ವಿಜಯಪುರ: ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಬಬಲೇಶ್ವರ ರಸ್ತೆಯಲ್ಲಿ ವ್ಯಕ್ತಿಯೊಬ್ಬನ (Murder Case) ಬರ್ಬರ ಹತ್ಯೆಯಾಗಿದೆ. ಮಾರಕಾಸ್ತ್ರದಿಂದ ಹೊಡೆದು ಪರಶುರಾಮ ಮ್ಯಾಕೇರಿ (22) ಎಂಬಾತನನ್ನು ಹತ್ಯೆ ಮಾಡಲಾಗಿದೆ.
ಬಡ್ಡಿ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಋಷಿಕೇಶ್ ಸೋನವಾಣೆ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಘಟನೆ ನಡೆದಿದೆ.
ಇದನ್ನೂ ಓದಿ: Kidnap Case : ಸಮುದ್ರದಲ್ಲೇ ಮೀನುಗಾರರ ಮೇಲೆ ದಾಳಿ ಮಾಡಿ ಕಿಡ್ನಾಪ್; ಕೊನೆಗೂ ರಕ್ಷಣೆ
ದೃಶ್ಯಂ ಸ್ಟೈಲಲ್ಲಿ ಅತ್ತೆಯನ್ನೇ ಸುಟ್ಟ ಕಿರಾತಕ; ಇತ್ತಾ ಅಕ್ರಮ ಸಂಬಂಧ?
ಬೆಂಗಳೂರು: ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಅತ್ತೆಯನ್ನೇ ಬೆಂಕಿ ಹಾಕಿ ಕೊಂದಿದ್ದಾನೆ (Murder Case). ದೃಶ್ಯಂ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ ಮಾಡಿ (Murder in Cinema style) ಯಾವ ಸಾಕ್ಷ್ಯವನ್ನು ಉಳಿಸದೆ ಕಥೆ ಮುಗಿಸಿದ್ದಾನೆ. ಆದರೆ, ಪೊಲೀಸರ ಚುರುಕಾದ ತನಿಖೆ 20 ವರ್ಷದ ಈ ಕೊಲೆಗಾರನನ್ನು ಮಟ್ಟ (Young man kills relative woman) ಹಾಕಿದೆ. ಹಾಗಿದ್ದರೆ ಈ ಯುವಕ 36 ವರ್ಷದ ಅತ್ತೆಯನ್ನು ಕೊಂದಿದ್ದೇಕೆ? ಅವರಿಬ್ಬರೂ ಕಾರಿನಲ್ಲಿ ಜತೆಯಾಗಿ ಹೋಗಿದ್ದೇಕೆ? ಅವರ ನಡುವೆ ಇದ್ದ ಸಂಬಂಧವಾದರೂ ಏನು? ಎನ್ನುವುದೇ ಈ ಕೊಲೆಯ ಹಿಂದಿನ ಭಯಾನಕ ಕಥೆ.
ಫೆಬ್ರವರಿ 12ರಂದು ನಾಪತ್ತೆಯಾಗಿದ್ದ ಸುಕನ್ಯಾ
ಇದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿರುವ ಘಟನೆ. ಸುಕನ್ಯಾ ಎಂಬವರು ಸುಮಾರು 36 ವರ್ಷದ ಆಕರ್ಷಕ ಮಹಿಳೆ. ಮನೆ, ಗಂಡ, ಮಕ್ಕಳು ಎಲ್ಲವೂ ಇರುವ ಸುಂದರಿ.
ಫೆಬ್ರವರಿ 12ರಂದು ಅವರು ಒಮ್ಮಿಂದೊಮ್ಮೆಗೇ ಕಾಣೆಯಾಗುತ್ತಾರೆ. ಆಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಈ ನಡುವೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಬಿಂಗೀಪುರ ಗ್ರಾಮದಲ್ಲಿ ಅಪರಿಚಿತ ಮಹಿಳೆಯ ತಲೆ ಬುರುಡೆ ಪತ್ತೆಯಾಗುತ್ತದೆ. ಬನ್ನೇರುಘಟ್ಟ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡುತ್ತಿದ್ದಂತೆಯೇ ವಿಚಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೂ ತಲುಪುತ್ತದೆ. ತಮ್ಮ ಭಾಗದಲ್ಲಿ ನಾಪತ್ತೆಯಾಗಿರುವ ಸುಕನ್ಯಾ ಅವರಿಗೂ ಈಗ ಪತ್ತೆಯಾಗಿರುವ ತಲೆಬುರುಡೆಗೂ ಏನಾದರೂ ಸಂಬಂಧ ಇರಬಹುದಾ? ಎಂಬ ಸಂಶಯ ಹುಟ್ಟಿಕೊಂಡಿತು. ಆದರೆ, ಅದು ಇವರದ್ದೇ ಎನ್ನುವುದಕ್ಕೆ ಸಣ್ಣ ಕ್ಲೂ ಕೂಡಾ ಇರಲಿಲ್ಲ.
ಸುಕನ್ಯಾ ಫೋನ್ ಕಾಲ್ ಡಿಟೇಲ್ಸ್ ಜಾಲಾಡಿದ ಪೊಲೀಸ್
ಈ ನಡುವೆ, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮಹಿಳೆಯ ಫೋನ್ ಕಾಲ್ ಡಿಟೇಲ್ಸ್‌ನ್ನು ಬೆನ್ನು ಹತ್ತಿದ ಅವರಿಗೆ ಪದೇಪದೆ ಕಾಲ್‌ಗಳೂ ಹೋಗಿದ್ದ ಒಂದು ನಂಬರ್ ಮೇಲೆ ಸಂಶಯ ಜೋರಾಗಿತ್ತು. ಆ ನಂಬರ್ ಬೇರಾರದ್ದೂ ಅಲ್ಲ. ಅದೇ ಗ್ರಾಮದ ಜಶ್ವಂತ್(20) ಎಂಬ ಯುವಕನದ್ದು.
ಪೊಲೀಸರು ಅನುಮಾನದ ಮೇರೆಗೆ ಜಶ್ವಂತ್‌ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದರು. ಆದರೆ, ಅವನು ಮೊದಲು ಬಾಯಿ ಬಿಡಲಿಲ್ಲ. ಕೊನೆಗೆ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಹಂತ ಹಂತವಾಗಿ ಎಲ್ಲವನ್ನೂ ಬಾಯಿ ಬಿಟ್ಟ.
ಅಂದ ಹಾಗೆ ಈ ಜಶ್ವಂತ್ ಬೇರೆ ಯಾರೂ ಅಲ್ಲ. ಸುಕನ್ಯಾ ಅವರ ಪತ್ನಿಯ ತಂಗಿಯ ಮಗ. ಅಂದರೆ ವರಸೆಯಲ್ಲಿ ಸುಕನ್ಯಾ ಅವರು ಜಶ್ವಂತ್‌ಗೆ ಅತ್ತೆ. ಅವರಿಬ್ಬರೂ ತುಂಬ ಆತ್ಮೀಯವಾಗಿಯೇ ಇದ್ದರು. ಆದರೆ, ಅದೊಂದು ಕಾರಣಕ್ಕಾಗಿ ಆಕೆಯನ್ನು ಆತ ಕೊಲೆ ಮಾಡಿಬಿಟಿದ್ದ.
ಇದನ್ನೂ ಓದಿ : Murder Case : ಬಾಗಲಕೋಟೆಯಲ್ಲಿ ಹಳೆ ದ್ವೇಷಕ್ಕೆ ಹರಿದ ನೆತ್ತರು; ಒಬ್ಬ ಸಾವು, ಮತ್ತಿಬ್ಬರು ಗಂಭೀರ
ಹಾಗಿದ್ದರೆ ಈ ಕೊಲೆ ನಡೆದಿದ್ದು ಹೇಗೆ? ದೃಶ್ಯಂ ಸಿನಿಮಾಗೂ ಏನು ಸಂಬಂಧ?
ಹೌದು, 20 ವರ್ಷದ ಜಶ್ವಂತ್ ತನ್ನದೇ 36 ವರ್ಷದ ಅತ್ತೆಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಹಾಗಂತ ಇದು ಒಮ್ಮೆಗೇ ನಡೆದು ಮುಗಿದು ಹೋದ ಘಟನೆಯಲ್ಲ. ಅತ್ಯಂತ ವ್ಯವಸ್ಥಿತವಾಗಿ ಪ್ಲ್ಯಾನ್ಡ್ ಆಗಿ ನಡೆದ ಘಟನೆ. ಅವನು ದೃಶ್ಯ ಸಿನಿಮಾ ಮಾದರಿ ಕೊಲೆಗೆ ಮೊದಲೇ ಸ್ಕೆಚ್ ರೂಪಿಸಿದ್ದ! ಆದರೆ, ಈ ಯಾವ ಸಂಚೂ ಅತ್ತೆ ಸುಕನ್ಯಾಗೆ ಗೊತ್ತಿರಲಿಲ್ಲ!
ವಿಜಯವಾಡದಿಂದ ಕಾರು, ಹೊಸೂರಿನಿಂದ ಪೆಟ್ರೋಲ್!
ಸುಕನ್ಯಾ ಅವರನ್ನು ಕೊಲೆ ಮಾಡಲು ನಿರ್ಧಾರ ಮಾಡಿದ ಜಶ್ವಂತ್ ತುಂಬಾ ದೊಡ್ಡ ಪ್ಲ್ಯಾನ್ ಮಾಡಿದ್ದ. ಆಂಧ್ರ ಪ್ರದೇಶದ ವಿಜಯವಾಡದಿಂದ ಕಾರನ್ನು ತಂದಿದ್ದ. ಮೊದಲೇ ಸುಟ್ಟು ಹಾಕಲು ನಿರ್ಧರಿಸಿದ್ದನೋ ಏನೋ, ಹೊಸೂರಿನಿಂದ ಪೆಟ್ರೋಲ್ ತಂದು ಕಾರಿನಲ್ಲಿ ಇಟ್ಟುಕೊಂಡಿದ್ದ.
ಫೆಬ್ರವರಿ 12ರಂದು ಆತ ಅತ್ತೆ ಸುಕನ್ಯಾಳನ್ನು ಕಾರಲ್ಲಿ ಡ್ರೈವ್ ಹೋಗಿ ಬರೋಣ ಎಂದು ಕರೆದಿದ್ದಾನೆ. ಆತನ ಜತೆ ಸಲುಗೆಯಿಂದ ಇದ್ದ ಸುಕನ್ಯಾ ಓಕೆ ಅಂತ ಹೊರಟುಬಿಟ್ಟಿದ್ದಾಳೆ. ಹಾಗೆ ಕಾರಿನಲ್ಲಿ ಹೋಗುವಾಗ ಸರಸ ನಡೆಯಿತೋ, ವಿರಸ ನಡೆಯಿತೋ ಗೊತ್ತಿಲ್ಲ. ಅಂತೂ ಒಂದು ಹಂತದಲ್ಲಿ ಜಶ್ವಂತ್ ತನ್ನ ಪ್ಲ್ಯಾನನ್ನು ಎಕ್ಸಿಕ್ಯೂಟ್ ಮಾಡಲು ನಿರ್ಧರಿಸಿದ್ದಾನೆ.
ಕಾರಿನಲ್ಲಿ ಹೋದ ಅವರಿಬ್ಬರೂ ಬಿಂಗೀಪುರದ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಆತ ಸುಕನ್ಯಾ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಗುರುತು ಸಿಗಬಾರದೆಂದು ಮಹಿಳೆ ಕೂದಲು ಕತ್ತರಿಸಿದ್ದಾನೆ. ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದ ಕಾಂಪೌಂಡ್ ನಲ್ಲಿ ಬಳಿ ಹಾಕಿದ. ಮೊದಲೇ ತಂದಿದ್ದ ಪೆಟ್ರೋಲ್ ಸುರಿದು ಮೃತದೇಹಕ್ಕೆ ಬೆಂಕಿ ಹಚ್ಚಿದ. ಎಲ್ಲ ಮುಗಿದ ಮೇಲೆ ಅಲ್ಲಿ ಉಳಿದದ್ದು ತಲೆಬುರುಡೆ ಮತ್ತು ಕೆಲವು ಮೂಳೆಗಳು ಮಾತ್ರ. ಅದುವೇ ಬನ್ನೇರುಘಟ್ಟ ಪೊಲೀಸರಿಗೆ ಸಿಕ್ಕಿದ್ದು!
ಪ್ರೇಮಿಗಳ ದಿನಾಚರಣೆಗೆ ಗೋವಾಕ್ಕೆ ಹೋಗಿದ್ದ!
ಜಶ್ವಂತ್‌ನನ್ನು ಕಾಲ್ ಡಿಟೇಲ್ಸ್ ಆಧಾರದಲ್ಲಿ ವಿಚಾರಣೆ ನಡೆಸಿದ ಪೊಲೀಸರು ಆತನಿಂದ ಒಂದೊಂದೇ ವಿವರವನ್ನು ಹೊರತೆಗೆದರು. ನಿಜವೆಂದರೆ ಕೊಲೆ ಮಾಡಿದ ಬಳಿಕ ಜಶ್ವಂತ್ ಏನೂ ತಿಳಿಯದಂತೆ ಓಡಾಡಿಕೊಂಡಿದ್ದ.
ನಿಜವೆಂದರೆ ಫೆಬ್ರವರಿ 12ಕ್ಕೆ ಕೊಲೆ ಮಾಡಿದ ಜಶ್ವಂತ್ ಫೆಬ್ರವರಿ 14ರಂದು ಗೋವಾದಲ್ಲಿ ಪ್ರೇಮಿಗಳ ದಿನಾಚರಣೆ ಸೆಲೆಬ್ರೇಷನ್ ಮಾಡಿದ್ದ.
ಹಾಗಿದ್ದರೆ ಜಶ್ವಂತ್ ಈ ಕೊಲೆ ಮಾಡಿದ್ದು ಯಾಕೆ?
ಜಶ್ವಂತ್ ಮತ್ತು ಸುಕನ್ಯಾ ಅಳಿಯ ಮತ್ತು ಅತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅದನ್ನೂ ಮೀರಿದ ಯಾವುದಾದರೂ ಸಂಬಂಧ ಅವರ ನಡುವೆ ಇತ್ತೇ ಎನ್ನುವುದು ಪ್ರಶ್ನೆಯಾಗಿದೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಸಂಶಯವಿದ್ದು ಅದರ ಸಲುಗೆಯಲ್ಲೇ ಆತ ಪದೇಪದೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗುತ್ತಿದೆ.
ಕಾರು ಖರೀದಿಸಿದ್ದ ಆತ ಕಾರಿನ ರಿಪೇರಿ ಮತ್ತು ಡ್ಯೂ ಕಟ್ಟಲು ಹಣ ಕೇಳಿದ್ದ ಎನ್ನಲಾಗಿದೆ. ಹಣ ನೀಡದಿದ್ದಾಗ ಸುಕನ್ಯಾ ಅವರ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ಎನ್ನಲಾಗಿದೆ. ಹೀಗೆ ಚಿನ್ನಾಭರಣಕ್ಕಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ