ಕನ್ನಡ ಮಠ ಎಂದೇ ಪ್ರಸಿದ್ಧಿ ಪಡೆದ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿನ ಹಿರೇಮಠದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಕನ್ನಡ ಬಿತ್ತುವ, ಬೆಳೆಯುವ, ಕಟ್ಟುವ ಕಾಯಕ ಯೋಗಿಯಾಗಿದ್ದಾರೆ. ತಮ್ಮ ಗುರುಗಳಾದ ಡಾ. ಚೆನ್ನಬಸವ ಪಟ್ಟದ್ದೇವರು ತೋರಿದ ಬಸವ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಶ್ರೀಗಳು ಮಠದ ಕನ್ನಡ ಸೇವೆಯ ಪರಂಪರೆಯನ್ನು ಮುಂದುವರಿಸಿಕೊಂಡು(Vistara News Launch) ಬರುತ್ತಿದ್ದಾರೆ.
ಶ್ರೀಗಳು ಸಾಹಿತ್ಯ ಸೇವೆಯಲ್ಲೂ ಅಗ್ರಗಣ್ಯರು. 29 ಕೃತಿಗಳ ಲೇಖಕರಾಗಿದ್ದಾರೆ. 5 ಕೃತಿಗಳನ್ನು ಸಂಪಾದಿಸಿದ್ದಾರೆ. ಬಸವ ಧರ್ಮ ಪ್ರಸಾರ ಸಂಸ್ಥೆಯ ಮೂಲಕ ಕನ್ನಡ, ಮರಾಠಿ, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಬಸವ ಕಾಯಕದಲ್ಲಿ ನಿರತರಾಗಿರುವ ಶ್ರೀಗಳು, ದೇಶದ ವಿವಿಧೆಡೆ ಬಸವ ಪರಿಷತ್ ಸ್ಥಾಪಿಸಿದ್ದಾರೆ. ವಿದೇಶಗಳಲ್ಲಿ ಬಸವತತ್ವ ಪ್ರಸಾರಕ್ಕಾಗಿ ಪ್ರವಾಸ ಕೈಗೊಂಡಿದ್ದಾರೆ.
ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಮೂಲಕ 55 ವಿದ್ಯಾಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಶ್ರೀಗಳಿಗೆ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯದ ಸೇವೆಗಾಗಿ ಹಲವು ಪ್ರಶಸ್ತಿ- ಪುರಸ್ಕಾರಗಳು ಸಂದಿವೆ. ಪೂಜ್ಯ ಶ್ರೀಗಳಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Vistara news launch | ಬ್ರೇಕಿಂಗ್ ನ್ಯೂಸ್‌ಗಿಂತ ಮೇಕಿಂಗ್ ನ್ಯೂಸ್ ಅಗತ್ಯ: ರಾಘವೇಶ್ವರ ಭಾರತಿ ಸ್ವಾಮೀಜಿ