ಬೆಂಗಳೂರು: ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತ, ಅವುಗಳನ್ನು ಓದುಗರಿಗೆ ತಲುಪಿಸುತ್ತ, ಸದ್ದಿಲ್ಲದೆ, ಜ್ಞಾನದಾಹಿಗಳ, ವಿದ್ಯಾರ್ಥಿಗಳ ಸೇವೆ ಸಲ್ಲಿಸುತ್ತಿರುವ ಶ್ರೀ ಬಸವರಾಜ ಗುರಪ್ಪ ಕೊನೇಕ ಅವರಿಗೆ ವಿಸ್ತಾರ ನ್ಯೂಸ್ ಬಳಗವು (Vistara News Launch) “ಕಾಯಕ ಯೋಗಿ” ಪ್ರಶಸ್ತಿ ನೀಡಿ ಗೌರವಿಸಿದೆ.
ಮೂಲತಃ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದವರಾದ, ಸದ್ಯ ಕಲಬುರಗಿ ನಗರದಲ್ಲಿ ವಾಸವಾಗಿರುವ ಶ್ರೀ ಬಸವರಾಜ ಕೊನೇಕ, 1977ರಲ್ಲಿ ಆರಂಭವಾದ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮೂಲಕ ಇದುವರೆಗೆ 2,850 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
2000-2001ನೇ ಸಾಲಿನಲ್ಲಿ 1ರಿಂದ 6ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳನ್ನು ಮುದ್ರಿಸಿ ರಾಜ್ಯಾದ್ಯಂತ ಸರಬರಾಜು ಮಾಡಿ ಯಶಸ್ವಿಯಾಗಿರುವ ಬಸವರಾಜ ಕೊನೇಕ 2001-2002ರ ಸಾಲಿನಲ್ಲೂ 7ರಿಂದ 10ನೇ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು ಮುದ್ರಿಸಿದ್ದರು.
ಪುಸ್ತಕೋದ್ಯಮದ ಜತೆಗೆ ಸಾಮಾಜಿಕ ಕಾರ್ಯದಲ್ಲೂ ಬಸವರಾಜ ಕೊನೇಕ ಮುಂದಿದ್ದಾರೆ. ಸಾಹಿತ್ಯ ಪರಿಚಾರಕರೂ ಆಗಿರುವ ಇವರು ವಿವಿಧ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿದ್ದಲಿಂಗೇಶ್ವರ ಪ್ರಕಾಶನ, ಬಸವ ಪ್ರಕಾಶನ ಎಂಬ ಅಂಗ ಸಂಸ್ಥೆಗಳನ್ನೂ ಮುನ್ನಡೆಸುತ್ತಿರುವ ಇವರು ಪುಸ್ತಕ ಪ್ರೇಮಿಗಳ ಪ್ರೀತಿ ಗಳಿಸಿದ್ದಾರೆ. ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಭೇಟಿ, ಶುಭ ಹಾರೈಕೆ