Site icon Vistara News

Youth drowned: ಗೆಳೆಯನ ಜತೆ ಮೀನು ಹಿಡಿಯಲು ಹೋದ ಯುವಕ ತೆಪ್ಪ ಮಗುಚಿ ನೀರುಪಾಲು

youth drowned near Vijayapura

#image_title

ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ (Youth drowned) ವಿಜಯಪುರ ಜಿಲ್ಲೆಯ (Vijayapura news) ಮುದ್ದೇಬಿಹಾಳ ತಾಲ್ಲೂಕಿನ ತಾರನಾಳ ಕೆರೆಯಲ್ಲಿ (Taranaa pond) ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸೋಮವಾರ ಮುಂಜಾನೆ ಶವ ಪತ್ತೆಯಾಗಿದೆ.

ಮಂಜುನಾಥ ಶಿವಪ್ಪ ಚಲವಾದಿ (17) ಮತ್ತು ಇನ್ನೊಬ್ಬ ಯುವಕ ಮನೆಯವರಿಗೆ ತಿಳಿಸದೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ತೆಪ್ಪ ಬಳಸಿ ಅವರು ಮೀನು ಹಿಡಿಯುತ್ತಿದ್ದರು. ಆದರೆ, ಒಂದು ಹಂತದಲ್ಲಿ ಅವರು ಸಾಗುತ್ತಿದ್ದ ತೆಪ್ಪ ಪಲ್ಟಿಯಾಗಿದೆ.

ತೆಪ್ಪ‌ ಮಗುಚಿ ಯುವಕರು ಮುಳುಗುತ್ತಿರುವುದು ಗಮನಿಸಿದ ದಾರಿಹೋಕರೊಬ್ಬರು ಕೂಡಲೇ ನೀರಿಗೆ ಧುಮುಕಿ ಒಬ್ಬ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಇನ್ನೊಬ್ಬ ಮುಳುಗಿ ಆಗಿತ್ತು.

ಇತ್ತ ರಕ್ಷಿಸಲ್ಪಟ್ಟ ಯುವಕ ಜನರು ತನ್ನನ್ನೇ ತಪ್ಪಿತಸ್ಥ ಎಂದು ಗುರುತಿಸಿ ಹಲ್ಲೆ ಮಾಡಬಹುದು ಎಂಬ ಭಯದಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಕ್ಷಣ ನಾಪತ್ತೆಯಾಗಿದ್ದ.

ಇತ್ತ ವಿಷಯ ತಿಳಿದ ಮಂಜುನಾಥ ಶಿವಪ್ಪ ಚಲವಾದಿ ಮನೆಯವರು ಸ್ಥಳಕ್ಕೆ ಆಗಮಿಸಿದರು. ಇದು ಭಾನುವಾರ ಸಂಜೆ ಕತ್ತಲಾವರಿಸುವ ಹೊತ್ತಿನಲ್ಲಿ ನಡೆದ ಘಟನೆ. ಆದರೂ ಮಾಹಿತಿ ತಿಳಿದು ಸಂಜೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕಾಗಮಿಸಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಕೆಲವು ಸೀಮಿತ ಸಲಕರಣೆಗಳಷ್ಟೇ ಇದ್ದಿದ್ದರಿಂದ ಮತ್ತು ಕತ್ತಲಾಗಿದ್ದರಿಂದ ಹೆಚ್ಚಿನ ಹುಡುಕಾಡ ಆಗಿರಲಿಲ್ಲ.

ಅಗ್ನಿಶಾಮಕ‌ ದಳದ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿಯಾಗದೆ ಅಸಹಾಯಕರಾಗಿ ಮರಳಿದ್ದ.ರು. ಸೋಮವಾರ ಬೆಳಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತೆ ತಾರನಾಳ ಕೆರೆ ಪ್ರದೇಶಕ್ಕೆ ಆಗಮಿಸಿದರೂ ಆದರೆ ಕಾರ್ಯಾಚರಣೆಗೆ ಬೋಟ್ ಸೇರಿದಂತೆ ತುರ್ತು ಸಂದರ್ಭದಲ್ಲಿ ಬಳಸುವ ಯಾವುದೇ ಆಧುನಿಕ ತಂತ್ರಜ್ಞಾನ ಆಧಾರಿತ ಸಲಕರಣೆಗಳು ಇರಲಿಲ್ಲ.

ಇದನ್ನೂ ಓದಿ: Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!

ಅಗ್ನಿ ಶಾಮಕ ದಳ ಸಿಬ್ಬಂದಿ ಅಸಹಾಯಕರಾಗಿ ಕೆರೆ ಬಳಿಯೇ ಕೈಕಟ್ಟಿ ನಿಂತರೂ ಗ್ರಾಮಸ್ಥರು ಮಾತ್ರ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರು. ಕೊನೆಗೂ ಯುವಕನ ಶವ ಹೊರತೆಗೆಯುವಲ್ಲಿ ಗ್ರಾಮಸ್ಥರು ಯಶಸ್ವಿ.ಯಾಗಿದ್ದಾರೆ.

ನಿಜವೆಂದರೆ ಯುವಕ ಚಲವಾದಿ ತಾನೇ ಮೀನಿಗೆ ಬಲೆಗೆ ತಾನೇ ಸಿಲುಕಿಕೊಂಡಿದ್ದ. ಶವ ಮೀನಿನ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಕಂಡುಬಂತು.

ತಾರನಾಳ ಕೆರೆ ದಂಡೆ ಮೇಲೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳಕ್ಕೆ ತುರ್ತು ಸಂದರ್ಭದಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಸಲಕರೆಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜತೆಗೆ ಕಷ್ಟದ ಸಂದರ್ಭದಲ್ಲೂ ನೀರಿಗಿಳಿದು ಶವ ಮೇಲೆತ್ತಲು ಸಹಕಾರ ನೀಡಿದ ಊರಿನ ಯುವಕರ ಸಾಹಸವೂ ಮೆಚ್ಚುಗೆಗೆ ಪಾತ್ರವಾಗಿದೆ.

Exit mobile version