Site icon Vistara News

Vistara News Launch | ಕಾಯಕ ಯೋಗಿ ಪ್ರಶಸ್ತಿ ಸ್ವೀಕರಿಸಿದ ಗುರಮ್ಮ ಪಂಪಯ್ಯ ಸಂಕಿನಮಠ

kayaka

ಬೆಂಗಳೂರು: ಬಾಲ್ಯವಿವಾಹ, ದೇವದಾಸಿ ಪದ್ಧತಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಜಾಗೃತಿ ಮೂಡಿಸುತ್ತಿರುವವರು ಶ್ರೀಮತಿ ಗುರಮ್ಮ ಪಂಪಯ್ಯ ಸಂಕಿನಮಠ ಅವರಿಗೆ ವಿಸ್ತಾರ ನ್ಯೂಸ್​ ಬಳಗವು (Vistara News Launch) “ಕಾಯಕ ಯೋಗಿ ಪ್ರಶಸ್ತಿ” ನೀಡಿ ಗೌರವಿಸಿದೆ.

ಪಂಪಯ್ಯ ಹಾಗೂ ಬಸಮ್ಮ ಎಂಬ ದಂಪತಿಗೆ 6ನೇ ಮಗಳಾದ ಗುರಮ್ಮ ಕೂಡಾ ಬಾಲ್ಯ ವಿವಾಹದ ಬಲಿಪಶು. ಪತಿ ತೀರಿಕೊಂಡ ನಂತರ ಬಾಲ ವಿಧವೆಯಾಗಿ ಶಾಲೆ ಸೇರಿದರು. 7ನೇ ತರಗತಿಯವರೆಗೆ ಓದಿ, ಶಾಲೆ ಬಿಟ್ಟರು. ಮುಂದೆ ಅಕ್ಕ ಮಹಾದೇವಿ ಮಂಡಳವನ್ನು ಸ್ಥಾಪಿಸಿ, ಅದರ ಕಾರ್ಯದರ್ಶಿಯಾಗಿ ನೊಂದ ಮಹಿಳೆಯರಿಗೆ ಸಹಾಯ ಮಾಡಿದ್ದಾರೆ. ದೇವದಾಸಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಾ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಅಂಗನವಾಡಿ ಶಿಕ್ಷಕಿಯಾಗಿ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಶ್ರೀಮತಿ ಗುರಮ್ಮ ಅವರ ಶ್ರಮ ಬಹಳ ದೊಡ್ಡದು, ಇದುವರೆಗೆ 200ಕ್ಕೂ ಹೆಚ್ಚು ಬಾಲ್ಯ ವಿವಾಹ ತಡೆದಿದ್ದಾರೆ. 7ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದ ಇವರು, 25 ವರ್ಷಗಳ ನಂತರ ಅಂದರೆ ತಮ್ಮ 40ನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಸೈ ಎನಿಸಿಕೊಂಡ ಛಲಗಾತಿ ಮಹಿಳೆ. ಮಕ್ಕಳಿಗೆ ಇಂಗ್ಲಿಷನ್ನೂ ಕಲಿಸುವ ಈ ಶಿಕ್ಷಕಿಗೆ ರಾಷ್ಟ್ರೀಯ ಸ್ತ್ರೀ ಶಕ್ತಿ ಪುರಸ್ಕಾರ ಸಂದಿದೆ. ಶ್ರೀಮತಿ ಗುರಮ್ಮ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ |ವಿಸ್ತಾರ ನ್ಯೂಸ್‌ ಚಾನೆಲ್‌ ಉದ್ಘಾಟನೆ ಆಮಂತ್ರಣಪತ್ರ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

Exit mobile version