Site icon Vistara News

ವಿಜಯಪುರದ ಖಾಸಗಿ ಮೆಡಿಕಲ್‌ ಕಾಲೇಜು ಆವರಣದಲ್ಲಿ ನಾಯಿಗಳಿಗೆ ಹಿಂಸೆ ಆರೋಪ, ನಿಜವಾಗಿ ನಡೆದಿದ್ದೇನು?

murugha mutt animals

ವಿಜಯಪುರ: ನಗರದ ಬಿ.ಎಂ ಪಾಟೀಲ್ ವೈದ್ಯಕೀಯ ಕಾಲೇಜು ಆವರಣದಲ್ಲಿ ನಾಯಿಗಳ ಮೇಲೆ ಅಮಾನವೀಯವಾಗಿ ಹಿಂಸೆ ನೀಡಲಾಗಿದೆ ಎಂದು ಆಪಾದಿಸಲಾಗಿದ್ದು, ಈ ಕುರಿತ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಕಾಲೇಜು ಕ್ಯಾಂಪಸ್‌ನಲ್ಲಿದ್ದ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಅವುಗಳನ್ನು ಸ್ಥಳಾಂತರ ಮಾಡಲಾಗಿದೆ. ಬೀದಿನಾಯಿಗಳಿಗೆ ಹಿಂಸೆ ನೀಡಲಾಗಿದೆ ಎಂದು ಆಪಾದಿಸಿ ವಿಡಿಯೊಗಳು ಹರಿದಾಡಿವೆ. ಅದರಲ್ಲಿ ನಾಯಿಗಳನ್ನು ಒಂದು ಕೋಲಿಗೆ ಕಟ್ಟಿ ಎತ್ತಿಕೊಂಡು ಹೋಗುತ್ತಿರುವುದು ಸೇರಿದಂತೆ ಹಲವು ದೃಶ್ಯಗಳಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ ಮತ್ತು ಫೋಟೊಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ… ತಕ್ಷಣವೇ ಸ್ಥಳಕ್ಕೆ ಪಶು ವೈದ್ಯರ, ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ತಪಾಸಣೆ ನಡೆಸಿದೆ.

ನಾಯಿಗಳನ್ನು ಯಾವುದೇ ಹಿಂಸೆ ನೀಡದೆ ಕಾಲೇಜು ಆವರಣದಲ್ಲಿ ತಂದು ಬಿಡಲಾಗಿದೆ ಎನ್ನುತ್ತದೆ ಆಡಳಿತ ಮಂಡಳಿ

ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿ ಹೇಳುವುದೇನು?
ಕಾಲೇಜಿನ ಆವರಣದಲ್ಲಿ ಹಲವು ಬೀದಿ ನಾಯಿಗಳಿವೆ. ಅವುಗಳ ಪೈಕಿ ಐದಾರು ನಾಯಿಗಳು ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ದೂರು ಬಂದಿತ್ತು. ಇಬ್ಬರು ವಿದ್ಯಾರ್ಥಿನಿಯರಿಗೆ ನಾಯಿಗಳು ಕಚ್ಚಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿದು ಸ್ಥಳಾಂತರ ಮಾಡಿದ್ದು ನಿಜ. ನಾಯಿಗಳನ್ನು ಹಿಡಿಯುವ ಅನುಮೋದಿತ ವಿಧಾನದ ಮೂಲಕವೇ ಅವುಗಳನ್ನು ಹಿಡಿಯಲಾಗಿದೆ. ಅದನ್ನು ಬಿಟ್ಟು ಬೇರೆ ಯಾವುದೇ ರೀತಿಯಲ್ಲೂ ಹಿಂಸಾತ್ಮಕವಾಗಿ ನಡೆದುಕೊಂಡಿಲ್ಲ. ಸ್ಥಳಾಂತರ ಮಾಡುವಾಗಲೂ ಅಮಾನವೀಯವಾಗಿ ನಡೆದುಕೊಂಡಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಜತೆಗೆ ಕೆಲವು ನಾಯಿಗಳನ್ನು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಬಳಿಕ ಮರಳಿ ತಂದು ಬಿಡಲಾಗಿದೆ ಎಂದು ತಿಳಿಸಿದೆ.

ನಾಯಿಗಳನ್ನು ಪ್ರೀತಿಯಿಂದ ತಂದು ಬಿಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ನಾಯಿಗಳಿಗೆ ಯಾವುದೇ ರೀತಿಯ ಹಿಂಸೆ ನೀಡಿಲ್ಲ ಮತ್ತು ನೀಡುವುದಿಲ್ಲ ಎಂದು ವೈದ್ಯಕೀಯ ಕಾಲೇಜಿನಿಂದ ಜಿಲ್ಲಾಡಳಿತಕ್ಕೆ ಮುಚ್ಚಳಿಕೆ ಪತ್ರ…ನೀಡಲಾಗಿದೆ. ಜತೆಗೆ ಜಿಲ್ಲಾಡಳಿತ ಹಾಗೂ ಪ್ರಾಣಿ ದಯಾ ಸಂಘಕ್ಕೆ ನಡೆದಿರುವ ವಿದ್ಯಮಾನಗಳ ವರದಿಯನ್ನು ನೀಡಲಾಗಿದೆ.

ಇದನ್ನೂ ಓದಿ | Dog killed | ತನ್ನ ನೋಡಿ ಬೊಗಳ್ತಿದೆ ಅಂತ ನಾಯಿಯನ್ನು ಅಟ್ಟಾಡಿಸಿ ಗುಂಡು ಹಾರಿಸಿ ಕೊಂದ!

Exit mobile version