ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನರಾಗಿ ಇಂದಿಗೆ ಮೂರು ದಿನಗಳಾಗಿವೆ.… ಇಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹಿಸುವ ಕಾರ್ಯ ನೆರವೇರಲಿದೆ. (Siddeshwar Swamiji) ಸಕಲ ವಿಧಿ ವಿಧಾನಗಳ ಮೂಲಕ ಚಿತಾಭಸ್ಮ ಸಂಗ್ರಹ ನಡೆಯಲಿದೆ.
ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕೈಂಕರ್ಯ…ನಡೆಯಲಿದೆ. ಚಿತಾಭಸ್ಮವನ್ನು ದೇಶದ ನಾಲ್ಕು ನದಿಗಳು ಹಾಗೂ ಒಂದು ಸಾಗರದಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ.
ಚಿತಾಭಸ್ಮಕ್ಕೆ ಹಾಲು, ನೀರು, ತುಪ್ಪ ಹಾಕಿ ಶಾಂತ ಮಾಡಲಾಗುತ್ತದೆ.…ನಂತರ ಮಡಕೆಯಲ್ಲಿ ಅಥವಾ ತಾಮ್ರದ ತಂಬಿಗೆಯಲ್ಲಿ ಸಂಗ್ರಹಿಸಲಾಗುತ್ತದೆ. ಐದನೇ ದಿನ ವಿಸರ್ಜನೆ ಮಾಡಲಾಗುತ್ತದೆ.
ಬೆಳಗಿನ ಜಾವದಲ್ಲೇ ಆಶ್ರಮಕ್ಕೆ ಭಕ್ತರ ದೌಡು:
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವಿರುವ ಸ್ಥಳಕ್ಕೆ ಹಾಗೂ ಅದರ ಶ್ರೀಗಳ ಭಾವಚಿತ್ರಕ್ಕೆ ಭಕ್ತರು…ನಮಿಸುತ್ತಿದ್ದಾರೆ. ಆಶ್ರಮದಲ್ಲಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಪ್ರಣವ ಮಂಟಪದ ಮುಂದೆ ಶಿವನಾಮ ಜಪ…ನಡೆಯುತ್ತಿದೆ.
ಎಂದಿನಂತೆ ಬೆಳಗ್ಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಪ್ರಾರ್ಥನೆ ನಡೆಯಿತು. ಬೆಳಗಿನ ಜಾವದಲ್ಲಿ ನಿತ್ಯವೂ ಪ್ರಾರ್ಥನೆ ನಡೆಯುತ್ತದೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುಗಳಾದ ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಬಳಿ ಪ್ರಾರ್ಥನೆ ನೆರವೇರಿತು.