ವಿಜಯಪುರ : ಹೆಂಡತಿ ಜಮೀನು ಮಾರಲು ಒಪ್ಪದೇ ಇದ್ದ ಕಾರಣ ಪಾಪಿ ತಂದೆ ಎಗ್‌ರೈಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿದ್ದಾನೆ. ಇದರ ಪರಿಣಾಮ ಎರಡುವರೆ ವರ್ಷದ ಗಂಡು ಮಗು ಪ್ರಾಣ ಕಳೆದುಕೊಂಡಿದ್ದು, 5 ವರ್ಷದ ಮಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರದ ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಿಷ ಬೆರೆಸಿದ ಎಗ್ ರೈಸ್ ಸೇವಿಸಿದ ಪರಿಣಾಮ ಮಗ ಶಿವರಾಜ್ ಅರಸನಾಳ (ಎರಡುವರೆ ವರ್ಷ) ತಾಲೂಕು ಆಸ್ಪತ್ರೆಗೆ ತರುವಷ್ಟರಲ್ಲೇ ಸಾವನಪ್ಪಿದ್ದಾನೆ. ಮೃತ ಮಗುವಿನ ಅಕ್ಕ ರೇಣುಕಾ (5) ಅದೇ ವಿಷಬೆರೆತ ಎಗ್ ರೈಸ್ ಸೇವಿಸಿ ದಕ್ಕೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
ಇದನ್ನೂ ಓದಿ | ಪಬ್-ಜಿ ಆಡಲು ಬಿಡಲಿಲ್ಲ ಎಂದು ತಾಯಿಯನ್ನೇ ಗುಂಡಿಟ್ಟು ಕೊಂದ 16ರ ಬಾಲಕ, ಬಳಿಕ ಮಾಡಿದ್ದೇನು?
ಆರೋಪಿ ಚಂದ್ರಶೇಖರ ಮೈತುಂಬ ಸಾಲಮಾಡಿಕೊಂಡಿದ್ದ. ಅದಕ್ಕಾಗಿ ಹೆಂಡತಿ ಜಮೀನು ಮಾರುವುದಕ್ಕೆ ಒಪ್ಪದ ಹಿನ್ನಲೆಯಲ್ಲಿ ಕುಪಿತಗೊಂಡು ಮಕ್ಕಳಿಗೆ ಎಗ್‌ರೈಸ್‌ನಲ್ಲಿ ವಿಷ ಹಾಕಿದ್ದಾನೆ. ಚಂದ್ರಶೇಖರ್ ಅರಸನಾಳ ವಿರುದ್ಧ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಊಟ ಬೇಕೆಂದು ಅಳುತ್ತಿದ್ದ ಕಂದಮ್ಮಗಳ ಕತ್ತು ಹಿಸುಕಿ ಕೊಂದ ಹೆತ್ತಮ್ಮ