ವಿಜಯಪುರ: ಎರಡು ವರ್ಷದಿಂದ ಹಿಂದೂ ಯುವಕನೊಬ್ಬ ಮುಸ್ಲಿಂ ಸಮುದಾಯದ ಯುವತಿಯ ಜತೆ ಮಾತು ಬೆಳಿಸಿದ್ದ. ಮಾತಾಡಿದ ವಿಚಾರವಾಗಿಯೇ ಎಂಟು ಜನರು ಸೇರಿಕೊಂಡು ಬರ್ಬರವಾಗಿ (Murder Case) ಯುವಕನನ್ನು ಹತ್ಯೆಗೈದಿದ್ದಾರೆ.
ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಪ್ರಶಾಂತ್ ಕ್ಷತ್ರಿ ಎಂಬ ಯುವಕ ಆಯಿಶಾ ಮೋರಟಗಿ ಎಂಬ ಯುವತಿ ಜತೆ ಮಾತು ಬೆಳೆಸಿದ್ದ. ಮೊಹರಂ ಹಬ್ಬದಲ್ಲಿ ಇಬ್ಬರು ಭೇಟಿಯಾಗಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಎಂಟು ಜನರು ಕೂಡಿಕೊಂಡು ಆಯುಧದಿಂದ ಮಂಗಳವಾರ (ಆ.24) ಯುವಕನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಇದನ್ನೂ ಓದಿ | ವಿಜಯಪುರದಲ್ಲಿ ಟೀ ಕುಡಿಯುವ ತಗಾದೆ, ಒಬ್ಬನ ಹತ್ಯೆ
ಆರೋಪಿಗಳಾದ ಬಸೀರ್ ಮುಲ್ಲಾ, ರಿಯಾಜ್ ಮುಲ್ಲಾ, ಲಾಲಸಾಬ್ ಮುಲ್ಲಾ, ಶಕೀಲ್ ಮುಲ್ಲಾ, ರಾಜು ಮುಲ್ಲಾ, ರಸೀದ್ ಮೋರಟಗಿ, ಮೈನುದ್ದೀನ್ ಮುಲ್ಲಾ, ಆರೀಫ್ ಮುಲ್ಲಾ ಯುವಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ಆಲಮೇಲ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡಿದೆ.