ಬೆಂಗಳೂರು: ಮಂಗಳೂರಿನ ನಾಗುರಿ ಬಳಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯದ ಪ್ರಮುಖ ದೇವಾಲಯಗಳೇ ಉಗ್ರರ ಟಾರ್ಗೆಟ್ ಆಗಿದ್ದವು ಎನ್ನುವ ವಿಚಾರ ಬಹಿರಂಗವಾಗಿದೆ, ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದ ಕುರಿತು ಸಿಎಂ ಬೊಮ್ಮಾಯಿ ಖಡಕ್ ಮಾತನ್ನಾಡಿದ್ದಾರೆ, ಪರೇಶ್ ಮೇಸ್ತಾ ಸಾವಿನ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಬೃಹತ್ ರ‍್ಯಾಲಿಯಲ್ಲಿ ಹರಿಹಾಯ್ದಿದ್ದಾರೆ, ನಾಡದೇವಿಯ ಚಿತ್ರದ ಕುರಿತು ಗದಗದ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಜಾಮಾ ಮಸೀದಿ ಪ್ರವೇಶಕ್ಕೆ ಏಕಾಂಗಿ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಮಂಗಳೂರು ಸ್ಫೋಟ: ಕುಕ್ಕರ್ ಬಾಂಬ್ ಸ್ಫೋಟ ತನಿಖೆಯನ್ನು NIAಗೆ ವಹಿಸಲು ನಿರ್ಧಾರ
ಮಂಗಳೂರಿನ ನಾಗುರಿಯಲ್ಲಿ ಇತ್ತೀಚೆಗೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ವಹಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಆದೇಶ ಹೊರಡಿಸಿದ್ದು, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIAಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಭಯೋತ್ಪಾದನಾ ಪ್ರಕರಣಗಳನ್ನು ವಿಚಾರಣೆ ನಡೆಸುವ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (UAPA) ಅನ್ವಯ ತನಿಖೆಯನ್ನು ಎನ್‌ಐಎ ನಡೆಸಲು ಶಿಫಾರಸು ಮಾಡಿದೆ ಎಂದು ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕರಣೆ ಹೊರಡಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
2. ಮಂಗಳೂರು ಸ್ಫೋಟ | ಕದ್ರಿ ದೇವಸ್ಥಾನ ಟಾರ್ಗೆಟ್: ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ಉಗ್ರ ಸಂಘಟನೆ
ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಹೊತ್ತುಕೊಂಡಿದೆ. ತಾನೇ ಈ ಸ್ಫೋಟದ ರೂವಾರಿ ಎಂದು ಐಆರ್‌ಸಿ ಎಂದು ಕರೆಯಲಾಗುವ ಈ ಸಂಘಟನೆ ಹೇಳಿಕೊಂಡಿದೆ. ಜತೆಗೆ ಬಾಂಬ್ ಸ್ಫೋಟದ ಟಾರ್ಗೆಟ್ ಯಾವುದು ಎಂದು ಕೂಡಾ ಬಯಲು ಮಾಡಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. Border Dispute | ಗಡಿ ವಿವಾದದ ವಾದಕ್ಕೇ ನಾವು ಬದ್ಧ, ಮತ್ತೊಮ್ಮೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ; ಶಿಂಧೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ನಾವು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿಯೇ ನಿರ್ಧರಿಸಿಯಾಗಿತ್ತು. ಮತ್ತೊಮ್ಮೆ ಎಲ್ಲರನ್ನೂ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ, ನಮಗೆ ವಾದ ಮಾಡುವ ಉದ್ದೇಶವೇ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಡೀ ಗಡಿ ವಿಚಾರವೇ ಮುಗಿದು ಹೋಗಿದೆ. ಜತ್ ತಾಲೂಕು ಕರ್ನಾಟಕಕ್ಕೆ ಸೇರುವ ಬಗ್ಗೆ ಅಲ್ಲಿನ ಗ್ರಾಮ ಪಂಚಾಯಿತಿಗಳೇ ನಿರ್ಣಯ ಮಾಡಿವೆ. ಇವೆಲ್ಲ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡನೆ ವೇಳೆ ಬರಲಿದೆ ಎಂದು ಉತ್ತರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಸ್ವಲ್ಪ ಸುಮ್ಮನೆ ಇರ್ತೀರಾ: ಚುನಾವಣಾ ಆಯುಕ್ತರ ನೇಮಕ ಕುರಿತು ಸುಪ್ರೀಂಕೋರ್ಟ್ಗೆ ಕೇಂದ್ರ ಪರ ವಕೀಲನ ಪ್ರತಿಕ್ರಿಯ
ಚುನಾವಣೆ ಆಯೋಗಕ್ಕೆ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರವೂ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ವಾದಿಸುತ್ತಿರುವ ವಕೀಲರು ಒಂದು ಹಂತದಲ್ಲಿ, ನೀವು ಸ್ವಲ್ಪ ಸುಮ್ಮನಿರಿ ಎಂದು ನ್ಯಾಯಮೂರ್ತಿಗಳಿಗೆ ಹೇಳಿದ್ದೂ ಗಮನ ಸೆಳೆಯಿತು. ಚುನಾವಣಾ ಆಯೋಗಕ್ಕೆ ಮುಖ್ಯ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಇನ್ನಷ್ಟು ಸುಧಾರಣೆ, ಪಾರದರ್ಶಕತೆ ತರುವ ವಿಚಾರವಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ‘ಟಿ.ಎನ್. ಶೇಷನ್ರಂಥ ದಿಟ್ಟ ಚುನಾವಣಾ ಆಯುಕ್ತರು ನೇಮಕಗೊಳ್ಳುವ (1990-1996ರವರೆಗೆ) ಅಗತ್ಯವಿದೆ’ ಎಂದು ಪೀಠ ಬುಧವಾರ ತಿಳಿಸಿತ್ತು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ʻಮಿಂಚಿನ ವೇಗದಲ್ಲಿʼ ನೇಮಕಗೊಂಡ ನೂತನ ಚುನಾವಣಾ ಆಯುಕ್ತ ಅರುಣ್ ಗೋಯಲ್: ಯಾರಿವರು?
5. BL Santosh | ಬಿಜೆಪಿ ನಾಯಕ ಸಂತೋಷ್‌ಗೆ ಮತ್ತೆ ನೋಟಿಸ್ ನೀಡಲು ತೆಲಂಗಾಣ ಹೈಕೋರ್ಟ್ ಸೂಚನೆ
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಪುನಃ ನೋಟಿಸ್ ಕಳಿಸುವಂತೆ ತೆಲಂಗಾಣದ ವಿಶೇಷ ತನಿಖಾ ದಳಕ್ಕೆ ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ.ಎಸ್‌ಐಟಿಗೆ ನ್ಯಾಯಮೂರ್ತಿ ಬಿ.ವಿಜಯಸೇನ ರೆಡ್ಡಿ ಅವರು ಈ ಸೂಚನೆ ನೀಡಿದ್ದು, ನೋಟಿಸನ್ನು ಇಮೈಲ್ ಮತ್ತು ವಾಟ್ಸ್ಯಾಪ್ ಮೂಲಕ ಕಳಿಸಲು ತಿಳಿಸಿದ್ದಾರೆ. ಆದರೆ, ಸಂತೋಷ್ ಅವರ ಬಂಧನದ ಬಗೆಗೆ ನೀಡಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಅವರು ನಿರಾಕರಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
6. ಪರೇಶ್ ಮೇಸ್ತಾ ಸಾವು ಪ್ರಕರಣ | ಕಾಂಗ್ರೆಸ್ ಬೃಹತ್ ಸಮಾವೇಶ; ಬಿಜೆಪಿ ವಿರುದ್ಧ ಮುಗಿಬಿದ್ದ ಕೈ ನಾಯಕರು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿಂದು ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ ಸಂಬಂಧ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿ ಕುಮಟಾದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಚಾಲನೆ ಸಿಕ್ಕಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಇದೊಂದು ರಾಜಕೀಯ ಪಿತೂರಿಗಾಗಿ ನಡೆಯುತ್ತಿರುವ ಸಂಚು ಎಂದು ಆರೋಪ ಮಾಡಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
7. Digital Media | ಡಿಜಿಟಲ್ ಮಾಧ್ಯಮ ನಿಯಂತ್ರಣ, ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ, ಸಚಿವ ಅನುರಾಗ್ ಘೋಷಣೆ ಏನು?
ಡಿಜಿಟಲ್ ಮಾಧ್ಯಮ (Digital Media) ಕ್ಷೇತ್ರದ ವ್ಯಾಪ್ತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಡಿಜಿಟಲ್ ಮೀಡಿಯಾ ನಿಯಂತ್ರಣದ ಕುರಿತು ಶೀಘ್ರವೇ ಕಾನೂನು ರೂಪಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. “ಬದಲಾದ ಕಾಲಘಟ್ಟದಲ್ಲಿ ಜನರಿಗೆ ಸುದ್ದಿ ತಲುಪಿಸುವ ರೀತಿಯೇ ಬದಲಾಗಿದೆ. ಒಂದು ಸಣ್ಣ ಹಳ್ಳಿಯ ಸುದ್ದಿಯು ಡಿಜಿಟಲ್ ಮಾಧ್ಯಮದ ಮೂಲಕ ದೇಶಾದ್ಯಂತ ಪಸರಿಸುತ್ತಿದೆ. ಡಿಜಿಟಲ್ ಮಾಧ್ಯಮವು ಹತ್ತಾರು ಅವಕಾಶಗಳನ್ನು ಸೃಷ್ಟಿಸುವ ಜತೆಗೆ ಸವಾಲುಗಳನ್ನೂ ತಂದೊಡ್ಡಿದೆ. ಸಮತೋಲನ ಕಾಪಾಡುವ ಹಾಗೂ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ದಿಸೆಯಲ್ಲಿ ಶೀಘ್ರವೇ ವಿಧೇಯಕ ಮಂಡಿಸಲಾಗುತ್ತದೆ” ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. ನಾಡದೇವಿ ಚಿತ್ರ | ಹೊಸ ವರ್ಣಚಿತ್ರಕ್ಕೆ ಗದಗ ಕಲಾವಿದರ ವಿರೋಧ; ಸಂಕೇತಗಳು ಸ್ಪಷ್ಟವಿರಲಿಲ್ಲ ಎಂದ ಸರ್ಕಾರದ ಸಮಿತಿ
ನಾಡದೇವಿಯ ಹೊಸ ವರ್ಣಚಿತ್ರವನ್ನು ಅಧಿಕೃತಗೊಳಿಸಲು ಮುಂದಾಗಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಗದಗದ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದು, 1953ರಲ್ಲಿ ಸಿ.ಎನ್. ಪಾಟೀಲರು ರಚಿಸಿದ ಚಿತ್ರವನ್ನೇ ಆಯ್ಕೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ವಿರೋಧಕ್ಕೆ, ಹೊಸ ವರ್ಣಚಿತ್ರ ರಚನೆಯ ಸಮಿತಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಸ್ಪಷ್ಟನೆ ನೀಡಿದ್ದಾರೆ. ಮೊದಲಿಗೆ ಕಿರೀಟವೇ ಉತ್ತರ ಭಾರತದ ಶೈಲಿಯಲ್ಲಿದೆ, ಪಾರ್ಸಿ ಪೌರಾಣಿಕ ನಾಟಕಗಳ ಹೋಲುತ್ತದೆ. ಮುಕುಟವು ಕನ್ನಡ ಸಾಂಸ್ಕೃತಿಕ ಕಲಾ ವೈಭವವನ್ನು ಎತ್ತಿ ತೋರುತ್ತಿಲ್ಲ ಎಂಬುದೂ ಸೇರಿ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ದೆಹಲಿ ಜಾಮಾ ಮಸೀದಿಗೆ ಹುಡುಗಿಯರಿಗಿಲ್ಲ ಪ್ರವೇಶ, ಕುಟುಂಬದವರ ಜತೆ ಬಂದರೆ ಮಾತ್ರ ಅವಕಾಶ; ವ್ಯಾಪಕ ಆಕ್ರೋಶ
ಇತಿಹಾಸ ಪ್ರಸಿದ್ಧ, ದೆಹಲಿಯ ಜಾಮಾ ಮಸೀದಿಯ ಮೂರು ಪ್ರವೇಶ ದ್ವಾರಗಳಲ್ಲಿ ಫಲಕಗಳನ್ನು ಹಾಕಲಾಗಿದ್ದು, ಅದರ ಮೇಲೆ ‘ಹುಡುಗಿಯರು/ಮಹಿಳೆಯರು ಗುಂಪಾಗಿಯಾಗಲೀ, ಒಬ್ಬಂಟಿಯಾಗಿ ಆಗಲೀ ಮಸೀದಿ ಪ್ರವೇಶಿಸುವಂತಿಲ್ಲ’ ಎಂದು ದೊಡ್ಡದಾಗಿ ಬರೆಯಲಾಗಿದೆ. ಅಂದರೆ ಜಾಮಾ ಮಸೀದಿಗೆ ಇನ್ನು ಹುಡುಗಿಯರು ಗುಂಪಾಗಿ ಮತ್ತು ಏಕಾಂಗಿಯಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ಇದು ಜಾಮಾ ಮಸೀದಿಯ ಆಡಳಿತ ಮಂಡಳಿಯ ಆದೇಶವಾಗಿದೆ. ಈ ಆದೇಶದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸಿದ್ಧ ಎಂದಿದ್ದ ಸೇನಾ ಜನರಲ್ರನ್ನು ಅಪಹಾಸ್ಯ ಮಾಡಿದ ಬಾಲಿವುಡ್ ನಟಿ ರಿಚಾ ಚಡ್ಡಾ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಬೇಕು ಎಂದು ಆದೇಶ ಬಂದರೆ, ಅದನ್ನು ಪಾಲಿಸಿ ಕಾರ್ಯಗತಗೊಳಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಭಾರತೀಯ ಸೇನೆಯ ಉತ್ತರ ವಲಯದ ಲೆಫ್ಟಿನೆಂಟ್ ಕಮಾಂಡರ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದರು. ಆ ಮಾತಿಗೆ ಬಾಲಿವುಡ್ ನಟಿ ರಿಚಾ ಚಡ್ಡಾ (Richa Chadha)ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- ವಿಸ್ತಾರ Explainer | ಜಾಗತಿಕ ಆರ್ಥಿಕ ಹಿಂಜರಿತ, ಸಾವಿರಾರು ಜಾಬ್ ಕಟ್; ಭಾರತದ ಮೇಲೇನು ಎಫೆಕ್ಟ್?
- Voter Data | ಅರ್ಜಿ ಸಲ್ಲಿಸದೇ ಡಿಲೀಟ್ ಆದ ಪಟ್ಟಿಯನ್ನು ರದ್ದುಪಡಿಸಿ: ʼಚಿಲುಮೆʼ ಅಕ್ರಮ ಕುರಿತು ಸಿದ್ದರಾಮಯ್ಯ ಸುದೀರ್ಘ ಹೇಳಿಕೆ
- Sensex creates history | ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್! 62,272ಕ್ಕೆ ಹೊಸ ದಾಖಲೆಯ ಜಿಗಿತ
- Kantara Movie | ಕಾಂತಾರ ತುಳು ಟ್ರೈಲರ್ ಔಟ್: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್ ಶೆಟ್ಟಿ?
- TaTa acquire Bisleri | ಟಾಟಾ ತೆಕ್ಕೆಗೆ ಬಿಸ್ಲೇರಿ, 7,000 ಕೋಟಿ ರೂ. ಡೀಲ್
- ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ