು ನೋಡಿದ್ದು, ಸಿಸಿ ಟಿವಿಯಲ್ಲಿ ಕೂಡಾ ದಾಖಲಾಗಿದೆ. ಆದರೆ, ಯಾರೊಬ್ಬರೂ ತಡೆಯಲು ಮುಂದಾಗಿಲ್ಲ. ಊರ ಉಸಾಬರಿ ನಮಗೇಕೆ ಎಂದು ಸುಮ್ಮನಿದ್ದರು.

ಇದನ್ನೂ ಓದಿ : Mangalore News: ರಾಮನ ಅವಹೇಳನ ಮಾಡಿದ್ದ ಕ್ರೈಸ್ತ ಶಿಕ್ಷಕಿ ಸಸ್ಪೆಂಡ್‌; ಕುಣಿದು ಸಂಭ್ರಮಿಸಿದ ವಿದ್ಯಾರ್ಥಿಗಳು

ಘಟನೆಯಿಂದ ಬೇಸತ್ತ ಯುವತಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ‌ನೀಡಿದ್ದಾಳೆ. ದೂರು‌‌ ನೀಡುತ್ತಿದ್ದಂತೆ ಯುವಕ ಶ್ರೀಶೈಲ‌ ಪರಾರಿಯಾಗಿದ್ದಾನೆ. ಪೊಲೀಸರು ಈಗ ಆತನ‌ನ್ನು ಹುಡುಕುತ್ತಿದ್ದಾರೆ.

ಯುವತಿ ಹಾಗೂ ಪೋಷಕರು ತಮಗೆ ನ್ಯಾಯ ಕೊಡಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಯುವತಿಯರನ್ನು ಚುಡಾಯಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯ ಮೇಲೆ ದಾಳಿ ಮಾಡಿದ ದೃಶ್ಯ ಇಲ್ಲಿದೆ..

Exit mobile version