Site icon Vistara News

ವಿಸ್ತಾರ TOP 10 NEWS: ಸಿಎಂಗೆ ಕಿಚ್ಚ ಸುದೀಪ್‌ ಬೆಂಬಲದಿಂದ, ಬೆಚ್ಚಿ ಬೀಳಿಸುವ ಶಾರಿಕ್‌ ಸಂಚಿನವರೆಗಿನ ಪ್ರಮುಖ ಸುದ್ದಿಗಳಿವು

vistara top 10 news actor sudeep supports cm basavaraj bommai to mangaluru cooker blast case and more news

#image_title

1. Kiccha Sudeepa: ಸಿಎಂ ಬೊಮ್ಮಾಯಿ ಮಾಮನನ್ನು ಬೆಂಬಲಿಸುವೆ; ಬಿಜೆಪಿ ಸೇರುವುದಿಲ್ಲ ಎಂದ ಕಿಚ್ಚ ಸುದೀಪ್‌
ಕರ್ನಾಟಕದ ಪ್ರಸಿದ್ಧ ನಟ ಕಿಚ್ಚ ಸುದೀಪ್‌ ಬಹುನಿರೀಕ್ಷಿತ ಸುದ್ದಿಗೋಷ್ಠಿ ನಡೆಸಿದ್ದು, ರಾಜಕಾರಣವನ್ನು ಪ್ರವೇಶಿಸುತ್ತಿಲ್ಲ ಎಂದು ಪದೇಪದೆ ಸ್ಪಷ್ಟಪಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕುಳಿತು ಮಾತನಾಡಿದ ಸುದೀಪ್‌, ಬಸವರಾಜ ಬೊಮ್ಮಾಯಿ ಮಾಮನ ಪ್ರೀತಿಗಾಗಿ ಆಗಮಿಸಿದ್ದೇನೆ ಎಂದರು.
ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಸುದೀಪ್‌, ಮಾನ್ಯ ಮುಖ್ಯಮಂತ್ರಿಗಳನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ಮಾತ್ರ ನನ್ನೊಟ್ಟಿಗೆ ನಿಂತಿದ್ದರು, ಅವರಲ್ಲಿ ಬಸವರಾಜ ಬೊಮ್ಮಾಯಿ ಮಾಮ ಅವರೂ ಒಬ್ಬರು. ನಾವು ಬೆಳೆದು ಬಂದ ಹಾದಿಯಲ್ಲಿ ಪ್ರತಿ ವಿಷಯದಲ್ಲೂ ಗಾಡ್‌ ಫಾದರ್‌ ಯಾರೂ ಇರಲಿಲ್ಲ. ಮಾಮ ಆಗ ತಾನೆ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದರು. ಅವರು ಇಂದು ಸಿಎಂ ಆಗಿದ್ದಾರೆ. ಆ ವ್ಯಕ್ತಿಗೆ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Border Dispute: ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ವಿಮೆ ಜಾರಿ ಮಾಡಬೇಕಾಗುತ್ತದೆ ಹುಷಾರ್‌ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಕರ್ನಾಟಕದ ಗಡಿ ಭಾಗದ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರದ ವಿಮಾ ಯೋಜನೆಯನ್ನು ಜಾರಿ ಮಾಡಲು ಮುಂದಾಗಿರುವ ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ನೇತೃತ್ವದ ಸರ್ಕಾರದ ಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election 2023: ಮತ್ತೆ ಬಿಜೆಪಿ ಸೇರಿದ ಎಲ್.ಆರ್.‌ ಶಿವರಾಮೇಗೌಡ; ಮಂಡ್ಯದಲ್ಲಿ ಕಮಲ ಅರಳಿಸುವ ಶಪಥ
ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಈಗ ಮಾಜಿ ಸಂಸದ ಎಲ್.ಆರ್.‌ ಶಿವರಾಮೇಗೌಡ ಹಾಗೂ ಅವರ ಪುತ್ರ ಚೇತನ್‌ ಬುಧವಾರ (ಏ. 5) ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದು, ಮಂಡ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಶಪಥ ಮಾಡಿದ್ದಾರೆ. ಈ ಮೂಲಕ ಮರಳಿ ಬಿಜೆಪಿಗೆ ಬಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election: ಹಾಸನ ಟಿಕೆಟ್ಟೇ ಬಗೆಹರಿದಿಲ್ಲ, ರಾಜ್ಯದ ಸಮಸ್ಯೆ ಏನು ಪರಿಹರಿಸುತ್ತೀರಿ: ರೇವಣ್ಣ ವಿರುದ್ಧ ಎ.ಟಿ. ರಾಮಸ್ವಾಮಿ ಕಿಡಿ
ಹಾಸನ ಕ್ಷೇತ್ರದ (Karnataka Election 2023) ಟಿಕೆಟ್ ಸಮಸ್ಯೆಯನ್ನೇ ಬಗೆಹರಿಸಲು ಆಗಿಲ್ಲ, ಇನ್ನು ರಾಜ್ಯದ ಸಮಸ್ಯೆ ಏನು ಬಗೆಹರಿಸುತ್ತೀರಿ. ಜಿಲ್ಲೆಯಲ್ಲಿ ಗೊಂದಲ ಮಾಡುತ್ತಿರುವವರು ಯಾರು? ಬಿಜೆಪಿ ಮಾಡುತ್ತಿದೆಯಾ, ಬೇರೆ ಪಕ್ಷ ಮಾಡುತ್ತಿದೆಯಾ? ನಿಮ್ಮ ಸ್ವಾರ್ಥಕ್ಕಾಗಿ, ಕುಟುಂಬಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧ ಅರಕಲಗೂಡು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕಿಡಿಕಾರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Inside Story: ಸಿಎಂ ಬೊಮ್ಮಾಯಿ ಚೆಕ್‌ಮೇಟ್‌ಗೆ ವಿನಯ್‌ ಕುಲಕರ್ಣಿ ಗಲಿಬಿಲಿ: ಬಿಸಿ ತುಪ್ಪವಾಯಿತು ಶಿಗ್ಗಾಂವಿ ಟಿಕೆಟ್‌
ತವರು ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಕಟ್ಟಿ ಹಾಕುವುದು ಹಾಗೂ ಧಾರವಾಡ ಪ್ರವೇಶವನ್ನು ನಿರ್ಬಂಧಿಸುವುದರಿಂದ ವಿನಯ್‌ ಕುಲಕರ್ಣಿ ಅವರಿಗೆ ನೆಲೆ ಕಲ್ಪಿಸಬೇಕೆಂಬ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಇಡುತ್ತಿರುವ ಹೆಜ್ಜೆಗೆ ಕಾಂಗ್ರೆಸ್‌ ಚಿಂತೆಗೀಡಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Cow slaughter : ಜಾನುವಾರು ಸಾಗಾಟಗಾರನ ಸಾವು; ಪುನೀತ್‌ ಕೆರೆಹಳ್ಳಿ ಸೇರಿ ಐವರು ರಾಜಸ್ಥಾನದಲ್ಲಿ ಸೆರೆ
ಮಾರ್ಚ್‌ 31ರಂದು‌ ರಾತ್ರಿ 11.30ರ ಹೊತ್ತಿಗೆ ಸಾತನೂರು ಪೊಲೀಸ್ ಠಾಣೆ ಎದುರು ನಡೆದ ಜಾನುವಾರು (Cow slaughter) ಸಾಗಾಟಗಾರ ಇದ್ರಿಸ್‌ ಪಾಷಾನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮಂಗಳೂರು ಸ್ಫೋಟ: ಕುಕ್ಕರ್‌ ಬ್ಲಾಸ್ಟ್‌ ರೂವಾರಿ ಶಾರಿಕ್‌ ಬಳಿ ಸಿಕ್ಕಿದ ಪೆನ್‌ಡ್ರೈವ್‌ನಲ್ಲಿತ್ತು ಪ್ರಚೋದನಾಕಾರಿ ಭಾಷಣ, ಮೌಲ್ವಿಗಾಗಿ ಶೋಧ
ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ (Cooker bomb blast) ರೂವಾರಿ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮೊಹಮ್ಮದ್‌ ಶಾರಿಕ್‌ನ ಬಳಿ ಪತ್ತೆಯಾದ ಪೆನ್‌ ಡ್ರೈವ್‌ನಲ್ಲಿರುವ ಮಾಹಿತಿಗಳು ಸ್ವತಃ ಎನ್‌ಐಎ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Supreme Court: ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ; ಪ್ರತಿಪಕ್ಷಗಳ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ 14 ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 14 ರಾಜಕೀಯ ಪಕ್ಷಗಳ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಹಾಕಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Kerala Train Fire : ಬೋಗಿಗೆ ಬೆಂಕಿ ಹಚ್ಚಿ 3 ಜನರ ಕೊಂದ ಆರೋಪಿ ಸೆರೆ, ಪೊಲೀಸರ ಕಾರ್ಯಾಚರಣೆ ಹೇಗಿತ್ತು?
3 ಜನರ ಸಾವಿಗೆ ಕಾರಣವಾದ ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಕೇರಳ ರೈಲು ಬೆಂಕಿ ಪ್ರಕರಣದಲ್ಲಿ ಮೂವರ ಸಾವು ಮಾತ್ರವಲ್ಲದೇ 9 ಜನರು ಗಾಯಗೊಂಡಿದ್ದರು. ಏಪ್ರಿಲ್ 4 ರಾತ್ರಿ ಮಹಾರಾಷ್ಟ್ರದ ರತ್ನಾಗಿರಿ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಶಾರುಖ್ ಸೈಫಿಯನ್ನು ಪೊಲೀಸರು ಬಂಧಿಸಿದ್ದಾರೆ(Kerala train Fire). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023: ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದ ಸ್ಟಾರ್​ ವೇಗಿ ಟಾಪ್ಲಿ ಅಲಭ್ಯ
ಮುಂಬೈ ಇಂಡಿಯನ್ಸ್​ ವಿರುದ್ಧ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಬೀಗಿದ್ದ ಕನ್ನಡಿಗರ ನೆಚ್ಚಿನ ತಂಡವಾದ ಆರ್​ಸಿಬಿ(Royal Challengers Bangalore) ಗುರುವಾರ ಕೋಲ್ಕತಾ ನೈಟ್‌ ರೈಡರ್(kkr) ವಿರುದ್ಧ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯದಲ್ಲಿ ರೀಸ್‌ ಟಾಪ್ಲಿ(Reece Topley) ಅವರು ಆಡುವುದು ಅನುಮಾನ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Gold rate : ಬಂಗಾರದ ದರದಲ್ಲಿ ದಿಢೀರ್‌ 1,030 ರೂ. ಜಿಗಿತ, ಬೆಳ್ಳಿ 2,900 ರೂ. ದುಬಾರಿ
  2. Himalayan Glaciers: ಬರಿದಾಗುತ್ತಿದೆ ಹಿಮಾಲಯ, 20 ವರ್ಷದಲ್ಲಿ 57 ಕೋಟಿ ಆನೆ ತೂಕದ ಹಿಮ ಮಾಯ!
  3. Weather Alert: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ
  4. ಛತ್ತೀಸ್​ಗಢ ಹೋಮ್​ ಥಿಯೇಟರ್​​ ಸ್ಫೋಟ; ಇದು ವಧುವಿನ ಮಾಜಿ ಪ್ರಿಯಕರನ ದ್ವೇಷ, ಬಲಿಯಾಗಿದ್ದು ವರನ ಜೀವ!
  5. Girl power : ತನ್ನನ್ನು ಚುಡಾಯಿಸಿದ ಬೀದಿ ಕಾಮಣ್ಣನನ್ನು ರೋಡಲ್ಲೇ ಅಟ್ಟಾಡಿಸಿ ಹೊಡೆದ ಕಾಲೇಜು ವಿದ್ಯಾರ್ಥಿನಿ
Exit mobile version