Site icon Vistara News

Vistara News Launch | ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ.ವಿಜಯ ಸಂಕೇಶ್ವರರಿಗೆ ಕಾಯಕ ಯೋಗಿ ಪುರಸ್ಕಾರ

Vistara News Launch

ವಿಜಯ ಸಂಕೇಶ್ವರ ಅವರು ನಾಡಿನ ಹೆಮ್ಮೆಯ ಉದ್ಯಮಿ ಮತ್ತು ರಾಜಕಾರಣಿ. 1976ರಲ್ಲಿ ಒಂದು ಲಾರಿಯೊಂದಿಗೆ ಆರಂಭಗೊಂಡ ಇವರ ಸಾರಿಗೆ ಉದ್ಯಮ ಇವತ್ತು ದೇಶದ ನಂಬರ್ ಒನ್ ಲಾಜಿಸ್ಟಿಕ್ಸ್ ಕಂಪನಿಯಾಗಿ ಬೆಳೆದಿದೆ. ವಿಆರ್‌ಎಲ್‌ ಸಮೂಹ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಮುಖ್ಯ ಕಾರಣ ಅದರ ಚೇರ್ಮನ್​​ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿಜಯ ಸಂಕೇಶ್ವರ ಅವರ ಶ್ರದ್ಧೆ, ಪರಿಶ್ರಮ.

ತಮ್ಮ 16ನೇ ವಯಸ್ಸಿನಲ್ಲೇ ಗದಗದಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ ವಿಜಯ ಸಂಕೇಶ್ವರ ಅವರು ಇಂದು ನವೀಕರಿಸಬಹುದಾದ ಇಂಧನ, ಕೊರಿಯರ್, ವೈಮಾನಿಕ ಸೇವಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. 1999ರಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮುಂದೆ ವಿಜಯವಾಣಿ ಪ್ರಾರಂಭಿಸಿದರು. ದಿಗ್ವಿಜಯ ಚಾನೆಲ್ ಮೂಲಕವೂ ಮನೆ ಮಾತಾಗಿದ್ದಾರೆ.

ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸಾಮಾಜಿಕ ಕಳಕಳಿ ಮೆರೆದ ಇವರಿಗೆ ಪದ್ಮಶ್ರೀ ಗೌರವ ಸಂದಿದೆ. ಒಬ್ಬ ವ್ಯಕ್ತಿ ಶ್ರದ್ಧೆ ಮತ್ತು ಪರಿಶ್ರಮವನ್ನೇ ಬಂಡವಾಳ ಮಾಡಿಕೊಂಡು ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಅಪ್ಪಟ ನಿದರ್ಶನವಾಗಿರುವ ಸಂಕೇಶ್ವರ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara news launch | ಸಮಾಜ ನಿರ್ಮಾಣ ಮಾಧ್ಯಮ ಸಂಸ್ಥೆಗಳ ಹೊಣೆಗಾರಿಕೆಯಾಗಲಿ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Exit mobile version