Site icon Vistara News

Viral Video : ರೈಲು ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧನನ್ನು ದೇವರಂತೆ ಬಂದು ಕೈ ಹಿಡಿದು ರಕ್ಷಿಸಿದ RPF ಸಿಬ್ಬಂದಿ

Railway rescue

ಮಂಗಳೂರು: ಗುರುವಾರ ಸಂಜೆ (ಜು. 27) ಮಂಗಳೂರಿನ ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ (Mangalore Central Railway station) ರೈಲು ಹತ್ತಲು ಮುಂದಾದ ವೃದ್ಧರೊಬ್ಬರು (Old man was in danger) ಆಯತಪ್ಪಿ ಓಲಾಡಿದರು. ಇನ್ನೇನು ಅವರು ಆಯತಪ್ಪಿ ಬಿದ್ದು ರೈಲು ಮತ್ತು ಪ್ಲ್ಯಾಟ್‌ ಫಾರಂ ನಡುವೆ ಸಿಲುಕಿಕೊಳ್ಳುತ್ತಾರೆ (Viral Video) ಎನ್ನುವಾಗ ಒಂದು ಪವಾಡವೇ ನಡೆದುಹೋಯಿತು. ಅವನೆಲ್ಲಿದ್ದನೋ ಒಬ್ಬ ವ್ಯಕ್ತಿ ದೇವರಂತೆ ವೇಗವಾಗಿ ಓಡಿ ಬಂದು ಆ ವೃದ್ಧನನ್ನು ಕೈ ಹಿಡಿದು ಎಳೆದು ರಕ್ಷಿಸಿದ (Man Rescues old Man from Danger)!

ಸಂಜೆ 6.15ರ ಹೊತ್ತಿಗೆ ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣದಿಂದ ಮಲಬಾರ್‌ ಎಕ್ಸ್‌ಪ್ರೆಸ್‌ (Malabar Express) ರೈಲು ಹೊರಟಿತ್ತು. ಶಂಕರ್‌ ಬಾಬು ಎಂಬ 70 ವರ್ಷದ ಪ್ರಯಾಣಿಕರೊಬ್ಬರು ಕೊನೆಯ ಕ್ಷಣದಲ್ಲಿ ರೈಲು ಹತ್ತಲು ಮುಂದಾದರು. ಚಲಿಸಲು ಆರಂಭಿಸಿದ್ದ ರೈಲನ್ನು ಹತ್ತಲು ಯತ್ನಿಸುವಾಗ ಅವರು ಆಯತಪ್ಪಿದರು. ರೈಲಿನ ಹ್ಯಾಂಡಲ್‌ ಹಿಡಿದುಕೊಂಡು ಓಲಾಡುತ್ತಾ ಓಡಲು ತೊಡಗಿದರು. ಇನ್ನೇನು ಅವರು ಆಯತಪ್ಪಿ ಉರುಳಿ ಬೀಳುತ್ತಾರೆ ಎನ್ನುವಾಗ ಅದನ್ನು ಗಮನಿಸಿದ ಒಬ್ಬ ಆರ್‌ಪಿಎಫ್‌ ಸಿಬ್ಬಂದಿ (RPF staff) ಓಡಿ ಬಂದು ಅವರನ್ನು ಹಿಡಿದುಕೊಂಡು ರಕ್ಷಣೆ ಮಾಡಿದರು. ಒಂದು ವೇಳೆ ಅವರು ಹಿಡಿಯದೆ ಹೋಗಿದ್ದರೆ ಆ ವೃದ್ಧರು ರೈಲು ಮತ್ತು ಪ್ಲ್ಯಾಟ್‌ಫಾರಂನ ನಡುವೆ ಸಿಲುಕುವ ಎಲ್ಲ ಅಪಾಯಗಳು ಇದ್ದವು.

ಈ ದೃಶ್ಯ ರೈಲು ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಂಕರ್ ಬಾಬು ಅವರು ಕೇರಳದ ಕಣ್ಣೂರಿನ ವಯಲ್‌ವೀಡು ನಿವಾಸಿಯಾಗಿದ್ದಾರೆ. ಅವರ ಬಲಗಾಲಿನ ಬೆರಳಿಗೆ ಗಾಯವಾಗಿದೆ.

ದೇವರಂತೆ ಬಂದವರು ಪ್ರಕಾಶ್‌

ರೈಲು ನಿಲ್ದಾಣದಲ್ಲಿ ರಕ್ಷಣೆ ಮತ್ತು ಪ್ರಯಾಣಿಕರ ವ್ಯವಸ್ಥೆಗೆ ನಿಯೋಜಿತರಾಗಿದ್ದ ರೈಲ್ವೆ ರಕ್ಷಣಾ ಪಡೆಯ (Railway protection Force) ಪ್ರಕಾಶ್‌ ಎಂಬವರು ಸಂಜೆ ತಮ್ಮ ಕರ್ತವ್ಯದಲ್ಲಿದ್ದರು. ಅವರು ರೈಲು ಹೊರಟಿದ್ದನ್ನು ಗಮನಿಸುತ್ತಿದ್ದಾಗ ಶಂಕರ್‌ ಬಾಬು ಅವರು ನೇತಾಡಿಕೊಂಡಿರುವುದು ಖಂಡಿತ. ಪ್ರಕಾಶ್‌ ಅವರು ಒಂದು ಕ್ಷಣವೂ ಯೋಚಿಸದೆ ಕೂಡಲೇ ನೆರವಿಗೆ ಧಾವಿಸಿದ್ದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.