ವಿಜಯಪುರ : ಜಿಲ್ಲೆಯ ಸಿಂದಗಿ (Vijaypura News) ಪುರಸಭೆ ಸದಸ್ಯ ಭೀಮಣ್ಣ ಕಲಾಲ ವಿರುದ್ಧ ಶುಕ್ರವಾರ (ಸೆ.23) ಎಫ್‌ಐಆರ್ ದಾಖಲುಗೊಂಡಿದೆ. ಮನೆ ಉತಾರೆ (ಭೂಮಿಯ ಹಕ್ಕು ಪತ್ರ) ಕೊಡುವ ವಿಷಯಕ್ಕೆ ಭೀಮಣ್ಣ ರಂಪಾಟ ಮಾಡಿರುವ ಆರೋಪ ಕೇಳಿ ಬಂದಿದೆ.
ಪುರಸಬೆ ಸಿಬ್ಬಂದಿ ಬಂಧಗಿಸಾಬ ಮಂಡೆಗೆ ಸದಸ್ಯ ಭೀಮಣ್ಣ ಕಲಾಲ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ. ಮನೆ ಉತಾರೆ ಕೊಡುವ ವಿಷಯಕ್ಕೆ ಬಂಧಗಿಸಾಬ ಜತೆ ಭೀಮಣ್ಣ ಗಲಾಟೆ ಮಾಡಿದ್ದ. ಮನೆಯ ಉತಾರೆಗೆ ಅರ್ಜಿ ಸಲ್ಲಿಸಿದ ಕೂಡಲೆ ಮನೆ ಉತಾರೆ ಕೊಡಲು ಪಟ್ಟು ಹಿಡಿದಿದ್ದ. ಕೊಡಲು ಬಂಧಗಿ ಸಾಬ ಸಮಯ ಕೇಳಿದ್ದಕ್ಕೆ ಸದಸ್ಯ ಭೀಮಣ್ಣ ಗಲಾಟೆ ಮಾಡಿದ್ದಾನೆ. ಬಂಧಗಿ ಸಾಬನ ಕಚೇರಿಯ ಕಾಗದ ಪತ್ರ ಬಿಸಾಕಿ, ಸರಕಾರಿ ಕೆಲಸಕ್ಕೆ ಅಡ್ಡಿ ಮಾಡಿ ಹಲ್ಲೆಗೆ ಯತ್ನ ಮಾಡಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದೆ.
ಗಲಾಟೆ ಬಿಡಿಸಲು ಬಂದ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ವಿರುದ್ಧವೂ ಸದಸ್ಯ ರಂಪಾಟ ಮಾಡಿದ್ದ ಎನ್ನಲಾಗಿದೆ. ಪುರಸಭೆ ಮುಖ್ಯಾಧಿಕಾರಿ ರಾಜಶ್ರೀಯಿಂದ ಎಫ್‌ಐಆರ್ ದಾಖಲುಗೊಂಡಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | NIA Raid | ಹಿಜಾಬ್ ಗಲಾಟೆಯಿಂದ ಹಿಡಿದು ಆರ್‌ಎಸ್‌ಎಸ್ ಪ್ರಮುಖರ ಹತ್ಯೆವರೆಗೆ ಪಿಎಫ್‌ಐ ವಿರುದ್ಧ ಹಲವು ಆರೋಪ