ಹುಬ್ಬಳ್ಳಿ: ಡಿಜಿಟಲ್ ಮಾಧ್ಯಮದ ಬೆನ್ನೆಲುಬಾದ ಕೇಬಲ್ ಆಪರೇಟರ್‌ಗಳು (Cable Network) ಒಂದು ಸಂಘಟನೆಯಡಿ ಒಗ್ಗಟ್ಟಾಗಿರುವುದು ಸ್ವಾಗತಾರ್ಹ ಎಂದು ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ನಗರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಕಲ್ಯಾಣ ಕರ್ನಾಟಕ ಎಂಎಸ್‌ಓ ಅಸೋಸಿಯೇಷನ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನೀವಿದ್ದರೆ ಮಾತ್ರ ನಮ್ಮ ಒಳ್ಳೆಯ ಕಾರ್ಯಕ್ರಮಗಳು ಜನರನ್ನು ತಲುಪುತ್ತವೆ. ಸಂಘಟನೆಯಿಂದಲೇ ಶಕ್ತಿ ಹೆಚ್ಚಾಗುತ್ತದೆ. ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಜನರು ಮಾನವೀಯ ಸಂಬಂಧಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಪ್ರತಿ ಮನೆಗಳ ಜತೆಗೆ ಸಂಬಂಧ ಗಟ್ಟಿಯಾಗಿದ್ದರೆ ಅದೇ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.
ಎಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂಬುದು ಗೊತ್ತಾಗದಿದ್ದರೆ ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತೇವೆ. ಟಿವಿ ಚಾನೆಲ್‌ಗೆ ತನ್ನದೇ ಆದ ಮಿತಿಗಳಿವೆ. ಬಹಳಷ್ಟು ಜನ ಮೊಬೈಲ್‌ನಲ್ಲಿ ಮಾಹಿತಿ ಪಡೆಯುತ್ತಿದ್ದಾರೆ, ಜನರ ಕಷ್ಟ-ಸುಖ ಕೇಳದಿದ್ದರೆ ಜನ ಬೇರೆ ಆಯ್ಕೆಯತ್ತ ಹೋಗುತ್ತಾರೆ. ನಾವಿಲ್ಲದೆ ನೀವಿಲ್ಲ, ನೀವಿಲ್ಲದೆ ನಾವಿಲ್ಲ. ನಿಮಗೆ ಏನೇ ಸಹಕಾರ ಬೇಕಿದ್ದರೂ ಕೊಡಲು ನಾನು ಸಿದ್ಧ. ಸತ್ಯಮೇವ ಜಯತೆ, ಕೇಬಲ್ ಮೇವ ಜಯತೆ ಎಂದು ಹೇಳುವ ಮೂಲಕ ಕೇಬಲ್ ಆಪರೇಟರ್‌ಗಳನ್ನು ಹುರಿದುಂಬಿಸಿದರು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ
ಉತ್ತರ ಕರ್ನಾಟಕ ಭಾಗದ ಎಂಎಸ್‌ಒ ಡಿಜಿಟಲ್ ಕೇಬಲ್ ನೆಟ್‌ವರ್ಕ್ ಮುಖ್ಯಸ್ಥರು ಭಾಗಿಯಾಗಿದ್ದರು. ವಿಸ್ತಾರ ನ್ಯೂಸ್ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಪೆಟ್ರಿಕ್ ರಾಜು, ಸುಭಾಷ್ ಕಾಟ್ಕರ್, ಗಣೇಶ ಕುಲಕರ್ಣಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.