Site icon Vistara News

ವಿಸ್ತಾರ TOP 10 NEWS: ರಾಜ್ಯದಲ್ಲಿ ʼಬ್ರಾಹ್ಮಣʼ ಗದ್ದಲದಿಂದ, ಸಂಸತ್ತಿನಲ್ಲಿ ʼಅದಾನಿʼ ಹಂಗಾಮವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news Adani discussion in parliament to case against mohan bhagawat and more news

#image_title

1. Parliament Budget Session: ಲೋಕಸಭೆಯಲ್ಲಿ ಅದಾನಿ ಜತೆಗಿನ ಮೋದಿ ಫೋಟೋ ಪ್ರದರ್ಶಿಸಿದ ರಾಹುಲ್ ಗಾಂಧಿ
 ಬಜೆಟ್ ಅಧಿವೇಶನ ಆರಂಭವಾದ ಬಳಿಕ, ಫೆ.1ರಂದು ಬಜೆಟ್ ಮಂಡಿಸಲಾಯಿತು. ಆ ನಂತರ 6 ದಿನಗಳಿಂದ, ಅಧಿವೇಶನ ಕಲಾಪವನ್ನು ಅದಾನಿ ಷೇರು ವ್ಯವಹಾರ ಗಲಾಟೆಯೇ ನುಂಗಿತ್ತು. ಫೆ.7 ಮಂಗಳವಾರ ಬೆಳಗ್ಗೆ ಕೂಡ ಇದೇ ಕಾರಣಕ್ಕೆ ಕಲಾಪ ನಡೆಸಲು ಉಭಯ ಸದನಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ, ಮಂಗಳವಾರ ಮಧ್ಯಾಹ್ನ, ಲೋಕಸಭೆಯಲ್ಲಿ ಕಲಾಪ ನಡೆಯಿತು(Parliament Budget Session). ಈ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಪಿಎಂ ಮೋದಿ ಮತ್ತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Parliament Budget Session: ಮೋದಿ-ಅದಾನಿ ನಡುವಿನ ಸಂಬಂಧ ಎಂಥದ್ದು? ಪಿಎಂಗೆ 6 ಪ್ರಶ್ನೆ ಎಸೆದ ರಾಹುಲ್ ಗಾಂಧಿ

2. Brahmin CM: ಪ್ರಲ್ಹಾದ ಜೋಶಿ ಕುರಿತ ಹೇಳಿಕೆಗೆ ಬದ್ಧ; ಸಮಾಜ ಒಡೆಯುತ್ತಿರುವುದು ಬಿಜೆಪಿ: ಎಚ್‌.ಡಿ. ಕುಮಾರಸ್ವಾಮಿ ಸಮರ್ಥನೆ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕುರಿತು ತಾವು ಆಡಿರುವ ಮಾತಿಗೆ ಬದ್ಧನಾಗಿದ್ದೇನೆ ಎಂದಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಸಮಾಜವನ್ನು ಒಡೆಯುತ್ತಿರುವುದು ಬಿಜೆಪಿ ಎಂದಿದ್ದಾರೆ. ರಾಜ್ಯ ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Brahmin CM: ಪ್ರಲ್ಹಾದ ಜೋಶಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ: ಜಾತಿ ಆಧಾರದಲ್ಲಿ ಟೀಕೆ ಸರಿಯಲ್ಲ ಎಂದ ಬ್ರಾಹ್ಮಣ ಮಹಾಸಭಾ

3. Hindu Vs Hindutva : ನಾನು ಹಿಂದು ಧರ್ಮದ ಬಗ್ಗೆ ಮಾತನಾಡಿಯೇ ಇಲ್ಲ, ಅದಕ್ಕೆ ನನ್ನ ವಿರೋಧವೇ ಇಲ್ಲ: ಸಿದ್ದರಾಮಯ್ಯ ಯು ಟರ್ನ್
ʻʻನಾನು ಹಿಂದು ಧರ್ಮದವನು, ಹಿಂದು ಧರ್ಮದ ಬಗ್ಗೆ (Hindu Vs Hindutva) ನಾನು ಮಾತಾಡಿಯೇ ಇಲ್ಲ, ವಿರೋಧಾನೇ ಮಾಡಿಲ್ಲʼʼ- ಹೀಗೆಂದು ಹೇಳಿದ್ದಾರೆ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ. ʻʻಯಾವ ಧರ್ಮದಲ್ಲೂ ಕೊಲೆ ಮಾಡಿ, ಹಿಂಸೆ ಮಾಡಿ ಅಂತ ಹೇಳಿಲ್ಲ. ನಾವೆಲ್ಲಾ ಹಿಂದುಗಳೇ, ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡುವವರು ಅಲ್ವಾ? ನಮಗೆ ಎಲ್ಲೂ ಕೂಡಾ ಕ್ರೌರ್ಯಕ್ಕೆ ಹಿಂಸೆಗೆ ಅವಕಾಶ ಇಲ್ಲ ಎಂದು ನಾನು ಹೇಳಿದೆ ಅಷ್ಟೆʼʼ ಎಂದು ಸಿದ್ದರಾಮಯ್ಯ ಕಲಬುರಗಿಯಲ್ಲಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Goa Kannadigas : ಗೋವಾದಲ್ಲಿ ಮತ್ತೆ ಕನ್ನಡಿಗರಿಗೆ ಹಿಂಸೆ, 50ಕ್ಕೂ ಅಧಿಕ ಮನೆಗಳ ಧ್ವಂಸ, ಹಕ್ಕುಪತ್ರ ಕಿತ್ತುಕೊಂಡರು
ಗೋವಾದಲ್ಲಿ ಕನ್ನಡಿಗರ (Goa Kannadigas) ಮೇಲೆ ಮತ್ತೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ೧೫ ದಿನಗಳ ಹಿಂದೆ ೫೦ಕ್ಕೂ ಅಧಿಕ ಕನ್ನಡಿಗರ ಮನೆಯನ್ನು ಧ್ವಂಸ ಮಾಡಿರುವ ಗೋವಾ ಸರ್ಕಾರ ಅವರ ಹಕ್ಕುಪತ್ರಗಳನ್ನು ಕಿತ್ತುಗೊಂಡಿದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Turkey Earthquake: ಮೃತರ ಸಂಖ್ಯೆ 5 ಸಾವಿರಕ್ಕೆ ಏರಿಕೆ, ಟರ್ಕಿ ನೆರವಿಗೆ ಧಾವಿಸಿದ ಭಾರತ
ಸೋಮವಾರ ಸಂಭವಿಸಿದ ಸರಣಿ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳೆರಡೂ ತತ್ತರಿಸಿವೆ(Turkey Earthquake). ಈ ನೈಸರ್ಗಿಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 5000 ದಾಟಿದೆ. ಏತನ್ಮಧ್ಯೆ, ಪರಿಹಾರ ಕಾರ್ಯಾಚರಣೆ ಭರದಿಂದ ನಡೆದೆಯಾದರೂ, ಹಿಮದಿಂದಾಗಿ ತೊಡಕಾಗುತ್ತಿದೆ. ಭಾರತವು ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಟರ್ಕಿಗೆ ನೆರವಿಗೆ ಧಾವಿಸಿದೆ. ಭಾರತದಿಂದ ಸೇನಾ ವೈದ್ಯಕೀಯ ತಂಡವನ್ನು ಹೊತ್ತ ವಿಮಾನ ಟರ್ಕಿಗೆ ಹೋಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ವಿಸ್ತಾರ Explainer: Turkey Earthquake: ಯಾಕಿಷ್ಟು ಭಯಾನಕ? ನಮ್ಮಲ್ಲೂ ಇಂಥ ಭೂಕಂಪ ಆಗಬಹುದೇ?

6. Google Bard: ಜಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ಬಾರ್ಡ್, ಮೈಕ್ರೋಸಾಫ್ಟ್‌ಗೆ ಠಕ್ಕರ್
ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಚಾಟ್‌ಜಿಪಿಟಿ(ChatGPT) ಟೆಕ್ ವರ್ಲ್ಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೈಕ್ರೋಸಾಫ್ಟ್‌ನ (Microsoft) ಈ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ಗೆ ಠಕ್ಕರ್ ಕೊಡಲು ಗೂಗಲ್ ಕೂಡ ಸಿದ್ಧವಾಗುತ್ತಿದೆ. ಚಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್ ಬಾರ್ಡ್(Google Bard AI) ಅನಾವರಣ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Mohan Bhagwat: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ವಿರುದ್ಧ ಕ್ರಿಮಿನಲ್​ ದೂರು ದಾಖಲು; ಬ್ರಾಹ್ಮಣರಿಗೆ ಅಪಮಾನ ಮಾಡಿದ ಆರೋಪ
ದೇಶದಲ್ಲಿ ಜಾತಿಪದ್ಧತಿಯನ್ನು ಹುಟ್ಟು ಹಾಕಿದ್ದು ದೇವರಲ್ಲ, ಪುರೋಹಿತರು/ಪಂಡಿತರು ಎಂದು ಹೇಳಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ (Mohan Bhagwat)​ ವಿರುದ್ಧ ಬಿಹಾರದ ಮುಜಾಫರ್​​ಪುರ ಜಿಲ್ಲೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​​ನಲ್ಲಿ ಕ್ರಿಮಿನಲ್​ ದೂರು ದಾಖಲಾಗಿದೆ. ಅಡ್ವೋಕೇಟ್​ ಸುಧೀರ್​ ಓಝಾ ಎಂಬುವರು ಮೋಹನ್ ಭಾಗವತ್​ ವಿರುದ್ಧ ದೂರು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Child Marriages: ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿರುವ ಅಸ್ಸಾಂ ಸರ್ಕಾರ; ಇದುವರೆಗೆ 60 ಖಾಜಿಗಳು ಸೇರಿ 2278 ಮಂದಿ ಬಂಧನ
ಅಸ್ಸಾಂನಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಬಾಲ್ಯ ವಿವಾಹ (Child Marriages) ತಡೆಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 18 ವರ್ಷಕ್ಕಿಂತ ಸಣ್ಣ ಹೆಣ್ಣುಮಕ್ಕಳನ್ನು ವಿವಾಹವಾಗುವವರ ವಿರುದ್ಧ ಸೂಕ್ತ ಕಾಯ್ದೆಯಡಿ ಕ್ರಮ ವಹಿಸಲಾಗುವುದು ಮತ್ತು 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಅದರಂತೆ ಪೊಲೀಸರು ಬಾಲ್ಯ ವಿವಾಹ ತಡೆಯುವ ಯತ್ನದಲ್ಲಿ ಹಲವು ರೇಡ್​ಗಳನ್ನು ಮಾಡುತ್ತಿದ್ದಾರೆ. ಸದ್ಯ ಅಸ್ಸಾಂ ಬಾಲ್ಯ ವಿವಾಹ ಕೇಸ್​​ನಡಿ ಒಟ್ಟು 4000 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, 60 ಖಾಜಿಗಳು ಸೇರಿ, 2278 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. CPA Report: ಧಾರ್ಮಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳು, ಭಾರತ ನಂ.1
ಧಾರ್ಮಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಿಗೆ ಸಂಬಂಧಿಸಿದಂತೆ 110 ರಾಷ್ಟ್ರಗಳ ಪೈಕಿ ಭಾರತವು ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್(CPA Report) ಜಾಗತಿಕ ಅಲ್ಪಸಂಖ್ಯಾತರ ಮೇಲಿನ ಮೊದಲ ಮೌಲ್ಯಮಾಪನ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಭಾರತವು ತನ್ನ ಕ್ರಮಗಳಿಂದಾಗಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಆಸ್ಟ್ರೇಲಿಯಾ ಟುಡೇ(Australia Today) ವರದಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral Video : ತನ್ನನ್ನು ತಾನೇ ಕತ್ತರಿಸಿಕೊಂಡು ತಿಂದ ಮಹಿಳೆ? ವೈರಲ್‌ ಆಯ್ತು ವಿಡಿಯೊ
ಕೇಕ್‌ ಎಂದಾಕ್ಷಣ ವೃತ್ತಾಕಾರ ಅಥವ ಚೌಕ/ಆಯತಾಕಾರದ ಕೇಕ್‌ ನೆನಪಾಗಬಹುದು. ಆದರೆ ಈಗ ಕಾಲ ಬದಲಾಗಿದೆ. ಭೂಮಿ ಮೇಲಿರುವ ಎಲ್ಲ ವಸ್ತುವಿನ ರೂಪದಲ್ಲೂ ಕೇಕ್‌ಗಳು ತಯಾರಾಗುತ್ತಿವೆ. ವಿಶೇಷವೆಂದರೆ ಮನುಷ್ಯರಂತೆಯೇ ಕಾಣುವ ಕೇಕ್‌ಗಳೂ ಕೂಡ ನಿರ್ಮಾಣವಾಗುತ್ತಿದ್ದು, ಅಂತಹದ್ದೊಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಹೆಚ್ಚಿನ ಸುದ್ದಿಗಳು

  1. ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್; ಮೈಲಾರಲಿಂಗೇಶ್ವರ ಕಾರ್ಣಿಕದಂತೆ ರಾಜ್ಯಕ್ಕೆ ಕುರುಬ ಮುಖ್ಯಮಂತ್ರಿ ಫಿಕ್ಸಾ?
  2. Rakhi Sawant: ರಾಖಿ ಸಾವಂತ್​ ಪತಿ ಆದಿಲ್​ ಖಾನ್​ ದುರಾನಿ ಬಂಧನ; ಆತ ಮೋಸಗಾರ ಎಂದ ನಟಿ!
  3. JEE Main 2023 : ಸೆಷನ್‌ 1ರ ಫಲಿತಾಂಶ ಪ್ರಕಟ; ಟಾಪ್‌ -20 ಪಟ್ಟಿಯಲ್ಲಿಲ್ಲ ಹುಡುಗಿಯರು!
  4. Valentine’s Week 2023: ಇಂದಿನಿಂದ ಪ್ರತಿದಿನವೂ ಹಬ್ಬ: ಪ್ರೇಮಿಗಳ ಈ ವಾರವಿಡೀ ಪ್ರೀತಿ ಮಾಡಿ!
  5. Electricity Price Hike: ರಾಜ್ಯದ ಜನತೆಗೆ ಮತ್ತೊಮ್ಮೆ ಕರೆಂಟ್ ಶಾಕ್; ದರ ಪರಿಷ್ಕರಣೆಗೆ ಕೆಇಆರ್‌ಸಿ ಪ್ರಸ್ತಾವನೆ
Exit mobile version