Site icon Vistara News

Vistara News Impact | ಕ್ಲಾಸ್‌ಗೆ ಚಕ್ಕರ್‌ ಹಾಕಿ ಎಣ್ಣೆ ಪಾರ್ಟಿ ಮಾಡ್ತಿದ್ದ ನಾಲ್ವರು ಶಿಕ್ಷಕರು ಸಸ್ಪೆಂಡ್‌, HM ವಿರುದ್ಧ ಶಿಸ್ತುಕ್ರಮ

Hatti high school teacher

ರಾಯಚೂರು: ಮಕ್ಕಳಿಗೆ ಪಾಠ ಮಾಡೋದನ್ನು ಬಿಟ್ಟು, ಪ್ರತಿನಿತ್ಯ ಬಾರ್‌ಗೆ, ಡಾಬಾಕ್ಕೆ ಹೋಗಿ ಪಾರ್ಟಿ ಮಾಡುತ್ತಾ ಮೈಮರೆಯುತ್ತಿದ್ದ ಶಿಕ್ಷಕರಿಗೆ ಕೊನೆಗೂ ಪಾಠ ಕಲಿಸಲಾಗಿದೆ. ವಿಸ್ತಾರ ನ್ಯೂಸ್‌ ವರದಿ ಮಾಡುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಇವರಲ್ಲಿ ನಾಲ್ವರನ್ನು ಅಮಾನತು ಮಾಡಿದೆ (Vistara News Impact), ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿದೆ.

ರಾಯಚೂರು ಜಿಲ್ಲೆಯ‌ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ‌ಹಟ್ಟಿ ಗಣಿ‌ ಕ್ಯಾಂಪಿನ ಪ್ರೌಢ ಶಾಲೆಯ ಈ ಶಿಕ್ಷಕರು ಪ್ರತಿದಿನ ಮಧ್ಯಾಹ್ನ ಕ್ಲಾಸ್‌ಗೆ ಚಕ್ಕರ್ ಹಾಕಿ ಈ ರೀತಿ ಪಾರ್ಟಿ‌ ಮಾಡಿ ವಿವಾದಕ್ಕೆ ಗುರಿಯಾಗಿದ್ದರು ಹೈಸ್ಕೂಲ್‌ನ ಮುಖ್ಯ ಗುರುಗಳಾದ ಮುರುಳೀಧರ ರಾವ್ ನೇತೃತ್ವದಲ್ಲಿ ಈ‌ ಪಾರ್ಟಿ ನಡೆಯುತ್ತಿತ್ತು! ಈ‌ ಪಾರ್ಟಿಯಲ್ಲಿ
ದೈಹಿಕ ಶಿಕ್ಷಕರಾದ ಚನ್ನಪ್ಪ ರಾಠೋಡ್, ಲಿಂಗಪ್ಪ ಪೂಜಾರ, ಕೇಶವ್ ಕುಮಾರ,
ಅಬ್ದುಲ್ ಅಜೀಜ್ ಸಹವರ್ತಿಗಳಾಗಿ ಪಾಲ್ಗೊಳ್ಳುತ್ತಿದ್ದರು. ಪ್ರತಿ ದಿನ ಊಟಕ್ಕೆಂದು ಹೈಸ್ಕೂಲ್‌ ಪಕ್ಕದಲ್ಲಿರುವ ಡಾಬಾವೊಂದಕ್ಕೆ ಹೋಗುತ್ತಿದ್ದರು. ಅಲ್ಲಿ ಊಟ ಮಾಡುವುದಷ್ಟೇ ಅಲ್ಲ, ಚೆನ್ನಾಗಿ ಮತ್ತೇರಿಸಿಕೊಂಡು ಪಾರ್ಟಿ ಮಾಡುತ್ತಿದ್ದರು. ಹೀಗೆ ತೆರಳಿದವರು ಹೆಚ್ಚಿನ ಬಾರಿ ತರಗತಿಗೆ ಮರಳಿ ಬರುತ್ತಲೇ ಇರಲಿಲ್ಲ!

ಹೀಗಾಗಿ ಮಕ್ಕಳಿಗೆ ರಜೆ ಕೊಟ್ಟು ಬಿಂದಾಸ್‌ ಆಗಿ ಪಾರ್ಟಿ ಮಾಡುತ್ತಿದ್ದ ಈ ಶಿಕ್ಷಕರ ಮೇಲೆ ಕಣ್ಣಿಟ್ಟಿದ್ದ ಪೋಷಕರು ಅವರನ್ನು ವಿಡಿಯೊ ಮೂಲಕ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದರು. ಆ ವಿಡಿಯೊ ಮತ್ತು ವರದಿ ವಿಸ್ತಾರ ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಎಣ್ಣೆ ಪಾರ್ಟಿ ನಿರತ ಶಿಕ್ಷಕರು

ಹೈಸ್ಕೂಲ್‌ಗೆ ಭೇಟಿ ನೀಡಿದ ಡಿಡಿಪಿಐ
ವಿಸ್ತಾರ ನ್ಯೂಸ್‌ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಹಟ್ಟಿ ಕ್ಯಾಂಪ್ ಹೈಸ್ಕೂಲ್‌ಗೆ ರಾಯಚೂರು ಡಿಡಿಪಿಐ ವೃಷಬೇಂದ್ರಯ್ಯ ಮತ್ತು‌‌ ಲಿಂಗಸಗೂರು ತಾಲೂಕಿನ ಬಿಇಓ ಹಂಬಣ್ಣ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರುಎರಡು ಗಂಟೆ ಹೊತ್ತು ಶಿಕ್ಷಕರ ಬಗ್ಗೆ ಮಾಹಿತಿ ‌ಕಲೆ ಹಾಕಿದ ತಂಡ, ಬಳಿಕ‌ ನಾಲ್ವರು ಶಿಕ್ಷಕರನ್ನು ಅಮಾನತು ಮಾಡಿದೆ ಮುಖ್ಯ ಗುರುಗಳಾದ ಮುರುಳೀಧರ ರಾವ್‌ ರಾವ್ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದೆ.

ಇದನ್ನೂ ಓದಿ | Teachers alcohol party | ಕ್ಲಾಸ್‌ಗೆ ಚಕ್ಕರ್‌ ಹಾಕಿ ಮಧ್ಯಾಹ್ನವೇ ಎಣ್ಣೆ ಪಾರ್ಟಿಗೆ ಹಾಜರ್‌: ಇದು ಹಟ್ಟಿಯ ಶಿಕ್ಷಕರ ಗ್ಯಾಂಗ್‌ ಸ್ಟೋರಿ!

Exit mobile version