Site icon Vistara News

ವಿಸ್ತಾರ TOP 10 NEWS : ಜೆಡಿಎಸ್‌ ವಿರುದ್ಧ ಅಮಿತ್‌ ಶಾ ವಾಗ್ದಾಳಿ, ವಾಯುಸೇನೆ ವಿಮಾನ ಪತನ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

vistara-top-10-news-Amit shah lashes out over JDS to IAF copter crash and more news of the day

#image_title

1. Janasankalpa Yatre : ಜೆಡಿಎಸ್‌ಗೆ ನೀಡುವ ಪ್ರತಿ ಮತವೂ ಕಾಂಗ್ರೆಸನ್ನು ಗೆಲ್ಲಿಸುತ್ತದೆ: ಬಿಜೆಪಿಗೇ ಮತ ನೀಡಿ ಎಂದು ಕರೆ ನೀಡಿದ ಅಮಿತ್‌ ಶಾ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ನೋಡಲು ಪ್ರತ್ಯೇಕವಾಗಿ ಕಂಡರೂ, ಜೆಡಿಎಸ್‌ಗೆ ನೀಡುವ ಪ್ರತಿ ಮತವೂ ಕಾಂಗ್ರೆಸ್‌ ಪಕ್ಷದ ಗೆಲುವಿಗೇ ಕಾರಣವಾಗುತ್ತದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ತಿಳಿಸಿದರು. ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ (Janasankalpa Yatre) ಭಾಗವಹಿಸಿ ಅಮಿತ್‌ ಶಾ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Amit Shah : ಕಾಂಗ್ರೆಸ್‌ ಹಿಡಿತದಲ್ಲಿರುವ ಕುಂದಗೋಳದಲ್ಲಿ ಅಮಿತ್‌ ಶಾ ರೋಡ್‌ ಶೋ: ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ

2. Amit Shah : 6 ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯ ಅಪರಾಧಕ್ಕೆ ಫೊರೆನ್ಸಿಕ್‌ ಸಾಕ್ಷಿ ಕಡ್ಡಾಯ: ಬೆಳಗಾವಿಯಲ್ಲಿ ಅಮಿತ್‌ ಶಾ ಹೇಳಿಕೆ
ಆರು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧ ಪ್ರಕರಣಗಳಿಗೆ ವಿಧಿವಿಜ್ಞಾನ ಸಾಕ್ಷಿಗಳನ್ನು (ಫೊರೆನ್ಸಿಕ್‌ ಎವಿಡೆನ್ಸ್‌) ಕಡ್ಡಾಯ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಹುದೊಡ್ಡ ಪ್ರಮಾಣದ ಮಾನವ ಸಂಪನ್ಮೂಲದ ಅವಶ್ಯಕತೆಯಿದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸೊಸೈಟಿಯ ಬಿವಿಬಿ ಇಂಜಿನಿಯರಿಂಗ್‌ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Sonam Wangchuk: 3 ಈಡಿಯಟ್ಸ್‌ ಸಿನಿಮಾಗೆ ಸ್ಫೂರ್ತಿಯಾದ ಸೋನಂ ವಾಂಗ್ಚುಕ್‌ ಗೃಹಬಂಧನ, ಏನಿದಕ್ಕೆ ಕಾರಣ?
ತ್ರೀ ಈಡಿಯಟ್ಸ್‌ (3 Idiots) ಸಿನಿಮಾ ನೋಡಿದವರಿಗೆ ಫುನ್ಸುಕ್‌ ವಾಂಗ್ಡು (ಆಮೀರ್‌ ಖಾನ್‌) ಪಾತ್ರ ನೆನಪಿರುತ್ತದೆ. ಹಾಗೆಯೇ, ಆಲ್‌ ಈಸ್‌ ವೆಲ್‌ (All Is Well) ಎಂಬ ಡೈಲಾಗ್‌ ಕೂಡ ಮನಸ್ಸಿನಲ್ಲಿ ಉಳಿದಿರುತ್ತದೆ. ಯಾವ ತ್ರೀ ಈಡಿಯಟ್ಸ್‌ ಸಿನಿಮಾದ ಫುನ್ಸುಕ್‌ ವಾಂಗ್ಡು ಪಾತ್ರಕ್ಕೆ ಸ್ಫೂರ್ತಿಯಾಗಿದ್ದರೋ, ಲಡಾಕ್‌ನಲ್ಲಿ ಶಿಕ್ಷಣ, ಪರಿಸರ ಪ್ರಜ್ಞೆ ಮೂಡಿಸುತ್ತಿದ್ದಾರೋ ಆ ಸೋನಂ ವಾಗ್ಚುಕ್‌ ಅವರೀಗ ಆಲ್‌ ಈಸ್‌ ನಾಟ್‌ ವೆಲ್‌ ಇನ್‌ ಲಡಾಕ್‌ ಎನ್ನುತ್ತಿದ್ದಾರೆ. ಅಲ್ಲದೆ, ಇವರ ಮೇಲೆ ಜಮ್ಮು-ಕಾಶ್ಮೀರ ಆಡಳಿತವು ಅಧಿಕಾರದ ಗುರಾಣಿ ಬಳಸಿದ್ದು, ಗೃಹಬಂಧನದಲ್ಲಿರಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. IAF Fighter Jets Crash: ಪತನವಾಗಿದ್ದು ಮೂರಲ್ಲ, ಎರಡು ಯುದ್ಧ ವಿಮಾನಗಳು; ಒಬ್ಬ ಪೈಲೆಟ್​ ಸಾವು
 ಮಧ್ಯಪ್ರದೇಶದ ಮೊರೆನಾ ಬಳಿ ವಾಯುಪಡೆಯ ಎರಡು ಯುದ್ಧ ವಿಮಾನಗಳು ಮತ್ತು ರಾಜಸ್ಥಾನದ ಭರತ್​ಪುರದಲ್ಲಿ ಒಂದು ಚಾರ್ಟರ್ಡ್​ ವಿಮಾನ ಸೇರಿ ಒಟ್ಟು ಮೂರು ವಿಮಾನಗಳು ಪತನ (Plane Crashes)ಗೊಂಡಿವೆ ಎಂದು ಹೇಳಲಾಗಿತ್ತು. ಆದರೆ ಈಗ ಸ್ಪಷ್ಟ ಮಾಹಿತಿ ಬಂದಿದ್ದು, ಅಪಘಾತಕ್ಕೀಡಾಗಿದ್ದು ಮೂರು ವಿಮಾನಗಳಲ್ಲ, ಎರಡೇ ವಿಮಾನ ಮತ್ತು ಇವೆರಡೂ ಭಾರತೀಯ ವಾಯುಸೇನೆಯ ಫೈಟರ್​ ಜೆಟ್​​ಗಳು ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಈಗ ಒಬ್ಬ ಪೈಲೆಟ್​ ಮೃತಪಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?
ನನಗೆ ಯಾವುದೋ ಪಕ್ಷ ಬಿಟ್ಟಿಯಾಗಿ ಏನನ್ನೋ ಕೊಡುತ್ತದೆ ಎಂದರೆ ಅದು ನನ್ನ ಅಭಿವೃದ್ಧಿಯೇ? ಅಥವಾ ನನ್ನ ಮಕ್ಕಳಿಗೆ ಕೆಲಸ ಕೊಟ್ಟರೆ ಅಭಿವೃದ್ಧಿಯೇ? ಎಂದು ಆಲೋಚಿಸುವ ಸಂಯಮವನ್ನು ಸಮಾಜವೇ ಬೆಳೆಸಿಕೊಳ್ಳಬೇಕಿದೆ. ಅಭಿವೃದ್ಧಿಗೆ ಭಾರತೀಯ ಮಾದರಿಗಳನ್ನು ಇನ್ನಷ್ಟು ಅಧ್ಯಯನ ನಡೆಸುವ, ವಿಕಸಿತಗೊಳಿಸುವ ಕಾರ್ಯವನ್ನು ಮಾಡಬೇಕಿದೆ. ಅಂಕಣ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. Mughal Garden: ರಾಷ್ಟ್ರಪತಿ ಭವನದ ಮೊಘಲ್​ ಗಾರ್ಡನ್​ ಹೆಸರು ಬದಲಿಸಿದ ಕೇಂದ್ರ ಸರ್ಕಾರ; ಅಮೃತ್​ ಉದ್ಯಾನ ಎಂದು ನಾಮಕರಣ
ದೆಹಲಿ ರಾಷ್ಟ್ರಪತಿ ಭವನದ ಆವರಣದೊಳಗೆ ಇರುವ ಉದ್ಯಾನವನದ ಹೆಸರನ್ನು ಕೇಂದ್ರ ಸರ್ಕಾರ ಬದಲಿಸಿದೆ. ಈಗಾಗಲೇ ಹಲವು ಮಹತ್ವದ ಸ್ಥಳಗಳಿಗೆ ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರ ಈಗ ರಾಷ್ಟ್ರಪತಿ ಭವನದ ‘ಮೊಘಲ್​ ಗಾರ್ಡನ್​’ (Mughal Garden) ಹೆಸರನ್ನು ‘ಅಮೃತ್​ ಉದ್ಯಾನ (Amrit Udyan)’ ಎಂದು ಬದಲಿಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್​ ಮಹೋತ್ಸವ್’ ಪರಿಕಲ್ಪನೆಯಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕೇಂದ್ರ ಸರ್ಕಾರ ಈಗ, ಈ ಅಭಿಯಾನದ ಭಾಗವಾಗಿ ಮೊಘಲ್​ ಗಾರ್ಡನ್​ ಹೆಸರನ್ನು ತೆಗೆದು, ‘ಅಮೃತ್​ ಉದ್ಯಾನ’ ಎಂದು ಮರುನಾಮಕರಣ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮಹಾರಾಷ್ಟ್ರದಲ್ಲಿ ವಿವಾದ ಎಬ್ಬಿಸಿದ ಟಿಪ್ಪು; ಉದ್ಯಾನವನಕ್ಕೆ ಇಡಲಾಗಿದ್ದ ಶಹೀದ್​ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆಸಿದ ಶಿಂಧೆ ಸರ್ಕಾರ
ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ ಹೆಸರಿನಲ್ಲಿ ಆಗಾಗ ಭುಗಿಲೇಳುವ ವಿವಾದ ಈಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರದ ಶಿವಸೇನೆ ಏಕನಾಥ್​ ಶಿಂಧೆ- ಬಿಜೆಪಿ ದೇವೇಂದ್ರ ಫಡ್ನವೀಸ್​ ಸರ್ಕಾರ ಮುಂಬಯಿಯ ಮಲಾಡ್​ ಪ್ರದೇಶದಲ್ಲಿರುವ ಉದ್ಯಾನವನವೊಂದಕ್ಕೆ ಇಡಲಾಗಿದ್ದ ಟಿಪ್ಪು ಸುಲ್ತಾನ್​ ಹೆಸರನ್ನು ತೆಗೆದು ಹಾಕಿದೆ. ಈ ಹಿಂದೆ ಇದ್ದ ಎನ್​ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದು, ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಈ ಉದ್ಯಾನವನಕ್ಕೆ ‘ಟಿಪ್ಪು ಸುಲ್ತಾನ್​’ ಹೆಸರನ್ನು ಇಡಲಾಗಿತ್ತು. ಇದೀಗ ಟಿಪ್ಪು ಹೆಸರನ್ನು ತೆಗೆಯುತ್ತಿದ್ದಂತೆ, ಶಿವಸೇನೆಯ ಉದ್ಧವ್​ ಠಾಕ್ರೆ ಬಣ, ಕಾಂಗ್ರೆಸ್​ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Karnataka Election: ಹಾಸನಕ್ಕೆ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವುದು ಬಿಡಿ; ಭವಾನಿಯೇ ಅಭ್ಯರ್ಥಿ: ಸೂರಜ್‌ ರೇವಣ್ಣ
ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜಕೀಯ ಅಖಾಡ ಸಿದ್ಧಗೊಳ್ಳುತ್ತಿದೆ. ಸದ್ಯ ಹಾಸನ ವಿಧಾನಸಭಾ ಕ್ಷೇತ್ರ ರಾಜ್ಯದ ಜನತೆಯ ಗಮನ ಸೆಳೆಯುತ್ತಿದೆ. ಜೆಡಿಎಸ್‌ ಕುಟುಂಬ ರಾಜಕಾರಣದ ತಿಕ್ಕಾಟ ಬೀದಿಗೆ ಬಂದಿದೆ. ಎಲ್ಲವನ್ನೂ ಬಗೆಹರಿಸುತ್ತೇನೆ, ಅಲ್ಲಿಯವರೆಗೆ ಮೌನವಾಗಿರಿ ಎಂಬ ಸೂಚನೆಯನ್ನು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ನೀಡಿದ್ದರೂ ಅಸಮಾಧಾನ ಸ್ಫೋಟಗೊಳ್ಳುವುದು ಮಾತ್ರ ನಿಂತಿಲ್ಲ. ಹಾಸನ ಜೆಡಿಎಸ್‌ ಟಿಕೆಟ್‌ ವಿಷಯವಾಗಿ ರೇವಣ್ಣ ಹಾಗೂ ಪತ್ನಿ ಭವಾನಿ ಮೌನವಾಗಿದ್ದರೂ ಈಗ ಅವರ ಪುತ್ರ ಸೂರಜ್‌ ರೇವಣ್ಣ ಕಿಡಿಕಾರಿದ್ದು, ಭವಾನಿ ರೇವಣ್ಣ ಅವರೇ ಅಭ್ಯರ್ಥಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇನೆ ಎಂಬುದನ್ನು ಬಿಟ್ಟುಬಿಡಬೇಕು. ರೇವಣ್ಣ ಅವರೇ ಫೈನಲ್‌ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election: ಹಾಸನ ಜೆಡಿಎಸ್‌ ಟಿಕೆಟ್‌ಗೆ ಭವಾನಿ-ಸ್ವರೂಪ್‌ ಪೈಪೋಟಿ; ಕಾರ್ಯಕರ್ತರಲ್ಲಿ ಇಬ್ಬಣ

9. Prajadhwani : ಯಾರಿಗೇ ಟಿಕೆಟ್‌ ಕೊಟ್ಟರೂ ಕೆಲಸ ಮಾಡಿ; ಕೈತಪ್ಪಿದವರಿಗೆ MLC, ನಿಗಮ ಮಂಡಳಿ: ಡಿ.ಕೆ. ಶಿವಕುಮಾರ್‌ ಹೇಳಿಕೆ
ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಪಕ್ಷದ ಎಲ್ಲ ಕಾರ್ಯಕರ್ತರು, ನಾಯಕರು ಒಟ್ಟಾಗಿ ಶ್ರಮಿಸಬೇಕು. ಯಾರಿಗೇ ಟಿಕೆಟ್‌ ನೀಡಿದರೂ ಗೆಲ್ಲಿಸಬೇಕು, ಉಳಿದವರಿಗೆ ಎಂಎಲ್‌ಸಿ ಹಾಗೂ ನಿಗಮ ಮಂಡಳಿ ನೇಮಕ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani) ಯಾತ್ರೆ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Karnataka Postal Recruitment 2023 : ನಿಮ್ಮೂರಲ್ಲೇ ಖಾಲಿ ಇರಬಹುದು ಜಿಡಿಎಸ್‌ ಹುದ್ದೆ; ನೋಡುವುದು ಹೇಗೆ ಗೊತ್ತೇ?
ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ಖಾಲಿ ಇರುವ 40,889 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ (India Post GDS Recruitment 2023) ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ (karnataka postal circle recruitment 2023) 3,036 ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version