Site icon Vistara News

VISTARA-AKHADA EXIT POLL: ಬಿಜೆಪಿ 85-93, ಕಾಂಗ್ರೆಸ್‌ 86-96, ಜೆಡಿಎಸ್‌ 28-36, ಪಕ್ಷೇತರ 06-09 ಸ್ಥಾನ

Karnataka Election Exit Poll

Karnataka Election Exit Poll

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ವಿಸ್ತಾರ ನ್ಯೂಸ್‌ ಅಖಾಡ (Vistara News Akhada Exit poll) ನಡೆಸಿದ ಮತದಾನೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಲಭ್ಯವಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯ ಲಕ್ಷಣಗಳನ್ನು ತೋರಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕತ್ತುಕತ್ತಿನ ಹಣಾಹಣಿ ಇದೆ.

ಸಮೀಕ್ಷೆಯ ಪ್ರಕಾರ, ಬಿಜೆಪಿ 85ರಿಂದ 93 ಸ್ಥಾನಗಳು ಸಿಗಲಿದ್ದರೆ, ಕಾಂಗ್ರೆಸ್‌ 86ರಿಂದ 96 ಸ್ಥಾನಗಳು ಸಿಗಲಿವೆ. ಅತ್ಯಂತ ನಿರ್ಣಾಯಕ ಸ್ಥಾನದಲ್ಲಿ ನಿಲ್ಲಲಿರುವ ಜೆಡಿಎಸ್‌ಗೆ 28ರಿಂದ 36 ಸ್ಥಾನಗಳು ಸಿಗಲಿವೆ. 6ರಿಂದ 9 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಸ್ಥಾನಗಳಿವೆ.

ವಿಸ್ತಾರ ಮತದಾನೋತ್ತರ ಸಮೀಕ್ಷೆ ವಿವರ

ಬಿಜೆಪಿ : 85-93
ಕಾಂಗ್ರೆಸ್‌: 86-96
ಜೆಡಿಎಸ್‌: 28-36
ಇತರ: 06-09

2018ರ ಫಲಿತಾಂಶ ಏನಾಗಿತ್ತು?

2018ರ ಚುನಾವಣೆ ಫಲಿತಾಂಶವು ಎಕ್ಸಿಟ್‌ ಪೋಲ್‌ನ ಬಹುತೇಕ ಸಮೀಕ್ಷೆಗಳಂತೆಯೇ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಬಿಜೆಪಿ 104 ಕ್ಷೇತ್ರ ಗೆದ್ದು ಅತಿ ಹೆಚ್ಚು ಕ್ಷೇತ್ರ ಪಕ್ಷವಾಗಿ ಹೊರಹೊಮ್ಮಿತ್ತು. ಇನ್ನು ಕಾಂಗ್ರೆಸ್‌ 80, ಜೆಡಿಎಸ್‌ 37 ಹಾಗೂ ‌ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಫಲಿತಾಂಶ ಪ್ರಕಟವಾದ ಕೂಡಲೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಸರ್ಕಾರ ರಚನೆ ಮಾಡಿದ್ದವು.

ಮುಂದೆ ನಡೆದ ಆಪರೇಷನ್‌ ಕಮಲ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್‌ನ 14 ಮಂದಿ, ಜೆಡಿಎಸ್‌ನ ಮೂವರು ಬಿಜೆಪಿ ಸೇರಿದ್ದರು. ಇದರಿಂದಾಗಿ ಬಿಜೆಪಿಯ ಸಂಖ್ಯಾ ಬಲ 121ಕ್ಕೇರಿದರೆ ಕಾಂಗ್ರೆಸ್‌ ಬಲ 66ಕ್ಕೆ ಮತ್ತು ಜೆಡಿಎಸ್‌ 34 ಸ್ಥಾನಕ್ಕೆ ಇಳಿದಿತ್ತು.

ಇದನ್ನೂ ಓದಿ : Karnataka Election Exit Poll: ಕಾಂಗ್ರೆಸ್‌ ಅಧಿಕಾರಕ್ಕೆ ಸನಿಹ; ಟಿವಿ9-ಸಿವೋಟರ್‌ ಮತಗಟ್ಟೆ ಸಮೀಕ್ಷೆ; ಬೇರೆ ಎಕ್ಸಿಟ್‌ ಪೋಲ್‌ ಹೇಳುವುದೇನು?

vistara-exit-poll suggests hung Assembly in Karnataka

Exit mobile version