ಬಳ್ಳಾರಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಬುಧವಾರ (ಮಾ.13) ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್‌ನಲ್ಲಿ (Vistara news polling booth) ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಠಿಣ ಸ್ಪರ್ಧೆ ಇರುವುದು ಕಂಡುಬಂದಿದೆ. ವಿಸ್ತಾರ ಪೋಲಿಂಗ್ ಬೂತ್‌ಗೆ ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ ಒಟ್ಟು 7302 ಕರೆಗಳನ್ನು ಸ್ವೀಕರಿಸಲಾಗಿದೆ. ಇವರಲ್ಲಿ ಶೇ. 53ರಷ್ಟು ಮತಗಳು ಬಿಜೆಪಿ ಪರವಾಗಿದ್ದು, ಶೇ.47 ಮತಗಳು ಕಾಂಗ್ರೆಸ್‌ಗೆ ಚಲಾವಣೆಯಾಗಿವೆ. ಹೀಗಾಗಿ ನೆಕ್ ಟು ನೆಕ್ ಫೈಟ್ ಇರುವುದು ಕಂಡುಬಂದಿದೆ.
ಬಿಜೆಪಿಗೇ ಅತಿ ಹೆಚ್ಚು ಮತ!
ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಗೆ 3861 ಮತದಾರರಿಂದ ವೋಟ್ ಬಂದಿದೆ. 3406 ಮತ ಪಡೆದು ಕಾಂಗ್ರೆಸ್ 2ನೇ ಸ್ಥಾನದಲ್ಲಿದೆಯಾದರೂ ಈ ಎರಡು ಪಕ್ಷಗಳ ನಡುವಿನ ಅಂತರ ಕೇವಲ ಶೇ.5ರಷ್ಟಾಗಿದೆ. ಹೀಗಾಗಿ ಕ್ಷೇತ್ರವು ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಹಣಾಹಣಿಗೆ ಸಾಕ್ಷಿಯಾಗಲಿದೆ. ಬಿಜೆಪಿಯ ಏಕೈಕ ಹೆಸರು ಬಿ.ಶ್ರೀರಾಮುಲು ಪರ ಹೆಚ್ಚಿನ ಮತದಾರರ ಒಲವು ತೋರಿದ್ದು, ಕಾಂಗ್ರೆಸ್ ಆಕಾಂಕ್ಷಿಗಳಾದ ವಿ.ಎಸ್. ಉಗ್ರಪ್ಪ, ಗುಜ್ಜಲಗ ನಾಗರಾಜ್, ಚೈತನ್ಯ ತುಕಾರಾಂ, ವೆಂಕಟೇಶ್ ಪ್ರಸಾದ್ ಪರವೂ ಬೆಂಬಲ ವ್ಯಕ್ತವಾಗಿದೆ.
ಪಕ್ಷಗಳು ಪಡೆದ ಶೇಕಡಾವಾರು ಮತ
- ಬಿಜೆಪಿ – 3861 (53%)
- ಕಾಂಗ್ರೆಸ್ -3406 (47%)
- ಇತರೆ – 00 (0%)
ಚಾಲ್ತಿಯಲ್ಲಿರುವ ಆಕಾಂಕ್ಷಿಗಳು ಯಾರು?
- ಬಿಜೆಪಿ ಅಭ್ಯರ್ಥಿ– ಬಿ.ಶ್ರೀರಾಮುಲು (ಈಗಾಗಲೇ ಘೋಷಣೆಯಾಗಿದೆ)
- ಕಾಂಗ್ರೆಸ್ ಅಭ್ಯರ್ಥಿಗಳು– ವಿ.ಎಸ್. ಉಗ್ರಪ್ಪ, ಗುಜ್ಜಲ ನಾಗರಾಜ್,ಚೈತನ್ಯ ತುಕಾರಾಂ,ವೆಂಕಟೇಶ್ ಪ್ರಸಾದ್ (ಇವರ ಹೆಸರುಗಳು ಚಾಲ್ತಿಯಲ್ಲಿದ್ದು, ಯಾರಿಗೆ ಟಿಕೆಟ್ ಫೈನಲ್ ಆಗಲಿದೆ ಎಂಬುದು ಸಸ್ಪೆನ್ಸ್ ಆಗಿ ಉಳಿದಿದೆ.
ಬಳ್ಳಾರಿಯಲ್ಲಿ ಇಬ್ಬರಿಗೂ ಹೋರಾಟ ಅನಿವಾರ್ಯ!
ಈಗ ವಿಸ್ತಾರ ಪೋಲಿಂಗ್‌ನಲ್ಲಿ ಕಂಡುಬಂದ ಅಂಶದ ಪ್ರಕಾರ ನೋಡುವುದಾದರೆ ಬಳ್ಳಾರಿ ಜಿಲ್ಲೆಯಲ್ಲಿ ಎರಡೂ ರಾಜಕೀಯ ಪಕ್ಷಗಳು ಗೆಲ್ಲಲು ಸಾಕಷ್ಟು ಬೆವರು ಹರಿಸಿಬೇಕಿದೆ. ಆದರೆ, ಜೆಡಿಎಸ್ ಈ ಬಾರಿ ಬಿಜೆಪಿ ಜತೆಗೆ ಇರುವುದರಿಂದ ಅಲ್ಪ ಪ್ರಮಾಣದಲ್ಲಿ ಇದು ಪ್ಲಸ್ ಆಗಬಹುದು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳನ್ನು ಜನಾರ್ದನ ರೆಡ್ಡಿ ಒಡೆದಿದ್ದಾರಾದರೂ ಲೋಕಸಭೆಗೆ ಮೋದಿ ಹೆಸರು ಇರುವುದರಿಂದ ಲೆಕ್ಕಕ್ಕೆ ಬರದು ಎಂಬುದು ಬಿಜೆಪಿಯ ಕೆಲವರ ವಾದವಾಗಿದೆ. ಅಲ್ಲದೆ, ಈ ಹಿಂದೆ ಶ್ರೀರಾಮು ಸಹೋದರೆ ಜೆ. ಶಾಂತಾ ಅವರು ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಅಲ್ಲದೆ, ರಾಮುಲುಗೆ ಬಳ್ಳಾರಿಯಲ್ಲಿ ಒಳ್ಳೆಯ ಹಿಡಿತವೂ ಇದೆ. ಈ ಕಾರಣದಿಂದಲೇ ಅವರು ಟಿಕೆಟ್‌ಗೆ ಲಾಬಿ ನಡೆಸಿದ್ದು, ಅಭ್ಯರ್ಥಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಾಂಗ್ರೆಸ್ ಸಹ ಈ ಭಾಗದಲ್ಲಿ ಪ್ರಬಲವಾಗಿಯೇ ಇದ್ದು, ಗತಕಾಲದ ಇತಿಹಾಸವನ್ನು ಮರುಕಳಿಸಬೇಕು ಎಂಬ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಆದರೆ, ಇಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಮುಖ್ಯವಾಗುತ್ತದೆ.
ಇದನ್ನೂ ಓದಿ | Vistara news polling booth: ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್ ಕಿಂಗ್! ಮೈತ್ರಿ ಆಟ ಇಲ್ಲಿ ನಡೆಯಲ್ಲ?
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಇದನ್ನೂ ಓದಿ: Vistara news polling booth: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮೇಲುಗೈ; ಪುತ್ತಿಲಗೆ ಜನಬೆಂಬಲ!
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488