ಬೆಳಗಾವಿ: ವೀರಶೈವ ಲಿಂಗಾಯತ ಸಮುದಾಯದ ಪಂಚಪೀಠಗಳು ಹುಬ್ಬಳ್ಳಿಯಲ್ಲಿ ಕರೆದ ಸಭೆಗೆ ಯಾವ ವಿರಕ್ತ ಮಠಾಧೀಶರು ಹೋಗುತ್ತಾರೆಯೋ ಅವರು ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಎಚ್ಚರಿಕೆ ನೀಡಿದ್ದಾರೆ.
ವಿರಕ್ತಮಠಗಳು ಕಡಿಮೆ ಇರುವ ಕಡೆ ಲಿಂಗಾಯತರ ಜಾಗೃತಿ ಕಡಿಮೆ ಇದೆ. ಲಿಂಗಾಯತ ಆಚರಣೆಗಳನ್ನ ಯೂನಿಫಾರ್ಮ್ ಮಾಡುತ್ತೇವೆ. ಮುಂದಿನ ಸಭೆಯಲ್ಲಿ ಆ ಬಗ್ಗೆ ಚರ್ಚೆ ಮಾಡುತ್ತೇವೆ. ಕೆಲವು ವೀರಶೈವ ಆಚರಣೆಗಳನ್ನು ತೆಗೆದು ಹಾಕುತ್ತೇವೆ. ಎಸ್. ಎಂ. ಕೃಷ್ಣ ಅವರ ಕಾಲದಿಂದ ಲಿಂಗಾಯರಿಗೆ ನೀಡುವ ಜಾತಿ ಸರ್ಟಿಫಿಕೇಟ್ ನಲ್ಲಿ ವೀರಶೈವ ಲಿಂಗಾಯತ ಅಂತ ನೀಡಲಾಗ್ತಿದೆ. ಇದು ಬಹಳಷ್ಟು ಲಿಂಗಾಯತರಿಗೆ ಮುಜುಗರ ತರುತ್ತಿದೆ. ಕಂಪ್ಯೂಟರ್ ಫಾರ್ಮೆಟ್ ನಲ್ಲಿ ವೀರಶೈವ ಲಿಂಗಾಯತ ಅಂತ ಬದಲಿಸಿದ್ದಾರೆ. ವೀರಶೈವರೇ ಬೇರೆ ಲಿಂಗಾಯರೇ ಬೇರೆ. ಯಾವನಾದ್ರೂ ಏನಾದ್ರೂ ಹೇಳಿಕೊಳ್ಳಲಿ, ಅದನ್ನ ಒಡೆದರು ಇದನ್ನ ಒಡೆದರು ಅಂತ ಯಾರೇ ಮಾತಾಡಲಿ. ಒಡಕೊಂಡೊರು ಅವರೇ ಒಡಿಸಿಕೊಂಡವರು ಅವರೇ ಎಂದರು.
ಲಿಂಗಾಯತರು ಹಳೆಯ ಲಿಂಗಾಯತ ಎಂದು ಜಾತಿ ಸರ್ಫಿಕೆಟ್ ಕೂಡಿಸಿಕೊಂಡಿದ್ದಾರೆ. ಮೊದಲು ಲಿಂಗಾಯತ ಅಂತ ನೀಡಿ ಈಗ ವೀರಶೈವ ಲಿಂಗಾಯತ ಅಂತ ಕೊಡ್ತಿರೋದು ತಪ್ಪು. ಮೊದಲಿದ್ದ ಹಳೆ ಜಾತಿ ಸರ್ಟಿಫಿಕೇಟ್ ಕೊಡಬೇಕು ಅಂತ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಾಗಲೇ ರಿಟ್ ಫೆಟಿಷನ್ ಅರ್ಜಿ ಒಂದುವರೆ ವರ್ಷದಿಂದ ಬಾಕಿ ಇದೆ. 8 ರಿಂದ 10ಜನ ಲಿಂಗಾಯತರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸರ್ಕಾರ ತನ್ನ ಲಿಖಿತ ಹೇಳಿಕೆ ಬಿಡುಗಡೆ ಮಾಡಿದೆ. ಅದನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಂತ ಪರಿಗಣಿಸಬೇಕು ಅಂತ ಮಾಡಬಹುದು ಎಂದು ಹೇಳಿದೆ. ಅದನ್ನ ನಾವೂ ಸಹ ಒಪ್ಪಿಕೊಂಡಿದ್ದೇವೆ, ಈಗ ಅದು ಪಿಐಎಲ್ ಆಗಿ ಕನ್ವರ್ಟ್ ಆಗಿದೆ. ನೂರಕ್ಕೆ ನೂರು ಇದರಲ್ಲಿ ನಮಗೆ ಜಯ ಸಿಗುತ್ತೆ ಅಂತ ನಂಬಿಕೆ ಇದೆ ಎಂದರು.
ಜೂನ್ 15ರಂದು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ವಿರಕ್ತ ಮಠಾಧೀಶರ ಸಭೆ ಕುರಿತು ಮಾತನಾಡಿದ ಜಾಮದಾರ್, ಪಂಚಪೀಠಗಳ ಪಂಚಾಚಾರ್ಯರು ಕರೆದ ಸಭೆಗೆ ವಿರಕ್ತ ಮಠಾಧೀಶರು ತೆರಳದಂತೆ ಆಗ್ರಹಿಸುತ್ತೇವೆ. ಪಂಚಾಚಾರ್ಯರು ಹಿಂದೂ ಧರ್ಮದ ಭಾಗ ಎಂದು ಸ್ವತಂತ್ರ ಧರ್ಮ ಹೋರಾಟ ವಿರೋಧಿಸಿದ್ರು. ಬೇಡ ಜಂಗಮರಿಗೆ ಎಸ್‌ಸಿ ಮೀಸಲಾತಿಗಾಗಿ 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರಿಗೆ ಪತ್ರ ಬರೆದಿದ್ರು. ಐದು ಪೀಠಗಳ ಪಂಚಾಚಾರ್ಯರು ಸಹಿ ಮಾಡಿ ಪತ್ರ ನೀಡಿದ್ದರು ಅದರ ಪ್ರತಿ ಇದೆ. ಈಗ ಬೇಡ ಜಂಗಮ ಹೋರಾಟ ಕೈ ಬಿಟ್ಟು ಒಬಿಸಿ ಹೋರಾಟ ಅಂತಿದ್ದಾರೆ.
ಎಲ್ಲಾ ಲಿಂಗಾಯತ ಪಂಗಡಗಳಿಗೂ ಒಬಿಸಿ ಮೀಸಲಾತಿ ಹೋರಾಟಕ್ಕೆ ಈಗ ಚಾಲನೆ ನೀಡಿದ್ದಾರೆ. ಶ್ರೀಶೈಲ ಜಗದ್ಗುರು ಮತ್ತೋರ್ವ ಶ್ರೀಗಳು ಜೂನ್ 15ರಂದು ವಿರಕ್ತ ಮಠಗಳ ಮಠಾಧೀಶರ ಸಭೆ ಕರೆದಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ವಿರಕ್ತ ಮತ್ತು ವೀರಶೈವ ಎಂದು ಎರಡು ಮಠಗಳಿವೆ. ವಿರಕ್ತ ಮಠಗಳು ಬಸವ ತತ್ವ ಪರಿಪಾಲಿಸುವವರು. ವೀರಶೈವ ಮಠಗಳು ಪಂಚಾಚಾರ್ಯರು, ಹಿಂದೂ ಧರ್ಮ ಪರಿಪಾಲಿಸುವರು. ಅವರ ಮಠಾಧೀಶರ ಕರೆಯಲಿ ಆದ್ರೆ ವಿರಕ್ತ ಮಠಗಳ ಮಠಾಧೀಶರ ಕರೆದಿದ್ದಾರೆ. ಅವರು ನಮಗೆ ಫೋನ್ ಮಾಡಿ ಕೇಳುತ್ತಿದ್ದು ವಿರಕ್ತ ಮಠಗಳ ಮಠಾಧೀಶರು ಗೊಂದಲ ದಲ್ಲಿ ಇದ್ದಾರೆ.
ಮಠಾಧೀಶರು ಜಾತಿ ಅಭಿಮಾನದಿಂದ ಅಲ್ಲಿ ಹೋದ್ರೆ ಇಲ್ಲಿ ಕಷ್ಟವಾಗುತ್ತೆ. ಇಲ್ಲಿ ಇದ್ರೆ ಅಲ್ಲಿ ಕಷ್ಟ ಆಗುತ್ತೆ ಎಂಬ ದ್ವಂದ್ವದಲ್ಲಿ ವಿರಕ್ತ ಮಠಗಳು ಇವೆ. ಒಬಿಸಿ ಹೋರಾಟಕ್ಕೂ ಸ್ವತಂತ್ರ ಧರ್ಮ ಹೋರಾಟಕ್ಕೂ ಯಾವುದೇ ವೈರುಧ್ಯ ಇಲ್ಲ. ಎಲ್ಲ ಲಿಂಗಾಯತ ಹೋರಾಟ ಮಾಡುವ ಪಂಚಾಚಾರ್ಯರು ಇವತ್ತು ಜಿಗಿದು ಇಲ್ಲೇಕೆ ಬಂದಿದ್ದಾರೆ? ಇಲ್ಲಿಯವರೆಗೆ ಅವರು ಏನ್ ಮಾಡುತ್ತಿದ್ದರು? ಅವರಿಗೆ ವಿರುದ್ಧವಾದ ವಿರಕ್ತ ಮಠಗಳನ್ನು ಈಗ ಏಕೆ ಕರೆಸಿದ್ದಾರೆ? ಬಸವಣ್ಣನವರನ್ನು ಇವತ್ತಿಗೂ ಅವರು ಒಪ್ಪಿಕೊಂಡಿಲ್ಲ, ಒಪ್ಪಿಕೊಂಡ ಬಗ್ಗೆ ಸಾರ್ವಜನಿಕವಾಗಿ ಹೇಳಲಿ ಖುಷಿ ಪಡ್ತೇವೆ.
ಈಗ ವಿರಕ್ತ ಮಠಗಳನ್ನು ಕರೆಯುವ ಉದ್ದೇಶ ಏನು? ಪಂಚಾಚಾರ್ಯರ ಜೊತೆ ಕೈ ಜೋಡಿಸುವ, ಪಂಚಾಚಾರ್ಯರು ಹುಬ್ಬಳ್ಳಿಯಲ್ಲಿ ಕರೆದ ಸಭೆಗೆ ಯಾವ ವಿರಕ್ತ ಮಠಾಧೀಶರು ಹೋಗ್ತಾರೆ ಲಿಂಗಾಯತ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ. ನಾವು ಒಬಿಸಿ ಹೋರಾಟಕ್ಕೆ ವಿರೋಧ ಮಾಡಲ್ಲ. ದಾರಿ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ(ಪಂಚಾಚಾರ್ಯರಿಗೆ) ಸಹಾಯ ಮಾಡುವ ಪಕ್ಷ ಈಗ ಅಧಿಕಾರದಲ್ಲಿ ಇಲ್ಲ. ರಾಜ್ಯ ಬಿಟ್ಟು ಕೇಂದ್ರಕ್ಕೆ ಹೊರಟಿದ್ದಾರೆ ನಾಟಕ ಹೇಗಿದೆ ನೋಡಿ, ಸರ್ಕಸ್ ನಡೀತಿದೆ. ಓಬಿಸಿ ಬೇಡಿಕೆ ಪರವಾಗಿದ್ದೇವೆ, ಪಂಚಾಚಾರ್ಯರು ಬಂದು ದಾರಿ ತಪ್ಪಿಸೋದಕ್ಕೆ ವಿರೋಧ ಇದೆ.
ಇದನ್ನೂ ಓದಿ: Caste Census: ಮತ್ತೆ ಜಾತಿ ಹುತ್ತಕ್ಕೆ ಕೈಹಾಕಿದ ಸಿದ್ದರಾಮಯ್ಯ?: ಒಕ್ಕಲಿಗ- ವೀರಶೈವ ಲಿಂಗಾಯತರು ವಿರೋಧಿಸಿದ್ದ ವರದಿ ಸ್ವೀಕಾರ?