Site icon Vistara News

Viral News: ಬೆಂಗಳೂರಿನ ಬೀದಿಯಲ್ಲಿ ರದ್ದಿ ಆಯುವವನಿಗೆ ಸಿಕ್ಕಿತು ಕೋಟಿ ಕೋಟಿ ಡಾಲರ್!

US dollars

ಬೆಂಗಳೂರು: ಬೆಂಗಳೂರಿನ ಬೀದಿಯೊಂದರಲ್ಲಿ ಕಸದ ರಾಶಿಯಲ್ಲಿ (garbage) ಚಿಂದಿ ಆಯುವವನೊಬ್ಬನಿಗೆ (Ragpicker) ಕೋಟ್ಯಂತರ ಡಾಲರ್‌ಗಳ ನಗದು (currency notes) ಬ್ಯಾಗ್‌ ದೊರೆತಿದೆ. ಆದರೆ ಇಷ್ಟೊಂದು ಹಣ ದೊರೆತಿದ್ದರೂ (viral news) ಆತನಿಗೆ ಅದನ್ನು ಬಳಸಿಕೊಳ್ಳುವ ಅದೃಷ್ಟವಿಲ್ಲದಾಗಿದೆ.

ಚಿಂದಿ ಆಯುವ ಕೆಲಸ ಮಾಡುವ ಸಲ್ಮಾನ್ ಶೇಖ್ ಎಂಬಾತನಿಗೆ ನವೆಂಬರ್ 1ರಂದು 23 ಬಂಡಲ್‌ನಷ್ಟು ಅಮೆರಿಕನ್ ಡಾಲರ್‌ಗಳಿದ್ದ ಬ್ಯಾಗ್ ದೊರೆಯಿತು. ರೂಪಾಯಿಯಲ್ಲಿ ಇದರ ಮೌಲ್ಯ ಸುಮಾರು ₹25 ಕೋಟಿ ಆಗುವಷ್ಟಿದೆ.

ಆಶ್ಚರ್ಯಚಕಿತನಾದ ಶೇಖ್ ಈ ಹಣದ ಬಂಡಲ್ ಅನ್ನು ನವೆಂಬರ್ 5ರಂದು ತನ್ನ ಬಾಸ್ ಬಪ್ಪಾ ಎಂಬಾತನ ಬಳಿಗೆ ತೆಗೆದುಕೊಂಡು ಹೋಗಿದ್ದಾನೆ. ಬಪ್ಪಾ ಸಾಮಾಜಿಕ ಕಾರ್ಯಕರ್ತ ಕಲಿಮುಲ್ಲಾ ಎಂಬಾತನನ್ನು ಸಂಪರ್ಕಿಸಿ ಈ ಹಣವನ್ನು ಅವರಿಗೆ ನೀಡಿದ್ದು, ಕಲೀಮುಲ್ಲಾ ಪೊಲೀಸ್ ಕಮಿಷನರರನ್ನು ಸಂಪರ್ಕಿಸಿ ಹಣವನ್ನು ನೀಡಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಪ್ರಕರಣದ ತನಿಖೆಗೆ ಪೊಲೀಸ್‌ ಅಧಿಕಾರಿಗಳನ್ನು ಇನ್‌ವಾಲ್ವ್‌ ಮಾಡಿದ್ದು, ಪ್ರಕರಣದ ತನಿಖೆಯನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ವಹಿಸಲಾಗಿದೆ.

ಈ ನೋಟುಗಳಿಗೆ ಯಾವುದೋ ರಾಸಾಯನಿಕ ಲೇಪಿಸಲಾಗಿದೆ. ಡಾಲರ್‌ ಕಪ್ಪು ಹಣದ ವಹಿವಾಟಿನಲ್ಲಿ ತೊಡಗಿರುವ ಗ್ಯಾಂಗ್‌ಗಳ ಕೈವಾಡ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನೋಟುಗಳು ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ನಿರ್ಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (reserve bank of india) ಕಳುಹಿಸಲಾಗಿದೆ.

Exit mobile version