Site icon Vistara News

VISTARA TOP 10 NEWS : ಹಿರಿಯರ ಮನೆಯತ್ತ ವಿಜಯೇಂದ್ರ, ವಿದೇಶಗಳಲ್ಲಿ ಭಾರತ ವಿರೋಧಿಗಳ ಹತ್ಯೆ ಮತ್ತಿತರ ಸುದ್ದಿಗಳು

Top 10 news

1. ಹಿರಿಯರ ಮನೆಯತ್ತ ವಿಜಯೇಂದ್ರ ನಡೆ; ಬೊಮ್ಮಾಯಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ
ಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ (BY Vijayendra) ಅವರು ಮೊದಲು ಬೂತ್‌ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಮೂಲಕ ಅಧ್ಯಕ್ಷ ಸ್ಥಾನದ ಕಾರ್ಯಭಾರವನ್ನು ಆರಂಭ ಮಾಡಿದ್ದರು. ಇದಾದ ಬಳಿಕ ಈಗ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೋಮವಾರ (ನ. 13) ಬೆಳಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ, ಅವರ ಆಶೀರ್ವಾದವನ್ನು ಪಡೆದುಕೊಂಡರು. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : BY Vijayendra : ಜನರೇಷನ್ ಚೇಂಜ್ ಪ್ರಕೃತಿ ನಿಯಮ; ವಿಜಯೇಂದ್ರಗೆ ಹಿರಿಯರು ಸಾಥ್‌ ನೀಡಲಿ ಎಂದ ಎಸ್.ಎಂ. ಕೃಷ್ಣ
ಈ ಸುದ್ದಿಯನ್ನೂ ಓದಿ : BY Vijayendra : ತಂದೆಯ ದಾರಿಯಲ್ಲಿ ಹೋಗು, ಯಶಸ್ಸು ಸಿಗುತ್ತದೆ; ವಿಜಯೇಂದ್ರಗೆ ಎಚ್‌.ಡಿ. ದೇವೇಗೌಡ ಕಿವಿಮಾತು
ಈ ಸುದ್ದಿಯನ್ನೂ ಓದಿ : BY Vijayendra : ವಿಜಯೇಂದ್ರ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಟೆನ್ಶನ್‌; ಶೆಟ್ಟರ್‌, ಸವದಿಗೆ ಸಿಗಲಿದೆಯೇ ಸಚಿವ ಭಾಗ್ಯ?

2. ಈ ಮೂರು ಕಾರಣಗಳಿಂದಾಗಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ
ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 9ನೇ ಗೆಲುವು ದಾಖಲಿಸಿದೆ. ಮೆನ್ ಇನ್ ಬ್ಲೂ ತಂಡ ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ದಾಖಲಿಸಿ ಗ್ರೂಪ್ ಹಂತವನ್ನು ಅಜೇಯವಾಗಿ ಕೊನೆಗೊಳಿಸಿದೆ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಒಂದೇ ಆವೃತ್ತಿಯಲ್ಲಿ ಸತತ 9 ಗೆಲುವುಗಳನ್ನು ದಾಖಲಿಸಿ ಸೆಮಿಫೈನಲ್​ಗೆ ಪ್ರವೇಶಿಸಿದೆ. 2003ರ ಆವೃತ್ತಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಮೆನ್ ಇನ್ ಬ್ಲೂ ತಂಡ 8 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ICC World Cup 2023 : ಸೆಮಿಫೈನಲ್​ಗೇರಿದ 4 ತಂಡಗಳ ಸೋಲು-ಗೆಲುವುಗಳ ಇತಿಹಾಸ ಈ ರೀತಿ ಇದೆ
ವಿಶ್ವಕಪ್‌ ಕ್ರಿಕೆಟ್‌ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

3. ಪಾಕ್‌, ಕೆನಡಾ, ಲಂಡನ್‌ನಲ್ಲಿ ಭಾರತ ವಿರೋಧಿ 16 ಉಗ್ರರ ಹತ್ಯೆ; ಕೊಂದ ‘ಅಪರಿಚಿತರು’ ಯಾರು?
ಇಸ್ಲಾಮಾಬಾದ್: ಭಯೋತ್ಪಾದಕರ ನೆಲೆವೀಡಾಗಿರುವ, ಜಗತ್ತಿಗೇ ಉಗ್ರರು ತಲೆನೋವಾಗಿರುವ ಹೊತ್ತಿನಲ್ಲಿ ಪಾಕಿಸ್ತಾನದಲ್ಲಿ ಸಾಲು ಸಾಲಾಗಿ ಉಗ್ರರು ಹತ್ಯೆಗೀಡಾಗುತ್ತಿದ್ದಾರೆ. ಒಂದು ವಾರದಲ್ಲಿಯೇ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾದಲ್ಲಿ ಲಷ್ಕರೆ ತಯ್ಬಾ ಕಮಾಂಡರ್‌ ಅಕ್ರಮ್‌ ಘಾಜಿ, ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಮೌಲಾನಾ ರಹೀಮ್‌ ಉಲ್ಲಾ ತಾರಿಕ್‌ ಹತ್ಯೆಗೀಡಾಗಿದ್ದಾನೆ. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ, ಕೆನಡಾ ಸೇರಿ ಹಲವೆಡೆ 16 ಉಗ್ರರು ಬರೀ ‘ಅಪರಿಚಿತರ’ ಗುಂಡಿಗೆ ಬಲಿಯಾಗಿದ್ದಾರೆ. ಹಾಗಾದರೆ, ಒಂದು ವರ್ಷದಲ್ಲಿ ಹತ್ಯೆಗೀಡಾದ ಉಗ್ರರು ಯಾರು? ಅವರ ಹಿನ್ನೆಲೆ ಏನು? ಯಾವಾಗ ಹತ್ಯೆಯಾಯಿತು ಎಂಬುದರ ಮಾಹಿತಿ ಇಲ್ಲಿದೆ ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

4. ಸಿದ್ದರಾಮಯ್ಯ ಕಾರ್ಯಕ್ರಮಕ್ಕಾಗಿ ಹಂಪಿ ದೇಗುಲಕ್ಕೆ ಮೊಳೆ; ರಾಜ್ಯ ಸರ್ಕಾರಕ್ಕೆ ಎಎಸ್‌ಐ ನೋಟಿಸ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ (Hampi Virupaksha Temple) ಕಂಬಗಳಿಗೆ ಮೊಳೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ದತ್ತಿ ಇಲಾಖೆಗೆ (Endowment Department) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನೋಟಿಸ್‌ ನೀಡಿದೆ. ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆದ ಫೋಟೊಗಳು ವೈರಲ್‌ ಆದ ಬೆನ್ನಲ್ಲೇ ಎಎಸ್‌ಐ ನೋಟಿಸ್ ಜಾರಿಗೊಳಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

5. ಪಾಕಿಸ್ತಾನದ ಕರಾಚಿಯಲ್ಲಿ ಬೀಡುಬಿಟ್ಟ ಚೀನಿ ಜಲಾಂತರ್ಗಾಮಿ, ಯುದ್ಧ ಹಡಗು!
ನವದೆಹಲಿ: ಪಾಕಿಸ್ತಾನಕ್ಕೆ (Pakistan) ಹಣಕಾಸಿನ ಸಹಾಯದ ಜತೆಗೆ ಸೇನಾ ನೆರವನ್ನು (Military Aid) ಚೀನಾ (China) ನೀಡುತ್ತಿರುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದೀಗ, ಚೀನಾ ಪಾಕಿಸ್ತಾನವನ್ನು ಬಳಸಿಕೊಂಡು ಭಾರತದ ಮಗ್ಗಲಿನಲ್ಲೇ ಬಂದು ಕೂತಿದೆ. ಹೌದು, ಎನ್‌ಡಿ ಟಿವಿ ವರದಿಯ ಪ್ರಕಾರ, ಕರಾಚಿ ಬಂದರಿನಲ್ಲಿ (Karachi Port) ಚೀನೀ ಯುದ್ಧನೌಕೆಗಳು(Warships), ಜಲಾಂತರ್ಗಾಮಿ (Submarine) ಮತ್ತು ಸೇನಾ ಬೆಂಬಲ ವ್ಯವಸ್ಥೆಯ ಉಪಸ್ಥಿತಿಯನ್ನು ಉಪಗ್ರಹ ಚಿತ್ರಗಳು ಸೂಚಿಸುತ್ತವೆ. ಅಂದರೆ, ಸೇನಾ ಅಭ್ಯಾಸ ನೆಪದಲ್ಲಿ ಚೀನಾ ಭಾರತದ ಹತ್ತಿರಕ್ಕೆ ತನ್ನ ಯುದ್ಧ ನೌಕಾ ಹಡಗುಗಳನ್ನು ಲಂಗುರ ಹಾಕಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

6. ಭಾರತ ಮೂಲದ ಸಚಿವೆಯನ್ನು ವಜಾಗೊಳಿಸಿದ ರಿಷಿ ಸುನಕ್;‌ ಏಕೆ?
ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ತಮ್ಮ ಸಂಪುಟದ ಸದಸ್ಯೆ ಸುವೆಲ್ಲಾ ಬ್ರೇವರ್‌ಮನ್‌ (Suella Braverman) ಅವರನ್ನು ವಜಾಗೊಳಿಸಿದ್ದಾರೆ. ಸುವೆಲ್ಲಾ ಬ್ರೇವರ್‌ಮನ್‌ ಅವರು ಸುನಕ್‌ ಸಂಪುಟದ ಹಿರಿಯ ಸಚಿವೆಯಾಗಿದ್ದರು. ರಿಷಿ ಸುನಕ್‌ (Rishi Sunak) ಹಾಗೂ ಸುವೆಲ್ಲಾ ಬ್ರೇವರ್‌ಮನ್‌ ಅವರು ಭಾರತ ಮೂಲದವರಾಗಿದ್ದು, ಇಬ್ಬರ ಮಧ್ಯೆ ಆತ್ಮೀಯತೆ ಇತ್ತು. ಆದರೀಗ, ಸುವೆಲ್ಲಾ ಬ್ರೇವರ್‌ಮನ್‌ ವಿರುದ್ಧ ಬ್ರಿಟನ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

7. ಅತಿ ವೇಗದಿಂದಲೇ ಕಾರು ಅಪಘಾತ; ನಟ ನಾಗಭೂಷಣ್‌ ವಿರುದ್ಧ ಚಾರ್ಜ್‌ಶೀಟ್‌
ಬೆಂಗಳೂರು: ಕಾರು ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್‌ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಕುಮಾರ ಸ್ವಾಮಿ ಲೇಔಟ್ ಸಂಚಾರ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಪಘಾತಕ್ಕೆ ನಟನ (Actor Nagabhushana) ಅತಿ ವೇಗ ಹಾಗೂ ಅಜಾಗರೂಕತೆಯ ಕಾರು ಚಾಲನೆಯೇ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

8. ವಾಟ್ಸಾಪ್ ಚಾಟ್‌ ಲಾಕ್‌ ಮಾಡಲು ಸೀಕ್ರೆಟ್ ಕೋಡ್! ಇದು ಹೊಸ ಫೀಚರ್
ನವದೆಹಲಿ: ಮೆಟಾ (Meta) ಒಡೆತನದ ವಾಟ್ಸಾಪ್ (WhatsApp) ಮತ್ತೊಂದು ಫೀಚರ್ ಲಾಂಚ್ (New Feature) ಮಾಡಲು ಮುಂದಾಗಿದೆ. ವಾಟ್ಸಾಪ್ ಚಾಟ್‌ಗಳನ್ನು ಲಾಕ್ (WhatsApp Chat Lock) ಮಾಡಲು ಅನುಕೂಲ ಕಲ್ಪಿಸುವ ಹೊಸ ರಹಸ್ಯ ಕೋಡ್‌ (new secret code) ಜಾರಿಗೆ ತರಲಿದೆ ಎಂದು ವರದಿಯಾಗಿದೆ. ಈ ಹೊಸ ಅಪ್‌ಡೇಟ್ ಕೇವಲ ಆಂಡ್ರಾಯ್ಡ್ ಸಾಧನಗಳಲ್ಲಿ (Android devices) ಮಾತ್ರವೇ ಕೆಲಸ ಮಾಡಲಿದ್ದು, ಶೀಘ್ರವೇ ಬೀಟಾ ವರ್ಷನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

9. Tiger 3: ಕುವೈತ್, ಕತಾರ್‌ನಲ್ಲಿ ಟೈಗರ್‌ 3 ಬ್ಯಾನ್‌ ! ಏನು ಕಾರಣ?
ಬೆಂಗಳೂರು: ನವೆಂಬರ್‌ 12ರಂದು ಟೈಗರ್‌ 3 (Tiger 3) ವಿಶ್ವಾದ್ಯಂತ ರಿಲೀಸ್‌ ಆಗಿದೆ. ಸಲ್ಮಾನ್‌ ಖಾನ್ ಅವರ ಅಭಿನಯವನ್ನು ಆರಂಭಿಕ ವಿಮರ್ಶೆಗಳಲ್ಲಿ ವಿಮರ್ಶಕರು ಶ್ಲಾಘಿಸಿದ್ದಾರೆ. ಆದರೆ ಕುವೈತ್ ಮತ್ತು ಕತಾರ್ ರಾಷ್ಟ್ರಗಳಲ್ಲಿ ಸಿನಿಮಾ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಮುಸ್ಲಿಂ ಪಾತ್ರಗಳ ನೆಗೆಟಿವ್‌ ಚಿತ್ರಣದಿಂದಾಗಿ ಚಿತ್ರದ ನಿಷೇಧದ ಹಿಂದೆ ಪ್ರಮುಖ ಅಂಶವಾಗಿರಬಹುದು ಎಂದು ವರದಿಯಾಗಿದೆ. ಇತರ ವರದಿಗಳ ಪ್ರಕಾರ ಕಥೆಯಲ್ಲಿ ಭಾರತ-ಪಾಕಿಸ್ತಾನದ ನಿರೂಪಣೆಯು ನಿಷೇಧದ ಹಿಂದಿನ ಕಾರಣವಾಗಿರಬಹುದು ಎಂತಲೂ ವರದಿಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

10. ಶಕ್ತಿ ಯೋಜನೆ ಎಫೆಕ್ಟ್‌; ಬಸ್‌ ಸೀಟ್‌ಗಾಗಿ ಬಿಗ್‌ ಕಿತ್ತಾಟ; ಚಪ್ಪಲಿಯಿಂದ ಹೊಡೆದಾಟ
ಚಿಕ್ಕೋಡಿ: ಶಕ್ತಿ ಯೋಜನೆ (Shakti Scheme) ಯಿಂದ ಮಹಿಳೆಯರ ಓಡಾಟ (Free Bus service), ಆ ಮೂಲಕ ಸಬಲೀಕರಣವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಅದರ ನಡುವೆಯೇ ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರ (Fight between women in KSRTC Bus) ನಡುವೆ ವಿಪರೀತ ಕಾದಾಟವೂ ಜೋರಾಗಿದೆ. ಬೆಳಗಾವಿಯಲ್ಲಿ ಸರ್ಕಾರಿ ಬಸ್‌ನಲ್ಲಿ (Government bus) ಸೀಟ್‌ಗಾಗಿ ಇಬ್ಬರು ಮಹಿಳೆಯರ ನಡುವೆ ಶುರುವಾದ ಜಗಳ ಕೊನೆಗೆ ಒಬ್ಬ ಬಾಲಕಿಯ ಎಂಟ್ರಿ, ಆಕೆಯ ಮೇಲೆ ಚಪ್ಪಲಿ ಏಟಿನ ತಿರುವಿನೊಂದಿಗೆ ಮುನ್ನುಗ್ಗಿತ್ತು. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version