Site icon Vistara News

Physical Abuse: ಲೈಂಗಿಕ ದೌರ್ಜನ್ಯವಾದ್ರೆ ಅಡ್ಜಸ್ಟ್‌ ಮಾಡ್ಕೋ; ಇದು ಅಕ್ಕಮಹಾದೇವಿ ಮಹಿಳಾ ವಿವಿಯ ಕಾಮಕಾಂಡ

Physical abuse Akkamahadevi Womens University

ವಿಜಯಪುರ: ಲೈಂಗಿಕ ಕಿರುಕುಳ (Physical Abuse) ಆಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದರೆ, ಆಂತರಿಕ ದೂರು ಸಮಿತಿಯ ಸದಸ್ಯರು ಪುರುಷರ ಜತೆಗೆ ಸಂಘರ್ಷಕ್ಕಿಳಿಯದೇ ಸಹಿಸಿಕೋ ಎಂದು ಸಲಹೆ ನೀಡಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ (Akkamahadevi Women’s University) ಮತ್ತೊಂದು ಲೈಂಗಿಕ ಕಿರುಕುಳ ಆರೋಪವೊಂದು ಕೇಳಿ ಬಂದಿದೆ.

ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಅಲ್ಲಿನ ಸೂಪರ್‌ವೈಸರ್‌ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾನೆ. ಹೀಗಾಗಿ ದೌರ್ಜನ್ಯ ತಾಳಲಾರದೆ ನೊಂದ ಸಂತ್ರಸ್ತೆ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸಂತ್ರಸ್ತೆ ಪತಿ ಬಸವರಾಜ ಅಕ್ಕಮಹಾದೇವಿ ವಿವಿಯಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ವಿವಿಯ ಕಿರುಕುಳ ತಾಳಲಾರದೇ 2015ರಲ್ಲಿ ಕಾಂಪೌಂಡ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ 2016ರಲ್ಲಿ ಬಸವರಾಜ ಪತ್ನಿಗೆ ವಿಶ್ವವಿದ್ಯಾಲಯದ ಉದ್ಯಾನವನದಲ್ಲಿ ಕೆಲಸ ಸಿಕ್ಕಿತ್ತು.

ಇದನ್ನೂ ಓದಿ: Road Accident : ಕೆಳಗೆ ಬಿದ್ದವನ ಮೇಲೆ ಹರಿಯಿತು ಮೂರ್ನಾಲ್ಕು ವಾಹನಗಳು; ಛಿದ್ರ ಛಿದ್ರಗೊಂಡ ಸವಾರ

ಈ ನಡುವೆ ವಿವಿ ಉದ್ಯಾನವನ ವಿಭಾಗದ ಸೂಪರ್‌ವೈಸರ್‌ ಶ್ರೀಶೈಲ ದೊಡ್ಡಮನಿ ಎಂಬಾತ ನಿತ್ಯ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾನೆ. ಮಾತ್ರವಲ್ಲದೇ ಜಾತಿ ನಿಂದನೆ ಮಾಡಿದ್ದಾನೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಈತನ ಕಾಟಕ್ಕೆ ಬೇಸತ್ತು ಕಳೆದ ಫೆಬ್ರವರಿ 14ರಂದು ವಿವಿಯ ಆಂತರಿಕ ದೂರು ಸಮಿತಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಆದರೆ ಲೈಂಗಿಕ ಕಿರುಕುಳ ಕೊಟ್ಟವರ ವಿರುದ್ಧ ಕ್ರಮಕೈಗೊಳದೇ ನಿರ್ಲಕ್ಷ್ಯ ತೋರಿದ್ದಾರೆ. ಗಂಡಿನ ಜತೆಗೆ ಸಂಘರ್ಷಕ್ಕಿಳಿಯದೇ ಸಹಿಸಿಕೋ ಎಂದು ಆಂತರಿಕ ದೂರು ಸಮಿತಿಯವರು ಸಲಹೆ ನೀಡಿದ್ದರಂತೆ. ನೊಂದವರಿಗೆ ನ್ಯಾಯ ಕೊಡದೆ, ಆರೋಪಿಯ ರಕ್ಷಣೆಗೆ ನಿಂತಿದ್ದಾರೆ ಎಂದು ಮಹಿಳೆ ಕಿಡಿಕಾರಿದ್ದಾರೆ.

ವಿಜಯಪುರದ ಶಾಸ್ತ್ರಿ ನಗರದ ಮೂವರು ಮಕ್ಕಳೊಂದಿಗೆ ವಾಸವಾಗಿರುವ ಮಹಿಳೆಗೆ ಪತಿಯ ಪಿಎಫ್ ಹಣ ಬರಬೇಕಿದೆ. ಆದರೆ ಪಿಎಫ್‌ ಹಣ ನೀಡದೆ ಎಸ್‌ಸಿ ಎಸ್‌ಟಿ ನೌಕರರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ, ಹಣಕಾಸು ವಿಭಾಗದವರು ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಯಾಮಾರಣ ಕೋರಿದ ಸಂತ್ರಸ್ತೆ

ಈ ಎಲ್ಲಾ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮೂವರು ಮಕ್ಕಳೊಂದಿಗೆ ಬದುಕುವುದು ಕಷ್ಟವಾಗಿದೆ. ಪತಿಯ ಪಿಎಫ್ ಹಣ ಸಿಗದೇ ವಿವಿಯ ಹಣಕಾಸು ವಿಭಾಗ ಹಾಗೂ ಎಸ್‌ಸಿ ಎಸ್‌ಟಿ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ ನಡೆಯಿಂದ ಬೇಸತ್ತಿದ್ದೇನೆ‌‌. ಮೂವರು ಮಕ್ಕಳೊಂದಿಗೆ ದಯಾಮರಣಕ್ಕೆ ಅನುಮತಿ ಕೊಡಬೇಕೆಂದು ಮಹಿಳೆ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮಾಡಿ

Exit mobile version