Vistara News Launch | ಶ್ರೀ ಡಾ. ಬಸವಲಿಂಗ ಪಟ್ಟದ್ದೇವರಿಗೆ ʼಕಾಯಕ ಯೋಗಿʼ ಪುರಸ್ಕಾರ - Vistara News

ಕರ್ನಾಟಕ

Vistara News Launch | ಶ್ರೀ ಡಾ. ಬಸವಲಿಂಗ ಪಟ್ಟದ್ದೇವರಿಗೆ ʼಕಾಯಕ ಯೋಗಿʼ ಪುರಸ್ಕಾರ

ವಿಸ್ತಾರ ನ್ಯೂಸ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕನ್ನಡ ಮಠ ಎಂದೇ ಪ್ರಸಿದ್ಧಿ ಪಡೆದ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿನ ಹಿರೇಮಠದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಅವರಿಗೆ ವಿಸ್ತಾರ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಇವರ ಕಿರು ಪರಿಚಯ ಇಲ್ಲಿದೆ.

VISTARANEWS.COM


on

Vistara News Launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕನ್ನಡ ಮಠ ಎಂದೇ ಪ್ರಸಿದ್ಧಿ ಪಡೆದ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿನ ಹಿರೇಮಠದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಕನ್ನಡ ಬಿತ್ತುವ, ಬೆಳೆಯುವ, ಕಟ್ಟುವ ಕಾಯಕ ಯೋಗಿಯಾಗಿದ್ದಾರೆ. ತಮ್ಮ ಗುರುಗಳಾದ ಡಾ. ಚೆನ್ನಬಸವ ಪಟ್ಟದ್ದೇವರು ತೋರಿದ ಬಸವ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಶ್ರೀಗಳು ಮಠದ ಕನ್ನಡ ಸೇವೆಯ ಪರಂಪರೆಯನ್ನು ಮುಂದುವರಿಸಿಕೊಂಡು(Vistara News Launch) ಬರುತ್ತಿದ್ದಾರೆ.

ಶ್ರೀಗಳು ಸಾಹಿತ್ಯ ಸೇವೆಯಲ್ಲೂ ಅಗ್ರಗಣ್ಯರು. 29 ಕೃತಿಗಳ ಲೇಖಕರಾಗಿದ್ದಾರೆ. 5 ಕೃತಿಗಳನ್ನು ಸಂಪಾದಿಸಿದ್ದಾರೆ. ಬಸವ ಧರ್ಮ ಪ್ರಸಾರ ಸಂಸ್ಥೆಯ ಮೂಲಕ ಕನ್ನಡ, ಮರಾಠಿ, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಬಸವ ಕಾಯಕದಲ್ಲಿ ನಿರತರಾಗಿರುವ ಶ್ರೀಗಳು, ದೇಶದ ವಿವಿಧೆಡೆ ಬಸವ ಪರಿಷತ್ ಸ್ಥಾಪಿಸಿದ್ದಾರೆ. ವಿದೇಶಗಳಲ್ಲಿ ಬಸವತತ್ವ ಪ್ರಸಾರಕ್ಕಾಗಿ ಪ್ರವಾಸ ಕೈಗೊಂಡಿದ್ದಾರೆ.

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಮೂಲಕ 55 ವಿದ್ಯಾಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಶ್ರೀಗಳಿಗೆ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯದ ಸೇವೆಗಾಗಿ ಹಲವು ಪ್ರಶಸ್ತಿ- ಪುರಸ್ಕಾರಗಳು ಸಂದಿವೆ. ಪೂಜ್ಯ ಶ್ರೀಗಳಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara news launch | ಬ್ರೇಕಿಂಗ್‌ ನ್ಯೂಸ್‌ಗಿಂತ ಮೇಕಿಂಗ್‌ ನ್ಯೂಸ್‌ ಅಗತ್ಯ: ರಾಘವೇಶ್ವರ ಭಾರತಿ ಸ್ವಾಮೀಜಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comment

  1. SHASHIDHAR kosmbe

    6 November 2022, 4:27 PM at 4:27 pm

    ನಮ್ಮೆಲ್ಲರ ಹೆಮ್ಮೆಯ, ಅಚ್ಚುಮೆಚ್ಚಿನ ಹರಿಪ್ರಕಾಶ ಕೋಣಿಮನಿಯವರ ಸಾರಥ್ಯದಲ್ಲಿ ಇಂದು ಅನಾವರಣಗೊಂಡ ವಿಸ್ತಾರ ಜಗತ್ತಿನಾದ್ಯಂತ ಪ್ರಕಾಶಿಸಲಿ…

Leave a Reply

Your email address will not be published. Required fields are marked *

ಕರ್ನಾಟಕ

MLC Election Results: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್

MLC Election Results: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ವಿರುದ್ಧ 4,651 ಮತಗಳ ಅಂತರದಿಂದ ಜಯಭೇರಿ ಮೊಳಗಿಸಿದ್ದಾರೆ.

VISTARANEWS.COM


on

MLC Election
Koo

ಕಲಬುರಗಿ: ವಿಧಾನ ಪರಿಷತ್‌ಗೆ ಈಶಾನ್ಯ ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ (North East Graduate Constituency) ಎರಡನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್ ಗೆಲುವು ಕಂಡಿದ್ದಾರೆ. ಇವರು 4,651 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ವಿರುದ್ಧ ಜಯ ಸಾಧಿಸುವ ಮೂಲಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.

ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್‌ಗೆ 43,484 ಮತ ಬಂದಿದ್ದರೆ, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ 38,833 ಮತಗಳು ಗಳಿಸಿದ್ದಾರೆ. ಈ ಮೂಲಕ 4,651 ಮತಗಳ ಅಂತರದಿಂದ ಡಾ.ಚಂದ್ರಶೇಖರ್ ಪಾಟೀಲ್ ಕ್ಷೇತ್ರದಲ್ಲಿ ವಿಜಯಪತಾಕೆ ಹಾರಿಸಿದ್ದಾರೆ. ಒಟ್ಟಾರೆ 1,09,031 ಮತ ಚಲಾವಣೆಯಾಗಿದ್ದು, ಇದರಲ್ಲಿ 96,519 ಮತಗಳು ಪುರಸ್ಕೃತಗೊಂಡಿದ್ದು, 12,513 ಮತಗಳು ತಿರಸ್ಕೃತಗೊಂಡಿವೆ.

ಇದನ್ನೂ ಓದಿ | MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

ಫಲಿತಾಂಶದ ಬಗ್ಗೆ ಕಾಂಗ್ರೆಸ್‌ನ ನೂತನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಮಾತನಾಡಿ, ಇದು ನನ್ನ ಗೆಲುವಲ್ಲಾ, ಏಳು ಜಿಲ್ಲೆಯ ಪದವಿಧರರ ಗೆಲುವು. ನನ್ನ ಗೆಲುವಿಗೆ ಶಿಕ್ಷಕರು, ಪದವೀಧರರು ಕಾರಣ. ಕಲ್ಯಾಣ‌ ಕರ್ನಾಟಕ ಭಾಗದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಶ್ರಮಿಸುವೆ. ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಪ್ರಯತ್ನ ಮಾಡುವೆ. ನಾನು ರಾಜಕಾರಣಿ ಮನೆತನದವನು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ನನಗೂ ಶಿಕ್ಷಕರ ಸಮಸ್ಯೆ ಕಷ್ಟ ಏನು ಅಂತ ಗೊತ್ತಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು, ಕೆಲಸ‌ ಮಾಡಲು ಸಹಕರಿಸಲಿಲ್ಲ.. ಈಗ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಅತಿಥಿ ಉಪನ್ಯಾಸಕರ ಕಾಯಮಾತಿಗೆ ಹಿರಿಯರ ಜತೆ ಮಾತನಾಡುವೆ ಎಂದು ತಿಳಿಸಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಧನಂಜಯ ಸರ್ಜಿಗೆ ಗೆಲುವು; ರಘುಪತಿ ಭಟ್‌ ಬಂಡಾಯ ವಿಫಲ

dhananjaya sarji mlc election

ಮೈಸೂರು: ವಿಧಾನ ಪರಿಷತ್‌ಗೆ (MLC Election Results) ನೈರುತ್ಯ ಪದವೀಧರ ಕ್ಷೇತ್ರದಿಂದ (Graduate constituency) ನಡೆದ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಾ. ಧನಂಜಯ ಸರ್ಜಿಗೆ ಭರ್ಜರಿ ಗೆಲುವು ದೊರೆತಿದೆ. ಕಾಂಗ್ರೆಸ್ (Congress) ಅಭ್ಯರ್ಥಿ ಆಯನೂರು ಮಂಜುನಾಥ್‌ಗೆ ಹೀನಾಯ ಸೋಲಾಗಿದೆ. ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಮಾಜಿ ಶಾಸಕ ರಘುಪತಿ ಭಟ್‌ (Raghupathi Bhat) ಅವರ ಉಮೇದುವಾರಿಕೆ ವಿಫಲವಾಗಿದೆ.

ಬಿಜೆಪಿಯ ಧನಂಜಯ ಸರ್ಜಿಗೆ 37,627 ಮತಗಳು ಲಭ್ಯವಾಗಿವೆ. ಕಾಂಗ್ರೆಸ್‌ನ ಆಯನೂರು ಮಂಜುನಾಥ್‌ಗೆ 13,516 ಮತಗಳು ಲಭ್ಯವಾಗಿವೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಗೆ 24,111 ಮತಗಳ ಅಂತರದ ಭರ್ಜರಿ ಗೆಲುವು ಪ್ರಾಪ್ತವಾಗಿವೆ. ಈ ಮೂಲಕ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸತತ ಏಳನೇ ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ.

ಚಲಾವಣೆಯಾಗಿದ್ದ ಒಟ್ಟು ಮತಗಳು 66497. ಈ ಪೈಕಿ ಸಿಂಧುವಾದ ಮತಗಳು 61382. ಕುಲಗೆಟ್ಟ ಮತಗಳು 5115. ಗೆಲುವಿಗಾಗಿ ನಿಗದಿಪಡಿಸಿದ್ದ ಕೋಟಾ ಮತಗಳು 30,692. ನಿಗದಿಪಡಿಸಿದ್ದ ಕೋಟಾ ಮತಗಳಿಗಿಂತ ಹೆಚ್ಚಿನ ಪ್ರಮಾಣದ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ ಬಿಜೆಪಿಯ ಧನಂಜಯ ಸರ್ಜಿ.

ಇದನ್ನೂ ಓದಿ | MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ 7,039 ಮತಗಳು ಲಭ್ಯವಾಗಿವೆ. ಇವರ ಪರವಾಗಿ ಶಿವಮೊಗ್ಗದಿಂದ ಮಾಜಿ ಸಚಿವ ಈಶ್ವರಪ್ಪ ಕೂಡ ಬಂದು ಮತ ಯಾಚಿಸಿದ್ದರು. ಆದರೆ ಬಿಜೆಪಿ ಮತ ಗಳಿಕೆಯಲ್ಲಿ ಯಾವುದೇ ಕನ್ನ ಕೊರೆಯಲು ಇವರು ವಿಫಲರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಪಕ್ಷ ಟಿಕೆಟ್‌ ನೀಡಿರಲಿಲ್ಲ. ವಿಧಾನ ಪರಿಷತ್ತಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್‌ಗೆ ಅದೂ ಸಿಕ್ಕಿರಲಿಲ್ಲ. ಇದೀಗ ಬಂಡಾಯವೂ ವಿಫಲವಾಗಿದೆ. ಹಿಜಾಬ್‌ ಮುಂತಾದ ಪ್ರಕರಣಗಳಲ್ಲಿ ಆಕ್ರಮಣಕಾರಿ ನಿಲುವು ತಾಳಿದ್ದ ರಘುಪತಿ ಭಟ್‌ ಅವರ ಈ ತೀವ್ರ ನಿಲುವೇ ಅವರನ್ನು ಬಿಜೆಪಿ ಕೈಬಿಡಲು ಕಾರಣವಾಯಿತಾ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.

Continue Reading

ಕರ್ನಾಟಕ

Valmiki Corporation Scam: ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

Valmiki Corporation Scam: ಸಿಎಂ ಸಿದ್ದರಾಮಯ್ಯ ಶಿಫಾರಸಿನ ಮೇರೆಗೆ ಬಿ.ನಾಗೇಂದ್ರ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅನುಮೋದಿಸಿದ್ದಾರೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Valmiki Corporation Scam) ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಗುರುವಾರ ರಾಜೀನಾಮೆ ನೀಡಿದ್ದರು. ಇದೀಗ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಗೀಕಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಫಾರಸಿನ ಮೇರೆಗೆ ಬಿ.ನಾಗೇಂದ್ರ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ.

ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದರು. ಹೀಗಾಗಿ ಭಾರತದ ಸಂವಿಧಾನದ 164 (1) ನೇ ವಿಧಿಯಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು, ನಾಗೇಂದ್ರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಇದನ್ನೂ ಓದಿ | Kangana Ranaut: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕುಲ್ವಿಂದರ್‌ ಕೌರ್‌ ಅರೆಸ್ಟ್‌

ಸಿಎಂ ಸಿದ್ದರಾಮಯ್ಯಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದ್ದ ಬಿ.ನಾಗೇಂದ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Valmiki Corporation Scam) ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದರಿಂದ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಇದರಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಕೆಟ್‌ ಪತನವಾದಂತಾಗಿದೆ.

ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಉಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾಗೇಂದ್ರ ರಾಜೀನಾಮೆ ಪತ್ರ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಒಂದೇ ಸಾಲು ಬರೆದಿರುವುದು ಕಂಡುಬಂದಿದ್ದು, ನನ್ನ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ನಾಗೇಂದ್ರ ಬರೆದಿದ್ದರು.

ಇದಕ್ಕೂ ಮೊದಲು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಗೇಂದ್ರ ಅವರು, ರಾಜೀನಾಮೆ ನೀಡುವುದು ನನ್ನ ಸ್ವ ನಿರ್ಧಾರವಾಗಿದೆ. ಇದಕ್ಕಾಗಿ ಯಾರೂ ಒತ್ತಡ ಹಾಕಿಲ್ಲ. ಆತ್ಮ ಸಾಕ್ಷಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ, ನಾನು ನಿರ್ದೋಷಿ. ಪ್ರಕರಣದಲ್ಲಿ ತನಿಖೆ ನಡೆದು ಸತ್ಯಾಂಶ ಜನರಿಗೆ ತಿಳಿಯಲಿದೆ ಎಂದು ತಿಳಿಸಿದ್ದರು.

ಕಳೆದ ಹತ್ತು ದಿನಗಳಿಂದ ವಾಲ್ಮೀಕಿ ನಿಗಮ ಅಕ್ರಮದ (Valmiki Corporation Scam) ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಕೂಡ ನನ್ನ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನನಗೆ ಯಾರ ಒತ್ತಡಕ್ಕೂ ಮಣಿದಿಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ಸಚಿವ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು.

ಇದನ್ನೂ ಓದಿ | Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!

ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ಗುರುವಾರ ಬೆಳಗ್ಗೆ ಮನವಿ ಪತ್ರಸಲ್ಲಿಸಿದ್ದರು. ನಂತರ ಸಚಿವ ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಪತ್ರ ಸಲ್ಲಿಸಿದ್ದರು.

Continue Reading

ಶಿವಮೊಗ್ಗ

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Sigandur launch: ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತಗೊಂಡಿದೆ, ಹೀಗಾಗಿ ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.

VISTARANEWS.COM


on

By

Sigandur launch
Koo

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಹಿನ್ನೆಲೆಯಲ್ಲಿ ಸಿಗಂದೂರು ಲಾಂಚ್‌ನಲ್ಲಿ (Sigandur launch) ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯಕ್ಕೆ ಲಾಂಚ್‌ನಲ್ಲಿ ಬೈಕ್ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮಳೆ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರು ಭಾಗದಲ್ಲಿರುವ ಲಾಂಚ್ ಸಂಚಾರ ಸೇವೆ ಸ್ಥಗಿತವಾಗಿದೆ. ಎರಡು ಬದಿಯಲ್ಲಿ ಪ್ಲಾಟ್ ಫಾರ್ಮ್‌ಕ್ಕಿಂತ ನೀರು ಕಡಿಮೆ ಆದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಮಳೆ ಬಾರದೆ ಇದ್ದರೆ 16 ದಿನದಲ್ಲಿ ಸಂಪೂರ್ಣವಾಗಿ ಎಲ್ಲ ವಾಹನಗಳು ಹಾಗೂ ಸಾರ್ವಜನಿಕ ಪ್ರವೇಶವು ಬಂದ್ ಆಗಲಿದೆ ಎನ್ನಲಾಗಿದೆ.

ಶರಾವತಿ ಹಿನ್ನೀರು ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಈ ಲಾಂಚ್‌ ಸಂಪರ್ಕ ಕಲ್ಪಿಸಲಿದೆ. ಜತೆಗೆ ಸಾಗರ ತಾಲೂಕಿನ ಕಳಸವಳ್ಳಿ ಮತ್ತು ಅಂಬರಗೋಡ್ಲು, ಕರೂರು, ಬಾರಂಗಿ ಹೋಬಳಿಯ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಇದಾಗಿದೆ. ಲಾಂಚ್ ಸಂಪೂರ್ಣ ಸ್ಥಗಿತಗೊಂಡರೆ 90 ಕಿಲೋ ಮೀಟರ್ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಇದೆ. ಇತ್ತ ಭಾರಿ ವಾಹನ ನಿರ್ಬಂಧದಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ಬೆಳಗಾವಿ: ಬೆಳಗಾವಿಯ ಗೋಕಾಕ ತಾಲೂಕಿನ ಗೋಕಾಕ ಕೊಣ್ಣೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡದ ಭೂತದ ಕಾಟ (Karnataka Rain) ಶುರುವಾಗಿದೆ. ಅದು ಕೂಡ ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

karnataka rain

ಗೋಕಾಕ ಹಾಗೂ ಕೊಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಬಂಡೆಗಳು ಉರುಳಿ ಬೀಳುತ್ತಿವೆ. ಬೆಟ್ಟದಿಂದ ಉರುಳುತ್ತಿರುವ ಬಂಡೆಗಳಿಂದ ಸವಾರರು, ಜನರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಬಂಡೆಗಳ ಕೆಳಗಿನ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

karnataka rain

ಕೊಚ್ಚಿ ಹೋದ ಬೈಕ್‌

ವಿಜಯಪುರದಲ್ಲಿ ನಿನ್ನೆ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆ ನೀರಲ್ಲಿ ಬೈಕ್‌ವೊಂದು ಕೊಚ್ಚಿ ಹೋದ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿರುವ ಮಳೆ ನೀರಲ್ಲಿ ಬೈಕ್ ಕೊಂಡೊಯ್ಯುವ ಹರಸಾಹಸದ ವೇಳೆ ಕೊಚ್ಚಿಹೋಗಿದೆ.

ಇದನ್ನೂ ಓದಿ: Electric shock : ಶಾಲೆಗೆ ಹೋದವಳು ಮಸಣ ಸೇರಿದಳು; ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು

ಇತ್ತ ತುಮಕೂರು ಜಿಲ್ಲೆಯಲ್ಲಿ ರಾತ್ರಿ ಧಾರಕಾರ ಸುರಿದ ಮಳೆ ರಭಸಕ್ಕೆ ಕೆರೆ, ಕಟ್ಟೆಗಳು ಕೋಡಿ ಬಿದ್ದಿದ್ದವು. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಿರುವ ಜಂಪೇನಹಳ್ಳಿ ಕೆರೆ ನೀರಿಲ್ಲದೇ ಬತ್ತಿಹೋಗಿತ್ತು. ಇದೀಗ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು 1,768 ಕ್ಯೂಸೇಕ್ ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಜೂನ್ ಕಳೆದರು ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ.

ಗ್ರಾಮಕ್ಕೆ ರಭಸವಾಗಿ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕೂನಬೇವು ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ವರುಣ ಅಬ್ಬರಕ್ಕೆ ಕೊನಬೇವು ಗ್ರಾಮ ಜಲಾವೃತಗೊಂಡಿತ್ತು. ಗ್ರಾಮದ ರಸ್ತೆಯಲ್ಲಿ ನೀರು ನದಿಯಂತೆ ಹರಿದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ನೀರಿನಲ್ಲಿ ಬಸ್ ಸಿಲುಕಿದ ಘಟನೆಯು ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿಕ್ಷಣ

RTE Admission 2024: ನಾಳೆಯಿಂದ ಆರ್‌ಟಿಇ ಅಡಿ ದಾಖಲಾತಿ ಪ್ರಕ್ರಿಯೆ ಪ್ರಾರಂಭ

RTE Admission 2024 : ಜೂನ್‌ 8ರಿಂದ 2024-25ನೇ ಸಾಲಿಗೆ ಆರ್‌ಟಿಇ ಅಡಿ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗಲಿದೆ. ಈ ಸಂಬಂಧ ಶಿಕ್ಷಣ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

VISTARANEWS.COM


on

By

RTE Admissions 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿದ್ದು, ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ. ಈಗ ಆರ್‌ಟಿಇ ಅಡಿ ಶಾಲಾ ದಾಖಲಾತಿ (RTE Admission 2024) ಜೂನ್‌ 8ರಿಂದ ಪ್ರಾರಂಭವಾಗಲಿದ್ದು, ಜೂ.19ರಂದು ಕೊನೆ ದಿನವಾಗಿದೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಆರ್‌ಟಿಇ ಪ್ರವೇಶಕ್ಕೆ ಅರ್ಜಿಗಳ ಸಲ್ಲಿಕೆಯಾಗಿದ್ದು, ಡೇಟಾ ಪರಿಶೀಲನೆ ಮಾಡಲಾಗಿದೆ. ಲಾಟರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿ ಬಿಡುಗಡೆಯಾಗಿದ್ದು, ಜೂ.7ರಂದು ಆನ್‌ಲೈನ್‌ ಮೂಲಕ ಆರ್‌ಟಿಇ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ.

ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ಜೂನ್‌ 8ರಿಂದ 19ರವರೆಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಜೂನ್‌ 20ವರೆಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಿದೆ.

ಮೊದಲ ಸುತ್ತಿನ ಸೀಟು ಹಂಚಿಕೆ ನಂತರ ಜೂನ್‌ 25ರಂದು ಎರನಡೇ ಸುತ್ತಿನ ಸೀಟು ಹಂಚಿಕೆಯನ್ನು ನಡೆಸಲಾಗುತ್ತದೆ. ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ಜೂನ್‌ 26 ರಿಂದ ಜುಲೈ 2ರ ವರೆಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ಆಯಾ ಶಾಲಾ ಮುಖ್ಯಸ್ಥರು ಜುಲೈ 3ರಂದು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕಿದೆ.

ಆರ್‌ಟಿಇ ಅಡಿ ಮೊದಲ ಸುತ್ತಿನ ಆನ್‌ಲೈನ್‌ ಲಾಟರಿ ಪ್ರಕ್ರಿಯೆಯನ್ನು ಈ ಮೊದಲು ಜೂ 5ಕ್ಕೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಲಾಟರಿ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಅದರಂತೆ ಜೂ. 7ರಂದು ಶುಕ್ರವಾರ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯು ನಡೆಯಲಿದೆ.

RTE Admissions 2024

ಮೊದಲ ಸುತ್ತಿನಲ್ಲಿ 6,090 ಮಕ್ಕಳು ಅರ್ಹ

2024-25ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಹ 15,895 ಅರ್ಜಿಗಳನ್ನು ಮೊದಲ ಸುತ್ತಿನ ಲಾಟರಿಗೆ ಪರಿಗಣಿಸಲಾಗಿದೆ. ಜೂ.7ರಂದು ಮೊದಲನೇ ಸುತ್ತಿನ ಲಾಟರಿಯನ್ನು ಆನ್‌ಲೈನ್ ಮೂಲಕ ನಡೆಸಲಾಗಿದೆ.

ಇಂದು ನಡೆದ ಈ ಮೊದಲನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 6,090 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ. ಎಲ್ಲಾ ಪೋಷಕರು ಜೂ.8 ರಿಂದ 19 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ಶಿಕ್ಷಣ ಇಲಾಖೆ ತಿಳಿಸಿದೆ. ಸೀಟು ಹಂಚಿಕೆ ವಿವರ ಇಲಾಖಾ ವೆಬ್‌ಸೈಟ್ ನಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ: Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ವಸತಿ ಶಾಲೆಗಳಿಗೂ ಆರ್‌ಟಿಇ ಅನ್ವಯ

ಕರ್ನಾಟಕ ಹೈಕೋರ್ಟ್ ಕಳೆದ ವಾರ ವಸತಿ ಶಾಲೆಗಳಿಗೂ ಆರ್‌ಟಿಐ ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಆದೇಶ ನೀಡಿತ್ತು. ಇದರಿಂದಾಗಿ ಇನ್ನು ಮುಂದೆ ವಸತಿ ಶಾಲೆಗಳು ಆರ್‌ಟಿಇ ಅನ್ವಯವಾಗುವುದಿಲ್ಲವೆಂದು ಹೇಳುವಂತಿಲ್ಲ. ಅಲ್ಲದೇ ಕೋರ್ಟ್ ತನ್ನ ಆದೇಶದಲ್ಲಿ ಆರ್‌ಟಿಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರಕಾರ ಹೊರತುಪಡಿಸಿ ಇತರೆ ಎಲ್ಲಾ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
MLC Election
ಕರ್ನಾಟಕ12 mins ago

MLC Election Results: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್

Saree Fashion
ಫ್ಯಾಷನ್14 mins ago

Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

T20 World Cup
ಪ್ರಮುಖ ಸುದ್ದಿ56 mins ago

T20 World Cup : ಪಾಕಿಸ್ತಾನ ತಂಡಕ್ಕೆ ಕರಾಳ ದಿನ; ಮಾಜಿ ಆಟಗಾರರಿಂದ ಟೀಕೆ

World Food Safety Day
ಆರೋಗ್ಯ1 hour ago

World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

NDA Meeting
ದೇಶ1 hour ago

NDA Meeting: ಎನ್‌ಡಿಎ ಸಭೆಯಲ್ಲಿ ಮೋದಿಯ ಪಾದ ಮುಟ್ಟಿ ನಮಸ್ಕರಿಸಲು ಹೋದ ನಿತೀಶ್ ಕುಮಾರ್! ವಿಡಿಯೊ ನೋಡಿ

Viral Video
ವೈರಲ್ ನ್ಯೂಸ್1 hour ago

Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

Valmiki Corporation Scam
ಕರ್ನಾಟಕ1 hour ago

Valmiki Corporation Scam: ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

Heera Mandi Fashion
ಫ್ಯಾಷನ್1 hour ago

Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

Chandan Shetty divorce main Reason children
ಸ್ಯಾಂಡಲ್ ವುಡ್1 hour ago

Niveditha Gowda: ಮಗು ವಿಚಾರಕ್ಕೆ ಮುನಿಸು; ಒಂದೇ ಕಾರಲ್ಲಿ ಬಂದು ಡಿವೋರ್ಸ್‌ ಅರ್ಜಿ ಸಲ್ಲಿಸಿದ ಚಂದನ್‌-ನಿವೇದಿತಾ!

Pawan Kalyan
ರಾಜಕೀಯ2 hours ago

Pawan Kalyan: ಪವನ್ ಕಲ್ಯಾಣ್ ಗಾಳಿಯಲ್ಲ ಬಿರುಗಾಳಿ ಎಂದ ಮೋದಿ! ಮೋದಿ ಇರುವವರೆಗೆ ದೇಶ ತಲೆಬಾಗುವುದಿಲ್ಲ ಎಂದ ಪವನ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Sigandur launch
ಶಿವಮೊಗ್ಗ2 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

ಟ್ರೆಂಡಿಂಗ್‌