ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ರಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Physical Abuse) ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮ್ಯಾನೇಜ್ಮೆಂಟ್ ವಿಭಾಗದ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ ಅವರಿಂದ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ.
ಹೀಗಾಗಿ ಪಿಎಚ್‌ಡಿ ವಿದ್ಯಾರ್ಥಿನಿ ಮಹಿಳಾ ವಿವಿ ಕುಲಪತಿ ಪ್ರೊ. ತುಳಸೀಮಾಲಾ ಅವರಿಗೆ ದೂರು ನೀಡಿದ್ದಾರೆ. ಕಳೆದ ಫೆಬ್ರವರಿ 27ರಂದು ಬಂದಿರುವ ದೂರಾನ್ನು ಕುಲಪತಿ ಪ್ರೊ. ತುಳಸೀಮಾಲಾ ಅವರು ಆಂತರಿಕ ದೂರು ಸಮಿತಿಗೆ ನೀಡಿದ್ದಾರೆ. ಯುಜಿಸಿ ನಿಯಮಗಳ ಪ್ರಕಾರ ಮಾಡಲಾಗಿರುವ ಆಂತರಿಕ ದೂರು ಸಮಿತಿಯಿಂದ ಈ ಬಗ್ಗೆ ವಿಚಾರಣೆ ನಡೆಯಲಿದೆ.
ವಿಚಾರಣೆಗೆ ಇನ್ನೂ ಸಮಯ ನಿಗದಿ ಮಾಡಿಲ್ಲ. ಮ್ಯಾನೇಜ್ಮೆಂಟ್ ವಿಭಾಗದ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ ಕಳೆದ 2017 ರಿಂದ ಮಹಿಳಾ ವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪ್ರಕರಣ ಕುರಿತು ವಿದ್ಯಾರ್ಥಿನಿಗೆ ನ್ಯಾಯ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯ ಮಾಡಿವೆ.
ಇದನ್ನೂ ಓದಿ: Physical Abuse : ಯುವತಿಯನ್ನು ಪ್ರವಾಸಕ್ಕೆ ಕರೆದೊಯ್ದು ಗ್ಯಾಂಗ್ ರೇಪ್; ಇಬ್ಬರು ಕಿರಾತಕರಿಗೆ 20 ವರ್ಷ ಜೈಲು
ಬಾಲಕಿ ಮೇಲೆ ಅತ್ಯಾಚಾರ; ಅಸಾರಾಂ ಬಾಪುಗೆ ಜೈಲೇ ಗತಿ
ನವದೆಹಲಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು (Asaram Bapu) ಅವರಿಗೆ ಭಾರಿ ಹಿನ್ನಡೆಯಾಗಿದೆ. ಜಾಮೀನು ಕೋರಿ ಅಸಾರಾಂ ಬಾಪು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದ್ದು, ರಾಜಸ್ಥಾನ ಹೈಕೋರ್ಟ್ (Rajasthan High Court) ಮೊರೆ ಹೋಗುವಂತೆ ಸೂಚಿಸಿದೆ. ಹಾಗೆಯೇ, ಅಸಾರಾಂ ಬಾಪು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ರಾಜಸ್ಥಾನ ಹೈಕೋರ್ಟ್‌ಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.
ಅಸಾರಾಂ ಬಾಪು ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದ ಮಂಡಿಸಿದರು. “ಅಸಾರಾಂ ಬಾಪು ಅವರಿಗೆ ಈಗಾಗಲೇ ಹಲವು ಬಾರಿ ಹೃದಯಾಘಾತವಾಗಿದೆ. ಓಪನ್ ಹಾರ್ಟ್ ಸರ್ಜರಿಗೆ ಒಳಗಾಗುವ ಸ್ಥಿತಿಯಲ್ಲೂ ಅವರಿಲ್ಲ. ಆದರೆ, ಪೊಲೀಸ್ ಕಸ್ಟಡಿಯಲ್ಲೇ ಅವರು ಚಿಕಿತ್ಸೆ ಪಡೆಯಲು ಇಚ್ಛಿಸುತ್ತಿದ್ದಾರೆ. ಅವರ ಅನಾರೋಗ್ಯದ ದೃಷ್ಟಿಯಿಂದ ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಾಂಕರ್ ದತ್ತ ಅವರಿದ್ದ ಪೀಠವು, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚಿಸಿತು.
The Supreme Court today dismissed self-styled godman Asaram Bapu's challenge to a Rajasthan High Court order, which rejected his plea for suspension of sentence on health grounds in a case where he was convicted for a minor's rape.
— Live Law (@LiveLawIndia) March 1, 2024
Read more: https://t.co/kbfRtZeSVC… pic.twitter.com/0WqbnGNu0G
ಏನಿದು ಪ್ರಕರಣ?
ಅಸಾರಾಂ ಬಾಪು ಅವರು 2013ರಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬಯಲಾಗುತ್ತಲೇ ಅವರ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2018ರಲ್ಲಿ ಅಧೀನ ನ್ಯಾಯಾಲಯವು ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ, 2023ರಲ್ಲಿ ಕೂಡ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಸಾರಾಂ ಬಾಪು ಎಂದು ಪ್ರಖ್ಯಾತಿ ಪಡೆದಿರುವ ಈ ದೇವಮಾನವನ ನಿಜ ಹೆಸರು ಅಸುಮಲ್ ಹರ್ಪಲಾನಿ. 1970ರ ದಶಕದಲ್ಲಿ ಅಹಮದಾಬಾದ್‌ನ ಶಬರಮತಿ ನದಿ ದಡದಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಆ ಆಶ್ರಮದಲ್ಲಿ ಪ್ರಸಿದ್ಧಿ ಪಡೆದ ಅವರು ನಂತರ ಅದನ್ನೇ ತಮ್ಮ ಉದ್ಯಮವನ್ನಾಗಿ ಮಾಡಿಕೊಂಡು ದೇಶದ ಹಲವಾರು ಭಾಗಗಳಲ್ಲಿ ಆಶ್ರಮಗಳನ್ನು ತೆರೆದರು. ಹಲವು ಗುರುಕುಲಗಳನ್ನೂ ನಡೆಸಿದರು. ಅವರ ಆಶ್ರಮದ ವತಿಯಿಂದ ರಿಷಿ ಪ್ರಸಾದ್ ಹೆಸರಿನ ಮಾಸಿಕ ಪತ್ರಿಕೆಯೂ ಬಿಡುಗಡೆಯಾಗುತ್ತಿದ್ದು, ಅದೂ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.
ಇದನ್ನೂ ಓದಿ: love and Crime : ನೋಡಿ ಸ್ವಾಮಿ.. ನೀನೇ ಬೇಕು ಎಂದು ಟೆಕ್ಕಿ ಮಹಿಳೆ ಬೆನ್ನುಹತ್ತಿದ್ದಾನೆ ಈ ಆಸಾಮಿ!
ಈ ಅಸಾರಾಂ ಬಾಪು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಕಾಲದಲ್ಲಿ ಅವರಿಗೆ ಸಾಮಾನ್ಯರ ಜತೆಯಲ್ಲಿ ಗಣ್ಯರೂ ಕೂಡ ಅನುಯಾಯಿಗಳಾಗಿದ್ದರು. ಆಗಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಈ ಅಸಾರಾಂರನ್ನು ಭೇಟಿ ಮಾಡುತ್ತಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್, ದಿಗ್ವಿಜಯ ಸಿಂಗ್ ಕೂಡ ಅಸಾರಾಂರನ್ನು ಭೇಟಿ ಮಾಡಿರುವವರೇ. ಹಾಗೆಯೇ ಮೂರು ನಕಲಿ ಎನ್‌ಕೌಂಟರ್ ಆರೋಪದಲ್ಲಿ ಜೈಲು ಸೇರಿ ಬಿಡುಗಡೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಡಿ.ಜೆ.ವಂಜಾರಾ ಕೂಡ ಅಸಾರಾಂ ಅನುಯಾಯಿಗಳಾಗಿದ್ದವರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ