1. 2000 Notes Withdrawan : 2,000 ರೂ. ನೋಟು ಚಲಾವಣೆಯಿಂದ ಹಿಂತೆಗೆತ: ಆರ್‌ಬಿಐ ಘೋಷಣೆ
ಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ರೂ. ನೋಟುಗಳನ್ನು ಚಲಾವಣೆಯಿಂದ ಶುಕ್ರವಾರ ಹಿಂತೆಗೆದುಕೊಂಡಿದೆ. ಬ್ಯಾಂಕ್‌ಗಳು ಎಟಿಎಂಗಳಿಗೆ 2,000 ರೂ. ನೋಟನ್ನು ಬಿಡುಗಡೆ ಮಾಡದಂತೆ ಆರ್‌ಬಿಐ ಸೂಚಿಸಿದೆ. ಹೀಗಿದ್ದರೂ, 2,000 ರೂ. ನೋಟಿಗೆ ಸೆಪ್ಟೆಂಬರ್ 30 ರ ತನಕ ಕಾನೂನು ಮಾನ್ಯತೆ ಇರಲಿದೆ ಎಂದು ತಿಳಿಸಿದೆ. ಆರ್‌ಬಿಐ ಈ ಬಗ್ಗೆ ಶುಕ್ರವಾರ ಅಧಿಸೂಚನೆಯನ್ನು ಪ್ರಕಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: 2000 Notes Withdrawn: 2 ಸಾವಿರ ರೂ. ನೋಟು ವಾಪಸ್ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
2. Karnataka CM: ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ಲಕ್ಷಾಂತರ ಮಂದಿ ನಿರೀಕ್ಷೆ, ಕಂಠೀರವ ಸ್ಟುಡಿಯೋ ಸುತ್ತ ಬಿಗಿ ಭದ್ರತೆ
ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಅವರು ನಾಳೆ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮಕ್ಕೆ ಭರ್ಜರಿ ಮ್ಯಾಪಿಂಗ್ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. DK Shivakumar : ಡಿ.ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗುವುದು ಖಚಿತ ಎಂದ ರಾಜಗುರು ದ್ವಾರಕನಾಥ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಜಾತಕದಲ್ಲಿ ಮುಖ್ಯಮಂತ್ರಿಯಾಗುವ ಯೋಗವಿದ್ದು, ಅವರಿಗೆ ಈ ಸ್ಥಾನ ತಪ್ಪಿಹೋಗುವ ಮಾತೇ ಇಲ್ಲ ಎಂದು ರಾಜಗುರು (rajaguru) ಬಿ.ಎಸ್. ದ್ವಾರಕನಾಥ್ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka CM : ನಿಯೋಜಿತ ಸಿಎಂ ಸಿದ್ದರಾಮಯ್ಯ ಬಳಸಲಿರುವ ಕಾರು ಯಾವುದು? ಇಲ್ಲಿದೆ ನೋಡಿ ವಿವರ
|ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ (Karnataka CM) ಕಾಂಗ್ರೆಸ್ನ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಬಳಿಕ ಅವರು ಸರಕಾರದ ವಾಹನದಲ್ಲಿ ಅಧಿಕೃತ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಈಗಾಗಲೇ ಕಾರನ್ನು ಖರೀದಿ ಮಾಡಲಾಗಿದೆ. ಆ ಕಾರು ಯಾವುದೇ ಮತ್ತು ಅದರ ವಿಶೇಷತೆಗಳೇನು ಎಂಬುದನ್ನು ನೋಡೋಣ. ಅಂದಹಾಗೆ ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ಸಿಎಂ ಬಳಸುತ್ತಿದ್ದ ಕಾರನ್ನು ಬಳಸುವುದಿಲ್ಲ. ಹೀಗಾಗಿ ಟೋಯೋಟಾ ಕಂಪನಿಯ ವೆಲ್ಫೈರ್ (Toyota Vellfire) ಕಾರನ್ನು ಖರೀದಿಸಲಾಗಿದೆ. ಈ ಕಾರಿಗೆ 1 ಕೋಟಿ ರೂಪಾಯಿ ಬೆಲೆಯಿದ್ದು, ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಪ್ರಯಾಣ ಬಯಸುವವರ ನೆಚ್ಚಿನ ವಾಹನ ಎನಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Karnataka BJP: ಪ್ರತಿಪಕ್ಷ ನಾಯಕ ಬೊಮ್ಮಾಯಿಯಾದರೆ ರಾಜ್ಯ ಬಿಜೆಪಿಗೆ ಅಧ್ಯಕ್ಷ ಯಾರು?: ಇಲ್ಲಿದೆ ಸಂಭಾವ್ಯರ ಪಟ್ಟಿ
ಒಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ, ಡಿಸಿಎಂ ಗೊಂದಲ ಮುಗಿದು ಇದೀಗ ಪ್ರಮಾಣವಚನ ಹಂತಕ್ಕೆ ಬಂದಿದ್ದರೆ ಇತ್ತ ಬಿಜೆಪಿಯಲ್ಲಿ ಬದಲಾವಣೆಯ ಮಾತುಗಳು ಜೋರಾಗಿವೆ. ಮುಖ್ಯವಾಗಿ ವಿಧಾನಸಭೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆಯೂ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. 100 ಗಂಟೆಯಲ್ಲಿ ಗಾಜಿಯಾಬಾದ್-ಅಲಿಗಢ್ ಎಕ್ಸ್‌ಪ್ರೆಸ್‌ವೇನ 100 ಕಿ.ಮೀ. ರಸ್ತೆ ನಿರ್ಮಾಣ!
ಗಾಜಿಯಾಬಾದ್-ಅಲಿಗಢ ಎಕ್ಸ್‌ಪ್ರೆಸ್‌ವೇ (Ghaziabad-Aligarh Expressway) 100 ಕಿ.ಮೀ ರಸ್ತೆಯನ್ನು 100 ಗಂಟೆ(ಹೆಚ್ಚು ಕಡಿಮೆ 4.16 ದಿನ)ಯಲ್ಲಿ ಬಿಟುಮಿನಸ್ ಕಾಂಕ್ರಿಟ್ ಮೂಲಕ ನಿರ್ಮಾಣ ಮಾಡುವ ಮೂಲಕ ಭಾರತವು ಇತಿಹಾಸವನ್ನು ಸೃಷ್ಟಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Airtel and Jio Offer: ಏರ್‌ಟೆಲ್, ಜಿಯೋದಿಂದ ಸಖತ್ ಆಫರ್ಸ್, ಯಾವ ಪ್ಲ್ಯಾನ್‌ನಲ್ಲಿ ಏನೆಲ್ಲ ಲಾಭಗಳಿವೆ?
ಖಾಸಗಿ ವಲಯದ ಟೆಲಿಕಾಂ ಸೇವೆ ಪೂರೈಕೆದಾರ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋ (Airtel and Jio Offer) ಗ್ರಾಹಕರನ್ನು ಸೆಳೆಯುವುದಕ್ಕಾಗಿ ನಾನಾ ತಂತ್ರಗಳನ್ನು ಮಾಡುತ್ತವೆ. ಚಂದಾದಾರರನ್ನು ಸೆಳೆಯುವುದಕ್ಕಾಗಿ ಪ್ರೀಪೇಯ್ಡ್ ಪ್ಲಾನ್‌ಗಳಲ್ಲಿ ಸಾಕಷ್ಟು ಆಫರ್ಸ್ ನೀಡುತ್ತಿವೆ. ವಿಶೇಷವಾಗಿ ಡೇಟಾ ಬಳಕೆಗೆ ಸಂಬಂಧಿಸಿದಂತೆ ಆಫರ್ ಮಾಡಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Adani-Hindenburg : ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್ ನೀಡಿದ ಸುಪ್ರೀಂಕೋರ್ಟ್ ತಜ್ಞರ ಸಮಿತಿ
ಅದಾನಿ-ಹಿಂಡೆನ್‌ಬರ್ಗ್ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ನಿಯೋಜಿತ ತಜ್ಞರ ಸಮಿತಿಯು ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್ ನೀಡಿದೆ. ಅದಾನಿ ಕಂಪನಿಗಳ ವಿರುದ್ಧ ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಮಾರುಕಟ್ಟೆ ನಿಯಂತ್ರಕ ಸೆಬಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಈಗಲೇ ಹೇಳಲಾಗದು ಎಂದು ತಜ್ಞರ ಸಮಿತಿ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ವಿಸ್ತಾರ ಸಾಹಿತ್ಯ ಸಂಭ್ರಮ: ಮೇ 27, 28ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೀವು ಬರಲೇಬೇಕಾದ ಕಾರ್ಯಕ್ರಮ
ಕಳೆದ ವರ್ಷದ ನವೆಂಬರ್‌ನಲ್ಲಿ ʼವಿಸ್ತಾರ ಕನ್ನಡ ಸಂಭ್ರಮʼ ಕಾರ್ಯಕ್ರಮದ ಮೂಲಕ ಜನಮನ ಗೆದ್ದಿದ್ದ ವಿಸ್ತಾರ ನ್ಯೂಸ್ ಈಗ ಎರಡು ದಿನಗಳ ವಿಸ್ತಾರ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾಹಿತ್ಯ, ಹಾಡು, ಸಂಗೀತ, ನಾಟಕ, ಯಕ್ಷಗಾನ, ಉಪಯುಕ್ತ ಗೋಷ್ಠಿ, ಹಾಸ್ಯ, ಪುಸ್ತಕ ಮೇಳ, ಆಹಾರ ಮೇಳ, ಫ್ಯಾಷನ್ ಶೋ, ಮಕ್ಕಳಿಗೆ ಸ್ಪರ್ಧೆ ಇತ್ಯಾದಿ ಮನೋಲ್ಲಾಸದ ಅಪರೂಪದ ಕಾರ್ಯಕ್ರಮ ಇದಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 27 ಮತ್ತು 28ರಂದು ಬೆಳಗ್ಗೆ 9ರಿಂದ ರಾತ್ರಿ 12ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. IPL 2023: ವಿರಾಟ್ ಕೊಹ್ಲಿಯ ಐಪಿಎಲ್ ಶತಕದಲ್ಲೊಂದು ಸ್ವಾರಸ್ಯ; ಏನದು?
ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಗುರುವಾರ ನಡೆದ ಐಪಿಎಲ್(IPL 2023) ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 6ನೇ ಶತಕವನ್ನು ಪೂರೈಸಿದರು. ಈ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಆದರೆ ಕೊಹ್ಲಿಯ ಈ ಶತಕದಲ್ಲೊಂದು ಸ್ವಾರಸ್ಯಕರ ಸಂಗತಿ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.