Site icon Vistara News

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

Vistara News impact, Governmet to scrap 7 d rule of SCSP and TSP act

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಹಾಗೂ ಅವರು ಮಂತ್ರಿ ಮಂಡಲ ಸದಸ್ಯರು ಗುರುವಾರ ಸಚಿವ ಸಂಪುಟ ನಡೆಸಿ(Cabinet Meeting), ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. ಈ ಪೈಕಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮಕ್ಕೆ ತಿದ್ದುಪಡಿ (SCSP and TSP act) ತರಲು ರಾಜ್ಯ ಸಚಿವ ಸಂಪುಟವು ತನ್ನ ಒಪ್ಪಿಗೆಯನ್ನು ನೀಡಿದೆ. ಈ ಸಮುದಾಯಗಳಿಗೆ ಮೀಸಲಾದ ಹಣವನ್ನು ಸರ್ಕಾರವು ಅನ್ಯ ಕಾರ್ಯಗಳಿಗೆ ಬಳಸುತ್ತಿದೆ ಎಂದು ವಿಸ್ತಾರ ನ್ಯೂಸ್ (Vistara News) ವರದಿ ಮಾಡಿತ್ತು. ಅದರ ಬೆನ್ನಲ್ಲೇ, ಸಂಪುಟ ಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು, ನಿಯಮ 7-ಡಿ ರದ್ದು ಮಾಡಲು ಒ್ಪಪಿಗೆ ನೀಡಿದೆ. ಈ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ರಾಜ್ಯ ಸರ್ಕಾರವು ರಸ್ತೆ, ಚರಂಡಿ, ಫ್ಲೈಓವರ್, ನೀರಾವರಿ ಯೋಜನೆಗಳಿಗೆ ಸರ್ಕಾರ ಬಳಿಕೊಳ್ಳುತ್ತಿತ್ತು. ಇದಕ್ಕೆ ನಿಯಮ 7-ಡಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈಗ ಅದೇ ನಿಯಮನ್ನು ತಿದ್ದುಪಡಿ ಮಾಡಲಾಗುತ್ತಿದ್ದು, ಮೀಸಲಾದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಎಸ್‌ಸಿ ಮತ್ತು ಎಸ್‌ಟಿ ಮೀಸಲಿಗೆ ಇದ್ದ ಸುಮಾರು 10 ಸಾವಿರ ಕೋಟಿ ರೂ. ಬಳಸಿತ್ತು. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ ಮತ್ತು ಎಸ್‌ಟಿ ಮೀಸಲು ಹಣ ಬಳಕೆ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಸಾರ ಮಾಡಿತ್ತು.

ಎಸ್‌ಸಿಎಸ್‌ಪಿಟಿ ಟಿಎಸ್‌ಪಿ ಎಂದರೆ ಏನು?

ಷೆಡ್ಯೂಲ್‌ ಕ್ಯಾಸ್ಟ್‌ ಸಬ್‌‌ ಪ್ಲಾನ್‌‌ (ಎಸ್‌‌ಸಿಎಸ್‌ಪಿ). ಟ್ರೈಬಲ್‌ ಸಬ್‌ ಪ್ಲಾನ್‌‌( ಟಿಎಸ್‌‌‌ಪಿ). ಎಸ್‌‌ಸಿಎಸ್‌‌ಟಿ ಸಮುದಾಯಕ್ಕೆ ನೇರವಾಗಿ ತಲುಪುವ ಯೋಜನೆ ರೂಪಿಸಬೇಕು. ಉದಾಹರಣೆಗೆ ಎಸ್‌‌ಸಿಎಸ್‌ಟಿ ಮಕ್ಕಳಿಗೆ ವಿದ್ಯಾರ್ಥಿವೇತನ, ಎಸ್‌ಸಿಎಸ್‌ಟಿಗಳಿಗೆ ಮನೆ ನಿರ್ಮಾಣ, ಬೋರ್‌ವೆಲ್‌‌, ಕಾಲನಿಗಳಲ್ಲಿ ಮೂಲಸೌಕರ್ಯ, ಇತ್ಯಾದಿ… ಎಲ್ಲ ಸಾರ್ವಜನಿಕರಿಗೂ ಉಪಯೋಗವಾಗುವ ಸಾರ್ವತ್ರಿಕ ಯೋಜನೆಗಳಿಗೆ ಈ ಹಣವನ್ನು ಬಳಸುವಂತಿಲ್ಲ. ಉದಾಹರಣೆಗೆ, ಊರಿನ ರಸ್ತೆ ನಿರ್ಮಿಸಿ ಇದರಲ್ಲಿ ಇಎಸ್‌ಸಿಎಸ್‌ಟಿಗಳೂ ಓಡಾಡುತ್ತಾರೆ ಎನ್ನುವುದು, ಉಚಿತ ಬಸ್‌‌ನಲ್ಲಿ ಎಸ್‌ಸಿಎಸ್‌‌ಟಿ ಮಹಿಳೆಯರೂ ಓಡಾಡುತ್ತಾರೆ ಎನ್ನುವುದು, ಇತ್ಯಾದಿ. ಕಾಯ್ದೆಯಲ್ಲಿ 7(ಡಿ) ಎಂಬ ಕಲಂ ಅನ್ವಯ, ಸಾರ್ವತ್ರಿಕ ಯೋಜನೆಗಳನ್ನೂ ಎಸ್‌ಸಿಎಸ್‌ಟಿಗಳು ಬಳಸುತ್ತಾರೆ ಎಂದು ಭಾವಿಸಿ (ಡೀಮ್ಡ್‌) ಒಂದಷ್ಟು ಎಸ್‌ಸಿಎಸ್‌ಟಿ ಮೀಸಲು ನಿಧಿಯಿಂದ ಪಡೆಯಲು ಅವಕಾಶವಿದೆ.

-ಕರ್ನಾಟಕದಲ್ಲಿ ಎಸ್‌‌ಸಿಎಸ್‌‌ಪಿ ಟಿಎಸ್‌‌ಪಿ ಅನುದಾನ ಒಟ್ಟು ಬಜೆಟ್‌‌‌ನ ಶೇ.24 ಇರುತ್ತದೆ. ಈ ವರ್ಷ ಬಜೆಟ್‌‌ನಲ್ಲಿ 31 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಎಸ್‌ಸಿಎಸ್‌ಟಿ ಹಣವನ್ನು ಗ್ಯಾರಂಟಿಗೆ ಬಳಸಬಾರದು ಎಂದು ಬಿಜೆಪಿ ಈ ಹಿಂದೆ ಆಕ್ಷೇಪಿಸಿತ್ತು.

2013ರ ಕಾಂಗ್ರೆಸ್ ಸರ್ಕಾರದಿಂದ ಜಾರಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಅಧಿನಿಯಮ ಜಾರಿ ಮಾಡಿತ್ತು. ಇದರ ಅನುಸಾರ ಜನಸಂಖ್ಯೆಗೆ ತಕ್ಕಂತೆ ಆ ಸಮುದಾಯಗಳಿಗೆ ಬಜೆಟ್‌ನಲ್ಲಿ ಹಣ ಮೀಸಲು ಮಾಡಲಾಯಿತು. ಅದು ಸುಮಾರು ಬಜೆಟ್‍‌ನ ಶೇಕಡಾ 23 ರಷ್ಟು ಆಗುತ್ತಿತ್ತು. ಮೀಸಲಾರಿಸಿದ ಹಣ ಆ ವರ್ಷದಲ್ಲಿ ಖರ್ಚು ಆಗದಿದ್ರೆ ಅದು ಮುಂದಿನ ವರ್ಷಕ್ಕೆ ಕ್ಯಾರಿ ಓವರ್ ಆಗುತ್ತಿತ್ತು. ಇದರಿಂದ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯ ನಾಲ್ಕು ವರ್ಷಗಳ ಕಾಲ ಹಣ ಖರ್ಚು ಆಗದೇ ಉಳಿಯಿತು. ಹೀಗಾಗಿ ಇದನ್ನ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ತೀರ್ಮಾನ ಮಾಡಿದ ಅಂದಿನ ಕ್ಯಾಬಿನೆಟ್ 7 ನಿಯಮಕ್ಕೆ ತಿದ್ದುಪಡಿ ತಂದು 7-ಡಿ ಸೇರಿಸಲಾಯಿತು. ಆ ಮೂಲಕ ವೆಚ್ಚವಾಗದೇ ಉಳಿದ ಹಣವನ್ನು ಸಾರ್ವಜನಿಕ ಹಿತಾಸಕ್ತಿ ಯೋಜನೆಗಳಿಗೆ ಈ ಹಣ ಬಳಸಬಹುದು ಅನ್ನೋ ತಿದ್ದುಪಡಿ ತರಲಾಯಿತು

ಬಳಿಕ ಬಂದ ಸಮ್ಮಿಶ್ರ ಸರ್ಕಾರ, ಯಡಿಯೂರಪ್ಪ, ಬೊಮ್ಮಯಿ ಸರ್ಕಾರದಲ್ಲಿ ಈ ಹಣವನ್ನ ನೀರಾವರಿ ಸೇರಿದಂತೆ ಫ್ಲವರ್ ಹಾಗೂ ಇಂದಿನ ಸರ್ಕಾರ ಗ್ಯಾರೆಂಟಿಗಳಿಗೆ ಬಳಸಲಾಯಿತು. ಹೀಗಾಗಿ ಇದು ದೊಡ್ಡ ಸುದ್ದಿಯಾದ ಬೆನ್ನಲ್ಲೇ ತಿದ್ದುಪಡಿ ತರಲು ಮುಂದಾಗಿದೆ. ಸರ್ಕಾರ ಇದು ಸಮುದಾಯಕ್ಕೆ ರೀಚ್ ಆಗಿ ಎಚ್ಚೇತ್ತುಕೊಂಡ್ರೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ನಿಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕಿ ಈಗ ತಿದ್ದುಪಡಿ ಮಾಡುತ್ತಿದೆ.

ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಸ್ ತೆಗೆದುಕೊಳ್ಳುವ ವಿಚಾರ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲಿನ ಸಿಬಿಐ ಕೇಸ್ ವಾಪಸ್ ತೆಗೆದುಕೊಳ್ಳುವ ನಿರ್ಧಾರವನ್ನು ಇಂದಿನ ಸಚಿವ ಸಂಪುಟದ ಸಭೆಯಲ್ಲಿ ಕ್ರಮ ಬದ್ಧ ಮಾಡಲು ಒಪ್ಪಿಗೆ ನೀಡಲಾಯಿತು. ಕಳೆದ ಬಾರಿ ಸಂಪುಟ ಸಭೆಯಲ್ಲಿ ಸಿಬಿಐಗೆ ವಹಿಸಿದ್ದ ಕೇಸ್ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು.

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್

ರೈತರು ನೀರಾವರಿ ಪಂಪ್ ಸೆಟ್‌ಗಳಿಗೆ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಬೇಕು ಎಂಬ ಆದೇಶ ವಿಚಾರ ಮುಂದಿನ ಸಂಪುಟ ಸಭೆಯಲ್ಲಿ ತಗೆದುಕೊಳ್ಳಲು ನಿರ್ಧಾರ ಮಾಡಲಾಯಿತು.ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಿರ್ಣಯಕ್ಕೆ ಸ್ಚಪಕ್ಷ ಸೇರಿದಂತೆ ವಿಪಕ್ಷಗಳು ಮತ್ತು ರೈತ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. ಸದ್ಯಕ್ಕೆ ಈ ನಿರ್ಣಯವನ್ನ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಓದಿ: Karnataka Drought: ಬರ ಪರಿಹಾರ ಭಿಕ್ಷೆಯಲ್ಲ, ಅದು ರಾಜ್ಯದ ತೆರಿಗೆ ಹಣ ಎಂದ ಸಿದ್ದರಾಮಯ್ಯ

Exit mobile version