1. Aero India 2023: ಕರ್ನಾಟಕದ ಯುವಕರೇ ನಿಮ್ಮ ತಾಂತ್ರಿಕ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿ: ಪ್ರಧಾನಿ ನರೇಂದ್ರ ಮೋದಿ ಕರೆ
ಬೆಳೆಯುತ್ತಿರುವ ರಕ್ಷಣಾ ಕ್ಷೇತ್ರವು ಅಸಂಖ್ಯಾತ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದ್ದು, ಕರ್ನಾಟಕದ ಯುವಕರು ತಮ್ಮ ತಾಂತ್ರಿಕ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತ್ಯಂತ ದೊಡ್ಡ ಏರ್ ಶೋ, 14ನೇ ಆವೃತ್ತಿಯ ಏರೋ ಇಂಡಿಯಾಗೆ(Aero India 2023) ಚಾಲನೆ ನೀಡಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Aero India 2023 : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಸರತ್ತು; ಸುಖೋಯ್, ಪ್ರಚಂಡ, ತೇಜಸ್ ಸೃಷ್ಟಿಸಿದ ಚೆಲುವಿನ ಚಿತ್ತಾರ
ಯಲಹಂಕದ ಏರ್‌ಫೋರ್ಸ್ ಸ್ಟೇಶನ್‌ನಲ್ಲಿ ಭಾನುವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡ ಏರೋ ಇಂಡಿಯಾ- 2023 ವೈಮಾನಿಕ ಪ್ರದರ್ಶನದಲ್ಲಿ ಸುಖೋಯ್ ೩೫, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ, ಸೂರ್ಯಕಿರಣ್, ತೇಜಸ್, ಲಘು ಬಹೂಪಯೋಗಿ ಎಲ್‌ಯುಎಚ್‌ಗಳು ಆಗಸದಲ್ಲಿ ಆಕರ್ಷಕ ಕಸರತ್ತು ನಡೆಸಿ ರಂಜಿಸಿದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Modi Meets Celebrities: ನರೇಂದ್ರ ಮೋದಿ ಭೇಟಿ ನಂತರ ಯಶ್, ರಿಷಭ್ ಶೆಟ್ಟಿ, ಅನಿಲ್ ಕುಂಬ್ಳೆ, ಮನೀಶ್ ಪಾಂಡೆ, ಅಯ್ಯೋ ಶ್ರದ್ಧಾ ಹೇಳಿದ್ದೇನು?
ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟಿಸುವ ಮುನ್ನಾದಿನ ಭಾನುವಾರ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಸಂಜೆ ರಾಜಭವನದಲ್ಲಿ ನಾಡಿನ ಕ್ರಿಕೆಟಿಗರು, ಯುವ ಉದ್ಯಮಿಗಳು ಹಾಗೂ ಚಿತ್ರನಟರೊಂದಿಗೆ ಔತಣಕೂಟ ಏರ್ಪಡಿಸಿದ್ದರು(Modi Meets Celebrities). ಭೇಟಿ ನಂತರ ಎಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Modi In Karnataka: ಶ್ರದ್ಧಾ ಎದುರಾದ ಕೂಡಲೆ ಮೋದಿ ಹೇಳಿದ ಮೊದಲ ಶಬ್ದ ʼಅಯ್ಯೋʼ!: ಯಶ್, ರಿಷಭ್, ಅಶ್ವಿನಿ, ವಿಜಯ್ ಭೇಟಿಯಾದ ಪ್ರಧಾನಿ
4. Murugha Seer: ಅತ್ಯಾಚಾರ ನಡೆದಿಲ್ಲ, ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ; ಮುರುಘಾ ಶ್ರೀ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಮತ್ತೇನಿದೆ?
ಮುರುಘಾ ಮಠದ ಮುರುಘಾ ಶರಣರ (Murugha Seer) ಮೇಲಿನ ಎರಡನೇ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಜನವರಿ ೧೦ರಂದು ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರತಿ ಲಭ್ಯವಾಗಿದ್ದು, ಆರೋಪಿ, ಸಂತ್ರಸ್ತೆಯರ ಹೇಳಿಕೆಯ ಜತೆಗೆ ವೈದ್ಯಕೀಯ ವರದಿಯನ್ನೂ ಉಲ್ಲೇಖಿಸಲಾಗಿದೆ. ಇದರಲ್ಲಿ ತಾವು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಪ್ರಕರಣದ ಎ೧ ಆರೋಪಿ ಮುರುಘಾ ಶ್ರೀಗಳು ಹೇಳಿಕೆ ನೀಡಿದ್ದರೆ, ಸಂತ್ರಸ್ತೆಯರು ಸುಳ್ಳು ಆರೋಪ ಮಾಡಿದ್ದು, ನಾನು ಶ್ರೀಗಳ ಕೊಠಡಿಯನ್ನೇ ನೋಡಿಲ್ಲ ಎಂದು ೨ನೇ ಆರೋಪಿ ವಾರ್ಡನ್ ರಶ್ಮಿ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Bangalore-Mysore Expressway : ಮಾರ್ಚ್‌ನಲ್ಲಿ ಉದ್ಘಾಟನೆ, ಟೋಲ್ ಶುಲ್ಕ 250 ರೂ. ಎಂದ ಸಂಸದ ಪ್ರತಾಪ್ ಸಿಂಹ
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ (Bangalore-Mysore Expressway) ಕಾಮಗಾರಿ ಇನ್ನು ಒಂದು ತಿಂಗಳಲ್ಲಿ ಪೂರ್ಣವಾಗಲಿದ್ದು, ಮಾರ್ಚ್ ಎರಡು ಇಲ್ಲವೇ ಮೂರನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುವ ಸಾಧ್ಯತೆಗಳಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಎರಡು ನಗರಗಳ ನಡುವಿನ ಟೋಲ್ ಶುಲ್ಕ ಎಷ್ಟಿರಬಹುದು ಎಂಬ ಬಗ್ಗೆ ಹಲವು ಗೊಂದಲಮಯ ಅಭಿಪ್ರಾಯಗಳು ಕೇಳಿಬಂದಿದ್ದವು. ಅದಕ್ಕೆ ಸ್ಪಷ್ಟನೆ ನೀಡಿರುವ ಅವರು ಟೋಲ್ ದರ ಸುಮಾರು ೨೫೦ ರೂ. ಇರಬಹುದು ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Mahadayi Project : ಗೋವಾದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಮಹದಾಯಿ ನದಿ ನೀರಿನ ಯೋಜನೆಗೆ (Mahadayi Project) ಸಂಬಂಧಿಸಿದಂತೆ ಗೋವಾ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ಸಲ್ಲಿಸಿದ್ದ ಯೋಜನೆಯ ವಿಸ್ತೃತ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಗೋವಾ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್‌ನ ಮೆಟ್ಟಿಲೇರಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Karnataka Election: ಸ್ತ್ರೀ ಶಕ್ತಿ ಸಂಘಗಳಿಗೆ ಸಿದ್ದರಾಮಯ್ಯ ಬಂಪರ್ ಆಫರ್, ರೈತರಿಗೆ 5 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಭರವಸೆ
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘಗಳಿಗೆ ಈಗ ಕೊಡುತ್ತಿರುವ ಬಡ್ಡಿ ರಹಿತ ಸಾಲದ ಪ್ರಮಾಣವನ್ನು 50 ಸಾವಿರ ರೂ.ಗಳಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಸಕಾಲದಲ್ಲಿ ಮರುಪಾವತಿಸಿದ ಸಂಘಗಳ ಉಳಿಕೆ ಕಂತು ರದ್ದು ಮಾಡಲಾಗುತ್ತದೆ. ರೈತರಿಗೆ 5 ಲಕ್ಷ ರೂಪಾಯಿಯ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಹಾಗೆಯೇ ರೈತರಿಗೆ ಶೇ. 3ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿವರೆಗೆ ಸಿಗುತ್ತಿರುವ ಸಾಲದ ಪ್ರಮಾಣವನ್ನು ಹಂತ ಹಂತವಾಗಿ 20 ಲಕ್ಷ ರೂಪಾಯಿಗೆ ಹೆಚ್ಚಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Karnataka Election : ಪುತ್ತೂರಿನಿಂದ SDPI ಅಭ್ಯರ್ಥಿ ಘೋಷಣೆ; ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿ ಶಾಫಿ ಬೆಳ್ಳಾರೆ ಜೈಲಿನಿಂದಲೇ ಸ್ಪರ್ಧೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ಅದರ ರಾಜಕೀಯ ಮುಖವಾಗಿರುವ ಎಸ್‌ಡಿಪಿಐಯ ಭವಿಷ್ಯದ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಎಸ್‌ಡಿಪಿಐ ವಿಧಾನಸಭಾ ಚುನಾವಣೆಯ(Karnataka Election) ಬಗ್ಗೆ ಸಮಗ್ರ ಚರ್ಚೆ ನಡೆಸಿ ಪುತ್ತೂರಿನಿಂದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ, ಪ್ರಸಕ್ತ ಜೈಲಿನಲ್ಲಿರುವ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Tiger attack: ಕೊಡಗಿನಲ್ಲಿ ಮತ್ತೆ ನರಹಂತಕ ವ್ಯಾಘ್ರನ ಆರ್ಭಟ, ಎರಡು ಬಲಿ
ಮಡಿಕೇರಿ ಸಮೀಪಪ ಪೊನ್ನಂಪೇಟೆಯಲ್ಲಿ ಬಾಲಕನೊಬ್ಬನನ್ನು ಹುಲಿ ಕೊಂದು ಹಾಕಿದ ಮರುದಿನವೇ, ಬೆಳ್ಳಂಬೆಳಗ್ಗೆ ಮತ್ತೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಗೆ ರಾಜು(72) ಎಂಬವರು ಮೃತಪಟ್ಟಿದ್ದಾರೆ. ಮೂಲತಃ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿಯ ನಿವಾಸಿಯಾದ ರಾಜು ಬಾಡಗ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಪೂಣಚ್ಚ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಬಾಲಕನನ್ನು ಕೊಂದಿದ್ದ ತೋಟದಲ್ಲಿಯೇ ವೃದ್ಧನನ್ನೂ ಹುಲಿ ಕೊಂದು ಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Traffic Rules : ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡ 50% ಕಡಿತ ಆಫರ್ ಫೆಬ್ರವರಿ 28ರವರೆಗೆ ವಿಸ್ತರಣೆ, ನಾಳೆ ಆದೇಶ
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. ೫೦ರ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಿದ ಆಫರನ್ನು ಫೆಬ್ರವರಿ ೨೮ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಬಗ್ಗೆ ಮಂಗಳವಾರ ಆದೇಶ ಹೊರಡಿಸುವ ನಿರೀಕ್ಷೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.