Site icon Vistara News

Election News | ವಿಜಯಪುರ ಮಹಾನಗರ ಪಾಲಿಕೆ ವಾರ್ಡ್‌ ಮೀಸಲಾತಿ ಪ್ರಕಟ

Election

ವಿಜಯಪುರ : ತೀವ್ರ ಕುತೂಹಲ ಮೂಡಿಸಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ(Election News) ಸಂಬಂಧಿಸಿದಂತೆ ಎಲ್ಲ 35 ವಾರ್ಡ್‌ಗಳಿಗೆ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಾಕಾಶ ನೀಡಲಾಗಿದೆ.

ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ನಗರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಆಕಾಂಕ್ಷಿಗಳು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಒಟ್ಟು 35 ವಾರ್ಡ್‌ಗಳ ಪೈಕಿ 16 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ನಾನಾ ವರ್ಗವಾರು ಮೀಸಲಾತಿ ನೀಡಲಾಗಿದೆ.

ವಿವಿಧ ವಾರ್ಡ್‌ ಸಂಖ್ಯೆ ಹಾಗೂ ಮೀಸಲಾತಿ ವಿವರ ಈ ಕೆಳಗಿನಂತಿದೆ.

1ನೇ ವಾರ್ಡ್-ಹಿಂದುಳಿದ ವರ್ಗ- ಎ ಮಹಿಳೆ
2ನೇ ವಾರ್ಡ್‌-ಪರಿಶಿಷ್ಟ ಜಾತಿ
3ನೇ ವಾರ್ಡ್-ಪರಿಶಿಷ್ಟ ಜಾತಿ ಮಹಿಳೆ
4ನೇ ವಾರ್ಡ್-ಸಾಮಾನ್ಯ
5ನೇ ವಾರ್ಡ್ ಹಿಂದುಳಿದ ವರ್ಗ- ಬಿ ಮಹಿಳೆ
6ನೇ ವಾರ್ಡ್-ಸಾಮಾನ್ಯ
7ನೇ ವಾರ್ಡ್-ಹಿಂದುಳಿದ ವರ್ಗ-1
8ನೇ ವಾರ್ಡ್- ಸಾಮಾನ್ಯ ಮಹಿಳೆ
9ನೇ ವಾರ್ಡ್-ಹಿಂದುಳಿದ ವರ್ಗ- ಬಿ
10ನೇ ವಾರ್ಡ್-ಸಾಮಾನ್ಯ
11ನೇ ವಾರ್ಡ್-ಪರಿಶಿಷ್ಟ ಜಾತಿ
12ನೇ ವಾರ್ಡ್-ಸಾಮಾನ್ಯ
13ನೇ ವಾರ್ಡ್-ಹಿಂದುಳಿದ ವರ್ಗ- ಎ
14ನೇ ವಾರ್ಡ್-ಪರಿಶಿಷ್ಟ ಜಾತಿ ಮಹಿಳೆ
15ನೇ ವಾರ್ಡ್‌- ಸಾಮಾನ್ಯ ಮಹಿಳೆ
16ನೇ ವಾರ್ಡ್-ಹಿಂದುಳಿದ ವರ್ಗ- 1 ಮಹಿಳೆ
17ನೇ ವಾರ್ಡ್-ಸಾಮಾನ್ಯ
18ನೇ ವಾರ್ಡ್-ಪರಿಶಿಷ್ಟ ಪಂಗಡ
19ನೇ ವಾರ್ಡ್ ಸಾಮಾನ್ಯ
20ನೇ ವಾರ್ಡ್-ಹಿಂದುಳಿದ ವರ್ಗ- ಎ
21ನೇ ವಾರ್ಡ್-ಸಾಮಾನ್ಯ ಮಹಿಳೆ
22ನೇ ವಾರ್ಡ್-ಹಿಂದುಳಿದ ವರ್ಗ-1 ಮಹಿಳೆ
23ನೇ ವಾರ್ಡ್-ಸಾಮಾನ್ಯ
24ನೇ ವಾರ್ಡ್- ಸಾಮಾನ್ಯ
25ನೇ ವಾರ್ಡ್- ಹಿಂದುಳಿದ ವರ್ಗ- ಎ
26ನೇ ವಾರ್ಡ್-ಸಾಮಾನ್ಯ ಮಹಿಳೆ
27ನೇ ವಾರ್ಡ್-ಹಿಂದುಳಿದ ವರ್ಗ- ಎ ಮಹಿಳೆ
28ನೇ ವಾರ್ಡ್ -ಸಾಮಾನ್ಯ
29ನೇ ವಾರ್ಡ್-ಪರಿಶಿಷ್ಟ ಜಾತಿ
30ನೇ ವಾರ್ಡ್-ಹಿಂದುಳಿದ ವರ್ಗ- ಎ
31ನೇ ವಾರ್ಡ್-ಸಾಮಾನ್ಯ ಮಹಿಳೆ
32ನೇ ವಾರ್ಡ್-ಸಾಮಾನ್ಯ ಮಹಿಳೆ
33ನೇ ವಾರ್ಡ್-ಸಾಮಾನ್ಯ ಮಹಿಳೆ
34ನೇ ವಾರ್ಡ್-ಸಾಮಾನ್ಯ ಮಹಿಳೆ
35ನೇ ವಾರ್ಡ್-ಸಾಮಾನ್ಯ ಮಹಿಳೆ

Exit mobile version