Site icon Vistara News

Virajpet Election Results : ವಿರಾಜಪೇಟೆಯಲ್ಲಿ ಮಾಜಿ ಸ್ಪೀಕರ್ ಬೋಪಯ್ಯಗೆ ಸೋಲು, ಕಾಂಗ್ರೆಸ್​ಗೆ ಜಯ

Virajpet,virajpet assembly constituency winner A S PONANNA

Virajpet,virajpet assembly constituency A.S.PONANNA

ಮಡಿಕೇರಿ: ಕೌಟುಂಬಿಕ ಹಾಕಿ ಪಂದ್ಯಾವಳಿ ಮೂಲಕ ಪ್ರಖ್ಯಾತಿ ಪಡೆದಿರುವ ಪ್ರದೇಶವಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಮೂಡಿ ಬಂದಿದೆ. ಬಿಜೆಪಿಯ ಭದ್ರಕೊಟೆಯಲ್ಲಿ ಕೈ ಪಕ್ಷ ಅರಳಿದೆ. ಮಾಜಿ ಸ್ಪೀಕರ್​ ಕೆ. ಜಿ ಬೋಪಯ್ಯ (A S PONANNA) ಅವರನ್ನು ಕಾಂಗ್ರೆಸ್​ ಎ. ಎಸ್​ ಪೊನ್ನಣ್ಣ ಸೋಲಿಸಿದ್ದಾರೆ. 2018ರ ಚುನಾವಣೆಯಲ್ಲಿ ಕೆ.ಜಿ ಬೋಪಯ್ಯ (77944) ಅವರು ಅರುಣ್​ ಮಾಚಯ್ಯ ( 64591 ಮತಗಳು) ಬೋಪಯ್ಯ 13,359 ಮತಗಳಿಂದ ಅಂತರದಿಂದ ಗೆಲುವು ಸಾಧಿಸಿದ್ದರು.

ಹಾಲಿ ಬಿಜೆಪಿಯ ಭದ್ರ ಕೋಟೆಯಾಗಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪಾರುಪತ್ಯ ಮೆರೆದಿತ್ತು. ಆದರೆ, ಕ್ಷೇತ್ರ ಮರುವಿಂಗಡನೆ ಕಾರಣದಿಂದ ಮೂಲ ಮಡಿಕೇರಿ ಕ್ಷೇತ್ರದಲ್ಲೊಮ್ಮೆ ಗೆದ್ದಿದ್ದ ಮಾಜಿ ಸ್ಪೀಕರ್ ಕೆ ಜೆ ಬೋಪಯ್ಯ ವಿರಾಜಪೇಟಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವಿನ ಅಭಿಯಾನ ಮುಂದುರಿಸಿದ್ದರು 2008ರಿಂದ 2018 ಚುನಾವಣೆವರೆಗೂ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

1957ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರಚನೆಯಾದ ಆರಂಭದ ಮೊದಲೆರಡು ಚುನಾವಣೆಗಳಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ವಿರಾಜಪೇಟೆ ಕ್ಷೇತ್ರ, 1967ರಿಂದ 2008ರ ವರೆಗೆ ಮೀಸಲು(ಎಸ್ಟಿ) ಕ್ಷೇತ್ರವಾಗಿತ್ತು. ಕ್ಷೇತ್ರ ಮರುವಿಂಗಡಣೆ ಬಳಿಕ ಹಿಂದಿದ್ದ ಮಡಿಕೇರಿ ಕ್ಷೇತ್ರದ ಕೆಲ ಭಾಗವನ್ನು ಸೇರಿಸಿಕೊಂಡು ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಈ ಬದಲಾವಣೆ ಬಳಿಕ ಇಲ್ಲಿ ಬಿಜೆಪಿ ಪ್ರಬಲವಾಗಿದೆ.

ವಿರಾಜಪೇಟೆಯಲ್ಲಿ ಕೊಡವ ಸಮುದಾಯದ ಮತದಾರರೇ ಚುನಾವಣೆಯಲ್ಲಿ ನಿರ್ಣಾಯಕ. ಅವರನ್ನು ಹೊರತುಪಡಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತ ಮತಗಳು ಮೊದಲ ಸಾಲಿನಲ್ಲಿದ್ದರೆ, ಉಳಿದ ಸಮುದಾಯಗಳ ಮತಗಳೂ ಗಮನಾರ್ಹವಾಗಿವೆ.

Exit mobile version