Site icon Vistara News

Vistara News Launch | ಮೇರು ಸಾಹಿತಿ ಡಾ. ಎಚ್.ಎಸ್‌ ವೆಂಕಟೇಶಮೂರ್ತಿಗೆ ಕಾಯಕ ಯೋಗಿ ಪುರಸ್ಕಾರ

Vistara News Launch

ಕನ್ನಡ ಸಾರಸ್ವತ ಪರಂಪರೆಯನ್ನು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಇನ್ನಷ್ಟು ಶ್ರೀಮಂತಗೊಳಿಸಿ, ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದವರು ಕವಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ. ಕವಿತೆ, ಮಹಾಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಅನನ್ಯ ಕೊಡುಗೆ ನೀಡಿರುವ ಡಾ. ಎಚ್​​ ಎಸ್ ವಿ ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು.

ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಮುಂತಾದ ಸಿನಿಮಾಗಳಿಗೆ ಚಿತ್ರಕತೆ, ಸಂಭಾಷಣೆ ಬರೆದು ಚಿತ್ರ ಸಾಹಿತಿಯೂ ಆಗಿದ್ದಾರೆ. ಇವರ ಬುದ್ಧಚರಣ ಮಹಾಕಾವ್ಯ ಎಲ್ಲರ ಹೃದಯವನ್ನೂ ತಟ್ಟಿದೆ, ಜ್ಞಾನವನ್ನು ವಿಸ್ತರಿಸಿದೆ.

ಪಂಪ ಭಾರತ, ವಾಲ್ಮೀಕಿ ರಾಮಾಯಣ, ಕಾಳಿದಾಸನ ಋತುಸಂಹಾರ ಮುಂತಾದ ಕೃತಿಗಳನ್ನು ಸರಳಗನ್ನಡದಲ್ಲಿ ಮರು ನಿರೂಪಿಸಿದ ಶ್ರೇಯಸ್ಸು ಎಚ್‌ ಎಸ್‌ ವಿ ಅವರಿಗೆ ಸಲ್ಲುತ್ತದೆ. ಇಂಥ ಕನ್ನಡದ ಸಾರಥಿಗೆ ʻಕಾಯಕಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara News Launch | ಬ್ಯಾಂಕಿಂಗ್ ಪರೀಕ್ಷೆ ತರಬೇತುದಾರ ಆರ್.ಕೆ.ಬಾಲಚಂದ್ರಗೆ ಕಾಯಕಯೋಗಿ ಪ್ರಶಸ್ತಿ

Exit mobile version