Site icon Vistara News

VijayNagar Election Results : ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಎಂ ಕೃಷ್ಣಪ್ಪ ಗೆಲುವಿನ ನಾಗಾಲೋಟ

Vijay Nagar Assembly Election Results winner M Krishnappa

#image_title

ಬೆಂಗಳೂರು: ಕಾಂಗ್ರೆಸ್​​ನ ಭದ್ರಕೋಟೆಯಾಗಿರುವ ವಿಜಯನಗರ ಕ್ಷೇತ್ರದಲ್ಲಿ.. ಕಾಂಗ್ರೆಸ್​ನ ಎಂ ಕೃಷ್ಣಪ್ಪ (80157) ಮತ್ತೆ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಚ್​ ರವೀಂದ್ರ (72833) ವಿರುದ್ಧ 7324 ಮತಗಳ ಅಂತರದಿಂದ ವಿಜಯ ಸಾಧಿಸಿದರು. 2018ರ ಚುನಾವಣೆಯಲ್ಲಿ ಕೃಷ್ಣಪ್ಪ ಅವರು ಗೆಲುವು ಸಾಧಿಸಿದ್ದರು. 73,353 ಮತಗಳನ್ನು ಪಡೆದಿದ್ದ ಕೃಷ್ಣಪ್ಪ ಬಿಜೆಪಿಯ ಎಚ್​ ರವೀಂದ್ರ ಅವರಿಂದ ಪ್ರಬಲ ಪೈಪೋಟಿ ಎದುರಿಸಿ ಕೇವಲ 2775 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕ್ಷೇತ್ರ ಪುನರ್‌ ವಿಂಗಡನೆಗೂ ಮುನ್ನ ವಿಜಯನಗರ ಕ್ಷೇತ್ರ ಬಿನ್ನಿಪೇಟೆ ಕ್ಷೇತ್ರದ ಪ್ರಮುಖ ವಾರ್ಡ್‌ ಆಗಿತ್ತು. 2008ರಲ್ಲಿ ಹೊಸ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ ಕೃಷ್ಣಪ್ಪ 70,457 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಪ್ರಮೀಳಾ ನೇಸರ್ಗಿ ಎದುರು 38,625 ವೋಟುಗಳ ಭರ್ಜರಿ ಗೆಲುವು ಪಡೆದಿದ್ದರು. 2013ರಲ್ಲಿ ಬಿಜೆಪಿಯಲ್ಲಿದ್ದ ಸೋಮಣ್ಣ ಅವರನ್ನು ಸೋಲಿಸಿದ್ದರು.

ಈ ಕಷೇತ್ ಇಲ್ಲಿನ ಒಟ್ಟು ಮತದಾರರ ಸಂಖ್ಯೆ 2,10,400, ಇದರಲ್ಲಿ ಒಕ್ಕಲಿಗರ ಸಮುದಾಯದ ಪ್ರಾಬಲ್ಯವಿದೆ. ಲೆಕ್ಕಾಚಾರಗಳ ಪ್ರಕಾರ 51,000 ಜನಸಂಖ್ಯೆಯನ್ನು ಈ ಸಮುದಾಯ ಹೊಂದಿದ್ದರೆ, ಎಸ್ಸಿ, ಎಸ್ಟಿ ಮತದಾರರ ಸಂಖ್ಯೆ 42,500, ಇನ್ನೂ ಮುಸ್ಲಿಂ ಮತದಾರರು 37,000 ಹಾಗೂ 38,500ರಷ್ಟು ಒಬಿಸಿ ಮತದಾರರಿದ್ದಾರೆ.

Exit mobile version