ರಮೇಶ ದೊಡ್ಡಪುರ ಬೆಂಗಳೂರು
ಜನಪ್ರಿಯತೆಗೆ ಅನೇಕ ಮಾನದಂಡಗಳಿವೆ. ಅದರಲ್ಲಿ ಟ್ವಿಟರ್ ಫಾಲೊಯರ್‌ಗಳ ಸಂಖ್ಯೆಯೂ ಒಂದು ಪ್ರಮುಖ ಮಾನದಂಡ ಎಂದು ಪರಿಗಣಿಸಿದರೆ ದೇಶದ ಎಲ್ಲ ಮುಖ್ಯಮಂತ್ರಿಗಳ ಪೈಕಿ ರಾಜಧಾನಿ ದೆಹಲಿಯ ಅರವಿಂದ ಕೇಜ್ರಿವಾಲ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಇದ್ದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ 16ನೇ ಸ್ಥಾನದಲ್ಲಿದ್ದಾರೆ.
ಮೊದಲ ಸ್ಥಾನದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಇದ್ದಾರಾದರೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವೇಗವಾಗಿ ಮುನ್ನುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ 2011ರಲ್ಲಿ ಟ್ವಿಟರ್ ಪ್ರವೇಶಿಸಿದರೆ ಯೋಗಿ ಆದಿತ್ಯನಾಥ 2015ರಲ್ಲಿ ಟ್ವಿಟರ್ ಖಾತೆ ತೆರೆದು ಎರಡು ದಿನದ ಹಿಂದಷ್ಟೆ 2.5 ಕೋಟಿ ಗಡಿಯನ್ನು ದಾಟಿದ್ದಾರೆ. ಮುಂದಿನ ದಿನಗಳಲ್ಲಿ ಕೇಜ್ರಿವಾಲರನ್ನು ಯೋಗಿ ಆದಿತ್ಯನಾಥ ಹಿಂದಿಕ್ಕುವ ಸಾಧ್ಯತೆಯಿದೆ.
ಸಿಎಂ ಆದವರಲ್ಲಿ ಬಿಎಸ್‌ವೈ ಮುಂದೆ
ಕರ್ನಾಟಕದಲ್ಲಿ ಸಿಎಂ ಆದವರ ಪೈಕಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದಿದ್ದಾರೆ ಎನ್ನುವುದು ಗಮನಾರ್ಹ. ಸಿಎಂ ಸಿದ್ದರಾಮಯ್ಯ 9,25, 986 ಫಾಲೊಯರ್ಸ್ ಹೊಂದಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ 5,31,740 ಫಾಲೊಯರ್ಸ್ ಹೊಂದಿದ್ದಾರೆ.
ಡಿ.ವಿ. ಸದಾನಂದ ಗೌಡ 4,23,280
ಜಗದೀಶ ಶೆಟ್ಟರ್ 1,14,513
ಬಸವರಾಜ ಬೊಮ್ಮಾಯಿ 4,95,904
ಮಾಜಿ ಪ್ರಧಾನಿಯೂ ಆಗಿರುವ ಎಚ್.ಡಿ. ದೇವೇಗೌಡ 2,17,268
ವೀರಪ್ಪ ಮೊಯ್ಲಿ 10,044 ಫಾಲೊಯರ್ಸ್ ಹೊಂದಿದ್ದಾರೆ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇವರೆಲ್ಲರನ್ನೂ ಮೀರಿ 11,27,774 ಫಾಲೊಯರ್ಸ್ ಹೊಂದಿದ್ದಾರೆ.
ಬೆಂಬಲಿಗರಿಂದ ರಾಜಾಹುಲಿ ಎಂದು ಕರೆಸಿಕೊಳ್ಳುವ ಯಡಿಯೂರಪ್ಪ, ಕರ್ನಾಟಕದ ಮಾಜಿ ಸಿಎಂ ಗಳ ಪೈಕಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: Explainer: ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ್ದೇಕೆ?