ಬೆಂಗಳೂರು: ರೈತರಿಗೆ ಸಾವಯವ ಕೃಷಿ ಪದ್ಧತಿಯ ಪ್ರಾಮುಖ್ಯತೆ ಮತ್ತು ಆಧುನಿಕ ಕೃಷಿ ಪದ್ಧತಿಯನ್ನು ಪರಿಚಯಿಸುತ್ತಿರುವ ಅಪರೂಪದ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ವಿಸ್ತಾರ ನ್ಯೂಸ್ (Vistara News Launch) ವತಿಯಿಂದ “ಕಾಯಕ ಯೋಗಿ” ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಹುಲ್ಲುನಾಚೇಗೌಡರ ಪರಿಚಯ
ರೇಷ್ಮೆ ಕೃಷಿಕರಾಗಿ ಯಶಸ್ಸು ಪಡೆದ ಇವರು ಹತ್ತು ವರ್ಷಗಳ ಹಿಂದೆ ಆರಂಭಿಸಿದ ʻಮೈಕ್ರೋಬಿ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ʼ ರೈತಾಪಿ ವರ್ಗದ ಮನೆಮಾತಾಗಿರುವ ಸಾವಯವ ಬಂಗಾರ ಡಾ. ಸಾಯಿಲ್ ಅನ್ನು ಉತ್ಪಾದಿಸಿ, ಸರಬರಾಜು ಮಾಡುವ ಕೆಲಸ ಮಾಡುತ್ತಿದೆ.
ವಿಶೇಷವೆಂದರೆ ಮೈಕ್ರೋಬಿ ಆಗ್ರೋಟೆಕ್ ಒಂದು ಖಾಸಗಿ ಸಂಸ್ಥೆಯಾಗಿರದೆ ಒಂದು ಸ್ವಯಂ ಸೇವಾ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ರೈತರ ಸಮಗ್ರ ಅಭಿವೃದ್ಧಿಗೆ ಸಾವಯವ ಕೃಷಿಯ ಶಿಕ್ಷಣವನ್ನು ವಿವಿಧ ರೂಪಗಳಲ್ಲಿ ನಿತ್ಯ ನಿರಂತರವಾಗಿ ನೀಡುತ್ತ ಬಂದಿದೆ. ರೈತರು ಬೆಳೆದಿದ್ದನ್ನು ಮಾರಾಟ ಮಾಡಲು ಮೈಕ್ರೋಬಿ ಕನ್ಸೂಮರ್ ಪ್ರಾಡಕ್ಟ್ಸ್ ಆಂಡ್ ಅಲೈಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿ, ಸಾವಿರಾರು ರೈತರಿಗೆ ಉಪಕಾರ ಮಾಡಿದ್ದಾರೆ.
ತೋಟದಲ್ಲಿ ಪಾಠʼ ಎಂಬ ಗೌಡರ ವಿಶಿಷ್ಟ ಬೋಧನಾ ಕಾರ್ಯಕ್ರಮ ರೈತಾಪಿ ವರ್ಗದ ಮೆಚ್ಚುಗೆಗೆ ಪಾತ್ರವಾಗಿದೆ. ಅನ್ನದಾತರ ಮಾರ್ಗದರ್ಶಕರಾಗಿರುವ ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್ ಸಿದ್ಧತೆಗೆ ಮೆಚ್ಚುಗೆ