Site icon Vistara News

ವಿಸ್ತಾರ TOP 10 NEWS | ಮಂಗಳೂರಿನಲ್ಲಿ ಸ್ಫೋಟ, ಕೊಪ್ಪದಲ್ಲಿ ಲವ್‌ ಜಿಹಾದ್‌, ಕತಾರ್‌ನಲ್ಲಿ ಜಾಕಿರ್‌ ನಾಯ್ಕ್‌ ಹಾಗೂ ಇನ್ನಷ್ಟು ಪ್ರಮುಖ ಸುದ್ದಿಗಳಿವು

vistara top 10 news mangaluru blast accused identified to zakir naik in qatar news of the day

ಬೆಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟದ ತನಿಖೆ ತೀವ್ರಗೊಂಡಿದ್ದು, ಈಗಾಗಲೆ ಬಂಧಿತ ಆರೋಪಿಯನ್ನು ಕುಟುಂಬದವರು ಗುರುತಿಸಿದ್ದಾರೆ ಹಾಗೂ ಘಟನೆಗೆ ವಿದೇಶಿ ಕೈವಾಡವಿರುವುದು ಧೃಢಪಟ್ಟಿದೆ. ಮತದಾರರ ಮಾಹಿತಿ ಅಕ್ರಮ ಸಂಗ್ರಹದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ, ಲವ್‌ ಜಿಹಾದ್‌ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ, ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ, ಗುಜರಾತ್‌ ಚುನಾವಣೆ ಕಾವೇರಿದೆ, ಕತಾರ್‌ನಲ್ಲಿ ವಿವಾದಿತ ಇಸ್ಲಾಮಿಕ್‌ ಭಾಷಣಕಾರ ಜಾಕಿರ್‌ ನಾಯ್ಕ್‌ ಉಪನ್ಯಾಸಗಳ ಆತಂಕ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಮಂಗಳೂರು ಸ್ಫೋಟ | ಯೆಸ್‌ ಇವನೇ ತೀರ್ಥಹಳ್ಳಿ ಮೂಲದ ಉಗ್ರ ಶಾರಿಕ್‌: ಎಡಿಜಿಪಿ ಅಲೋಕ್‌ ಕುಮಾರ್‌ ಬಹಿರಂಗ
ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ ೪.೩೦ರ ಹೊತ್ತಿಗೆ ಆಟೋ ರಿಕ್ಷಾ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡವನು ತೀರ್ಥಹಳ್ಳಿಯ ಶಾರಿಕ್‌ ಎನ್ನುವುದನ್ನು ರಾಜ್ಯ ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಿಂದ ಪೊಲೀಸರು ಕರೆಸಿಕೊಂಡಿದ್ದ ಮಲತಾಯಿ ಶಬಾನಾ, ಸೋದರಿ ಆತಿಯಾ, ತಾಯಿಯ ತಂಗಿ ಯಾಸ್ಮಿನ್‌ ಅವರು ಈತನೇ ಶಾರಿಕ್‌ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಮಂಗಳೂರು ಸ್ಫೋಟ | ಶಾರಿಕ್‌ನ ಹಿಂದಿದ್ದಾನೆ ಮತ್ತೊಬ್ಬ ಮೇನ್‌ ಹ್ಯಾಂಡ್ಲರ್‌ ತೀರ್ಥಹಳ್ಳಿಯ ಅಬ್ದುಲ್ ‌ಮತೀನ್ ತಾಹಾ
ನಾಗುರಿಯಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ (ಮಂಗಳೂರು ಸ್ಫೋಟ) ಗಾಯಗೊಂಡವನು ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ಶಾರಿಕ್‌ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆತನಿಗೆ ವಿದೇಶಿ ಟೆರರ್‌ ಸಂಘಟನೆ ಜತೆ ಸಂಬಂಧ ಇರುವುದನ್ನು ಬೆಟ್ಟು ಮಾಡಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಈ ಕೃತ್ಯದ ಹಿಂದೆ ಮೇನ್‌ ಹ್ಯಾಂಡ್ಲರ್‌ ಆಗಿ ಕೆಲಸ ಮಾಡುತ್ತಿರುವುದು ತೀರ್ಥಹಳ್ಳಿ ಮೂಲದವನೇ ಆಗಿರುವ, ಈಗ ತಲೆ ಮರೆಸಿಕೊಂಡಿರುವ ಅಬ್ದುಲ್‌ ಮತೀನ್‌ ತಾಹಾ ಎಂದು ಹೇಳಿದ್ದಾರೆ. ಆತ ಕಳೆದ ಹಲವು ವರ್ಷಗಳಿಂದ ಕಾಣೆಯಾಗಿದ್ದು, ಆತನ ಜತೆಗೆ ಶಾರಿಕ್‌ಗೆ ಸಂಬಂಧವಿದೆ. ಆತನ ಸೂಚನೆಯ ಮೇರೆಗೆ ಶಾರಿಕ್‌ ಕೆಲಸ ಮಾಡುತ್ತಿದ್ದಾನೆ ಎನ್ನುವುದು ಪೊಲೀಸರ ಹೇಳಿಕೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Voter Data | BBMPಯಿಂದ ಮೂವರು ಅಧಿಕಾರಿಗಳ ಸಸ್ಪೆಂಡ್‌; 28 ಅಧಿಕಾರಿಗಳಿಗೆ ಪೊಲೀಸ್‌ ನೋಟಿಸ್‌
ಅಕ್ರಮವಾಗಿ ಮತದಾರರ ದತ್ತಾಂಶವನ್ನು (Voter Data) ಸಂಗ್ರಹ ಮಾಡುತ್ತಿದ್ದ ಚಿಲುಮೆ ಸಂಸ್ಥೆಗೆ ಸಹಕಾರ ನೀಡಿದ ಆರೋಪದಲ್ಲಿ ಮೂವರು ಕ್ಷೇತ್ರ ಚುನಾವಣಾಧಿಕಾರಿಗಳನ್ನು (ಆರ್‌ಒ) ಬಿಬಿಎಂಪಿ ಅಮಾನತುಗೊಳಿಸಿದೆ. ಅಕ್ರಮದ ಕುರಿತು ದೂರು ದಾಖಲಾದ ನಂತರ ವಿವಿಧೆಡೆಯಿಂದ ಮಾಹಿತಿಯನ್ನು ಪಡೆದಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಈ ಆದೇಶ ಹೊರಡಿಸಿದ್ದಾರೆ. ಮಹದೇವಪುರ, ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳನ್ನು (ಆರ್‌ಒ) ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Voter Data | ಗುಜರಾತ್‌ ಚುನಾವಣೆಗೂ ತಟ್ಟಲಿದೆಯೇ ʼಚಿಲುಮೆʼ ಅಕ್ರಮ ಬಿಸಿ?: ನವದೆಹಲಿಯತ್ತ ಹೊರಟ ಕಾಂಗ್ರೆಸ್‌
ಮತದಾರರ ದತ್ತಾಂಶಗಳನ್ನು (Voter Data) ಅಕ್ರಮವಾಗಿ ಸಂಗ್ರಹಿಸಲಾಗುತ್ತಿರುವ ಕುರಿತ ವುಚಾರವನ್ನು ರಾಷ್ಟ್ರೀಯ ಮಟ್ಟದ ಜತೆಗೆ ಗುಜರಾತ್‌ನಲ್ಲಿ ನಡೆಯುತ್ತಿರುವ ಚುನಾವಣೆಯತ್ತಲೂ ತೆಗೆದುಕೊಂಡು ಹೋಗಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.
ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ತನಿಖೆಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಸಹ ಈ ಸಂದರ್ಭದಲ್ಲಿ ಜತೆಗಿರಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Love Jihad | ಅಮಲು ಔಷಧ ಕುಡಿಸಿ ಹಿಂದು ಯುವತಿಗೆ ತಾಳಿ ಕಟ್ಟಿದ; ಖಾಸಗಿ ವಿಡಿಯೊ ಮಾಡಿ ಮುಸ್ಲಿಂ ಯುವಕನಿಂದ ಬ್ಲ್ಯಾಕ್‌ಮೇಲ್‌
ಕೊಪ್ಪ ಮೂಲದ ಮೊಹಮ್ಮದ್ ರೋಫ್ ಎಂಬಾತನ ವಿರುದ್ಧ ಲವ್‌ ಜಿಹಾದ್ (Love Jihad) ಮಾಡಿರುವ ಆರೋಪವೊಂದು ಕೇಳಿ ಬಂದಿತ್ತು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಯುವತಿಯ ಅಣ್ಣ ದೂರು ದಾಖಲಿಸಿದ್ದರು. ಈಗ ಯುವತಿ ಸಹ ತನ್ನ ಮೇಲೆ ಲವ್‌ ಜಿಹಾದ್‌ ಯತ್ನ ನಡೆದಿದೆ ಎಂದು ಹರಿಹರಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Chhatrapati Shivaji Row | ಮಹಾರಾಷ್ಟ್ರ ರಾಜ್ಯಪಾಲರ ಅವಾಂತರ, ಬಿಜೆಪಿಗೆ ಗಂಡಾಂತರ
ಛತ್ರಪತಿ ಶಿವಾಜಿ “ಹಳೆಯ ಕಾಲದ ಐಕಾನ್”‌ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ನೀಡಿದ ಹೇಳಿಕೆ ಈಗ ಶಿವಸೇನೆ ಏಕನಾಥ್‌ ಶಿಂಧೆ ಬಣದ (Chhatrapati Shivaji Row) ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ, ರಾಜ್ಯಪಾಲರು ನೀಡಿದ ಹೇಳಿಕೆಯು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಔರಂಗಾಬಾದ್‌ನ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೋಶ್ಯಾರಿ, “ಛತ್ರಪತಿ ಶಿವಾಜಿ ಮಹಾರಾಜ ಅವರು ಹಳೆಯ ಕಾಲದ ಐಕಾನ್‌ (Olden Days Icon) ಆಗಿದ್ದಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್ ಹಾಗೂ ನಿತಿನ್‌ ಗಡ್ಕರಿ ಅವರು ಆಧುನಿಕ ಐಕಾನ್‌ಗಳು”‌ ಎಂದು ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Gujarat Election | ಬಿಜೆಪಿ, ಕಾಂಗ್ರೆಸ್ ಭರ್ಜರಿ ಪ್ರಚಾರ; ಮೋದಿ-ರಾಹುಲ್ ಟೀಕಾ ಪ್ರಹಾರ
ಡಿಸೆಂಬರ್ 1ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಮೊದಲ ಹಂತದ ಚುನಾವಣೆಗೆ (Gujarat Election) ಭರ್ಜರಿ ಪ್ರಚಾರ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಸೂರತ್ ಜಿಲ್ಲೆಯ ಮಹುವಾದಲ್ಲಿ ಆಯೋಜಿಸಲಾಗಿದ್ದು, ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಸುರೇಂದ್ರನಗರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ನರ್ಮದಾ ಬಚಾವ್ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಪಾಲ್ಗೊಂಡಿದ್ದನ್ನು ಪ್ರಶ್ನಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಿಸ್ತಾರ Explainer | Aadhaar card | ಆಧಾರ್‌ ಕಾರ್ಡ್‌ ಕಳೆದಾಗ ಸುಮ್ಮನಿದ್ದರೆ ಡೇಂಜರ್!
ಆಧಾರ್‌ ಕಾರ್ಡ್‌ ಸಂಖ್ಯೆ ಈಗ ಅತ್ಯಂತ ವಿಶ್ವಾಸಾರ್ಹ ಗುರುತಿನ ದಾಖಲೆ. ದೇಶಾದ್ಯಂತ ಜನತೆ ಇದನ್ನು ಬಳಸುತ್ತಾರೆ. ಆದರೆ ನೀವು ಮುದ್ರಿತ ಆಧಾರ್‌ ಕಾರ್ಡ್‌ ಅನ್ನು ಕಳೆದುಕೊಂಡಾಗ ಸುಮ್ಮನಿದ್ದರೆ, ಅಪಾಯಕ್ಕೀಡಾಗುವ ಸಾಧ್ಯತೆಯೂ ಇದೆ. ಹೀಗಾಗಿ ಆಧಾರ್‌ ಕಳೆದು ಹೋದಾಗ ಕೈಗೊಳ್ಳಬೇಕಾದ ಕ್ರಮಗಳ ವಿವರ (ವಿಸ್ತಾರ Explainer) ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Nandini Milk Price Hike | ಹಾಲಿನ ದರ ಹೆಚ್ಚಳಕ್ಕೆ ಎರಡು ದಿನ ಬ್ರೇಕ್‌ ಹಾಕಿದ ಸಿಎಂ; ಆದರೆ ದರ ಏರಿಕೆ ಪಕ್ಕಾ?
ರೈತರಿಗೆ, ಗ್ರಾಹಕರಿಗೆ ತೊಂದರೆಯಾಗದಂತೆ ನಂದಿನಿ ಹಾಲಿನ ದರ (Nandini Milk Price Hike) ಏರಿಕೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಹಾಲಿನ ದರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ದರ ಏರಿಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಕ್ಕೆ (ಕೆಎಂಎಫ್‌) ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. FIFA WORLD CUP | ವಿಶ್ವ ಕಪ್‌ಗೆ ಜಾಕಿರ್‌ ನಾಯ್ಕ್ ಕರೆಸಿ ಇಸ್ಲಾಂ ಮತ ಪ್ರವಚನಕ್ಕೆ ಮುಂದಾದ ಕತಾರ್‌
ಕತಾರ್‌ನಲ್ಲಿ ನಡೆಯುತ್ತಿರುವ ಫುಟ್ಬಾಲ್‌ ವಿಶ್ವ ಕಪ್‌ (FIFA WORLD CUP) ಆಟಕ್ಕಿಂತ ಜಾಸ್ತಿ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಇಸ್ಲಾಮಿಕ್‌ ರಾಷ್ಟ್ರದಲ್ಲಿ ಹಾಕಲಾಗಿರುವ ಹಲವಾರು ನಿರ್ಬಂಧಗಳು ಕ್ರೀಡಾ ಪ್ರೇಮಿಗಳಿ ನಿರಾಸೆಗೆ ಮೂಲಕ ಕಾರಣವಾದರೆ, ಇದೀಗ ಕ್ರೀಡಾಕೂಟಕ್ಕೆ ಧಾರ್ಮಿಕ ಲೇಪನ ಬಳಿಯಲು ಯತ್ನಿಸುತ್ತಿದೆ. ಆಯೋಜಕರ ಈ ಧೋರಣೆಗಳ ಬಗ್ಗೆ ಜಾಗತಿಕವಾಗಿ ವಿರೋಧಗಳು ವ್ಯಕ್ತಗೊಂಡಿವೆ. ಏತನ್ಮಧ್ಯೆ, ಭಾರತೀಯ ಮೂಲದ ವಿವಾದಿತ ಇಸ್ಲಾಮಿಕ್‌ ಭಾಷಣಕಾರ ಜಾಕಿರ್‌ ನಾಯ್ಕ್ ಅವರನ್ನು ಕ್ರೀಡಾಕೂಟಕ್ಕೆ ಕರೆಸಿಕೊಳ್ಳುವ ಜತೆಗೆ ಅವರಿಂದ ಇಸ್ಲಾಮಿಕ್‌ ಮತಪ್ರವಚನ ಕೂಡ ಆಯೋಜಿಸಲಾಗಿದೆ. ಕತಾರಿ ಟಿವಿ ಪತ್ರಕರ್ತರೊಬ್ಬರು ಜಾಕಿರ್‌ ನಾಯ್ಕ್ ವಿಶ್ವ ಕಪ್‌ ನಡೆಯುತ್ತಿರುವ ದೋಹಾಗೆ ಭೇಟಿ ನೀಡಿರುವ ವಿಡಿಯೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ಹಲವಾರು ಉಪನ್ಯಸಗಳನ್ನೂ ನೀಡಲಿದ್ದಾರೆ ಎಂದು ತಿಳಿಸಿರುವುದು ಆತಂಕ ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Sensex falls | ಷೇರುಪೇಟೆಯಲ್ಲಿ ತಲ್ಲಣ, ಸೆನ್ಸೆಕ್ಸ್‌ 518 ಅಂಕ ಪತನ
  2. Election 2023 | ಕೊನೆಗೂ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಒಂದೇ ಕ್ಷೇತ್ರದಿಂದ ಸ್ಪರ್ಧೆ
  3. ಕರ್ನಾಟಕ ಮಾತೆಯ ಹೊಸ ಅಧಿಕೃತ ಚಿತ್ರ ಇದು: ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಬಳಕೆ ಕಡ್ಡಾಯ
  4. Govt Employees | 2023ರ ಸಾರ್ವತ್ರಿಕ ರಜೆ ಪಟ್ಟಿ ಪ್ರಕಟ: ಸರ್ಕಾರಿ ನೌಕರರಿಗೆ 98 ದಿನ ರಜೆ
  5. Body In Suitcase | ಫ್ರಿಡ್ಜ್‌ ಆಯ್ತು, ಮೆಡಿಕಲ್‌ ಶಾಪ್‌ ಆಯ್ತು, ಈಗ ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ, ತಂದೆ-ತಾಯಿ ಬಂಧನ
Exit mobile version