ದಾಸರ ಪದಗಳು ಮತ್ತು ಭಕ್ತಿಗೀತೆಗಳ ಮೂಲಕ ಕೇಳುಗರನ್ನು ಭಾವಪರವಶವಾಗಿಸಬಲ್ಲ ಮಹಾ ಗಾಯಕ ಶ್ರೀ ಪಂ.ವೆಂಕಟೇಶ್ ಕುಮಾರ್. ಗ್ವಾಲಿಯರ್ ಮತ್ತು ಕಿರಾಣಾ ಘರಾನಾಗಳ ಚಂದದ ಸಮ್ಮಿಶ್ರಣದಂತಿರುವ ಶ್ರೀ ವೆಂಕಟೇಶ್ ಕುಮಾರ್ ಅವರ ಗಾಯನ ಪಾಟಿಯಾಲಾ ಛಾಪನ್ನು ಮತ್ತು ಕರ್ನಾಟಕ ಸಂಗೀತದ ಪ್ರಭಾವವನ್ನು ಒಳಗೊಂಡಿದೆ.
ಯಾವುದೇ ರಾಗವನ್ನಾದರೂ ಅದರ ಆಳಕ್ಕಿಳಿದು ಹಾಡಬಲ್ಲ ಅಪೂರ್ವ ಗಾಯಕರಾಗಿರುವ ಇವರು ಸರ್ಕಾರವು ಆಯೋಜಿಸುವ ಸಂಗೀತ ಪರೀಕ್ಷೆಗಳಿಗೆ ಸಂಗೀತ ಪಠ್ಯವನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ಸಂಗೀತ ಕಾಲೇಜಿನ ಪದವಿ ತರಗತಿಗಳಿಗೆ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆ ಎರೆದಿದ್ದಾರೆ.
ದೇಶದ ಅಗ್ರಮಾನ್ಯ ಗಾಯಕರಲ್ಲಿ ಒಬ್ಬರಾಗಿರುವ ಶ್ರೀ ಪಂ.ವೆಂಕಟೇಶ್ ಕುಮಾರ್ ಅವರ ಬದುಕು-ಸಾಧನೆ ಬಗ್ಗೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ʻನಾದದ ನವನೀತʼ ಎಂಬ ಸಾಕ್ಷ್ಯ ಚಿತ್ರ ಸಿದ್ಧಪಡಿಸಿದ್ದು, ಇದು ರಜತ ಕಮಲ ಪುರಸ್ಕಾರಕ್ಕೆ ಭಾಜನವಾಗಿದೆ. ದೇಶ –ವಿದೇಶಗಳ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಶ್ರೀಯುತರನ್ನು ʻಪದ್ಮಶ್ರೀʼ ನೀಡಿ ಗೌರವಿಸಲಾಗಿದೆ. ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Vistara News Launch | ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ ಟಿ. ಎನ್. ಸೀತಾರಾಮ್: ಕಾಯಕ ಯೋಗಿ ಪ್ರಶಸ್ತಿಗೆ ಭಾಜನ